ಅಪರಾಧ

ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ

ಬೈಲಹೊಂಗಲ prajakiran.com : ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಪಟ್ಟಣದ ಚನ್ನಮ್ಮ 1ನೇ ಕ್ರಾಸ್ ನಲ್ಲಿ ಮಂಗಳವಾರ ನಡೆದಿದೆ. ಪತಿ ಗುರುನಾಥ ನಾರಾಯಣ ತಾವರೆ (45), ಈತನ ಪತ್ನಿ ಮೀನಾಕ್ಷಿ ನಾರಾಯಣ ತಾವರೆ( 32) ಆತ್ಮಹತ್ಯೆಗೆ ಶರಣಾದ ದುರ್ದೈವಿ ದಂಪತಿಗಳು. ಘಟನೆ ಹಿನ್ನೆಲೆ: ಶಿಕ್ಷಕ ಗುರುನಾಥ ತಾವರೆ ಮೂಲತಃ ಖಾನಾಪೂರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಅಮಟೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ  ವಿಷಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಬೆಳಗಾವಿಯ ಮೀನಾಕ್ಷಿ ಜೊತೆ ಕಳೆದ 13 ವರ್ಷಗಳ ಹಿಂದೆ […]

ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ 38 ಕೊರೊನಾ ಪಾಸಿಟಿವ್ : ಮುಂದುವರೆದ ಮಹಾಮಾರಿ ಅಟ್ಟಹಾಸ

ಬೆಳಗಾವಿ  prajakiran.com : ಕುಂದಾನಗರಿ ಬೆಳಗಾವಿಯಲ್ಲಿ ಮಹಾಮಾರಿ ಕರೊನಾ ಅಟ್ಟಹಾಸ ಮುಂದುವರೆದಿದೆ. ಭಾನುವಾರ ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 38 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಕೋರೊನಾ ಸೋಂಕಿತರ ಸಂಖ್ಯೆ301ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೂ 151 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಸದ್ಯ ಸಕ್ರಿಯ  ಪ್ರಕರಣ 149 ಇವೆ. ಬೆಳಗಾವಿಯಲ್ಲಿ ಮತ್ತೆ ಕರೋನ ರಣಕೇಕೆ ಮುಂದುವರೆದಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಇವತ್ತು ಒಂದೇ ದಿನ 38  ಹೊಸ ಕರೋನ ಪಾಸಿಟಿವ್ ಪ್ರಕರಣ […]

ರಾಜ್ಯ

ವೇದಿಕೆ ಹಂಚಿಕೊಂಡರೂ ಮುಖ ಸಿಂಡರಿಸಿಕೊಂಡ ಸಚಿವ-ಶಾಸಕಿ

ಬೆಳಗಾವಿ prajakiran.com  :  ಕುಂದಾನಗರಿ ಬೆಳಗಾವಿ ರಾಜಕಾರಣದ ಕೇಂದ್ರ ಬಿಂದುಗಳಾದ ಸಚಿವ ರಮೇಶ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶುಕ್ರವಾರ ಒಂದೇ ವೇದಿಕೆ ಹಂಚಿಕೊಂಡರೂ ಇಬ್ಬರು ಪರಸ್ಪರ ಮುಖ ನೋಡದೆ ತಮ್ಮ ಮುಖ ಸಿಂಡರಿಸಿಕೊಂಡು ಕುಳತಿಸಿದ್ದರು.  ಸಚಿವ-ಶಾಸಕಿ ಕುಳಿತ ಭಂಗಿ ಕಂಡು ಎದುರಿಗಿದ್ದ ಜನತೆ, ಹಿಂಬಾಲಕರು, ಬೆಂಬಲಿಗರು ಹಾಗೂ ವಿಶೇಷವಾಗಿ ಅಧಿಕಾರಿಗಳು ಮುಸಿ ಮುಸಿ ನಗುತ್ತಿದ್ದರು. ನಮ್ಮ  ಅಕ್ಕ ಮತ್ತು ಸಾಹುಕಾರ ನಾನು ಒಂದು ತೀರಾ ನೀನು ಒಂದು ತೀರಾ…ಕಥೆ.. ಎಂಬಂತಾಗಿದೆ […]

ರಾಜ್ಯ

ಸಚಿವ ರಮೇಶ ಜಾರಕಿಹೊಳಿಗೆ ಮೆಂಟಲ್ ಎಂದ ಕೆಪಿಸಿಸಿ ಅಧ್ಯಕ್ಷ….!

ಬೆಂಗಳೂರು prajakiran.com : ಯಾರೋ ಮೆಂಟಲ್ ಗಳಿದ್ದಾರೆ. 20, 30, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳ್ತಾರೆ ಎಂದು ಸಚಿವ ರಮೇಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿ ಖಡಕ್ ಆಗಿ ಟಾಂಗ್ ನೀಡಿದ್ದು, ಯಾವ್ಯಾವ ಸಚಿವರು ಏನೇನೂ ಹೇಳಿದ್ದಾರೆ ಎಲ್ಲವೂ ಗೊತ್ತು ಎಂದು ಕುಟಕಿದ್ದಾರೆ. ನಿನ್ನೇ ರಾತ್ರಿ ಯಾವ ಹೋಟೆಲ್ ನಲ್ಲಿ ಶಾಸಕರು ಸೇರಿದ್ದರು. ಅಲ್ಲಿ  ಏನೂ ನಡೆದಿದೆ ಎಂಬುದನ್ನು ನಾನು […]

ರಾಜ್ಯ

ಸಚಿವ ಜಗದೀಶ ಶೆಟ್ಟರ್ ಭೇಟಿ ಮಾಡಿದ ಕತ್ತಿ ಸಹೋದರರು

ಬೆಂಗಳೂರು prajakiran.com : ರಾಜ್ಯಸಭೆ ಟಿಕೇಟ್ ಗಾಗಿ ಲಾಭಿ ಜೋರಾಗಿದ್ದು, ಸಚಿವ ಜಗದೀಶ ಶೆಟ್ಟರ್ ಅವರನ್ನು ಕತ್ತಿ ಸಹೋದರರು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ ನಾಳೆ ಜೂನ್ 6ರಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದರಲ್ಲಿ ತಮ್ಮ ಸಹೋದರ ರಮೇಶ ಕತ್ತಿ ಹೆಸರು ಶಿಫಾರಸ್ಸು ಮಾಡಲು ಮಾಜಿ ಸಚಿವ ಉಮೇಶ ಕತ್ತಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಸಭಾ ಟಿಕೇಟ್ ಗಿಟ್ಟಿಸಲು ಉಮೇಶ […]

ರಾಜ್ಯ

ಜಗದೀಶ ಶೆಟ್ಟರ್ ಬಳಿಯಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಪಾಲು

ಬೆಂಗಳೂರು prajakiran.com : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಅವರ ಬದಲಾವಣೆಯ ಕೂಗು ಕೇಳಿ ಬಂದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಬದಲಾಗಿದೆ. ಕಳೆದ ಹಲವು ತಿಂಗಳಿಂದ ಜಗದೀಶ ಶೆಟ್ಟರ್ ಅವರ ಕಡೆಯಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಇದೀಗ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪಾಲಾಗಿದೆ. ಆ ಮೂಲಕ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲಾ ರಾಜಕಾರಣಕ್ಕೆ ಚುರುಕು ಮುಟ್ಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಶಾಸಕ ಉಮೇಶ ಕತ್ತಿ ಬಂಡಾಯವೆದ್ದ ಬೆನ್ನಲ್ಲೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಉತ್ತರಕರ್ನಾಟಕ […]

ರಾಜ್ಯ

ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ ಇಲ್ಲ ಎಂದ ಕೋರೆ

ಬೆಳಗಾವಿ prajakiran.com : ಯಾವುದೇ ಚುನಾವಣೆ ನಡೆದರೂ ದೊಡ್ಡ ಪಕ್ಷದಲ್ಲಿ ಟಿಕೆಟ್‍ಗಾಗಿ ಆಕಾಂಕ್ಷಿಗಳಿರುವುದು ಸಹಜ. ಟಿಕೆಟ್ ಕೇಳುವುದು ತಪ್ಪಲ್ಲ, ಅಷ್ಟಕ್ಕೂ ಇನ್ನೂ ರಾಜ್ಯ ಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದರು. ಅವರು ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಹೇಳಿಕೆ ನೀಡಿದರು. ಟಿಕೆಟ್ ವಿಷಯದಲ್ಲಿ ಪಕ್ಷ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತದೆ. ಉಮೇಶ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು. ಅದು ಪಕ್ಷದಲ್ಲಿ ಭಿನ್ನಮತ ಅಲ್ಲ ಎಂದು […]

ರಾಜ್ಯ

ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಸುರಿದ ಮಳೆ : ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಒಬ್ಬನಿಗೆ ಗಾಯ

ಧಾರವಾಡ/ಬೆಳಗಾವಿ prajakiran.com : ಭಾನುವಾರ ಸಂಜೆ ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಎರಡು ಜಿಲ್ಲೆಗಳಲ್ಲಿ ಜನಜೀವನ ಕೆಲ ಕಾಲಅಸ್ತವ್ಯಸ್ತಗೊಂಡಿತು. ಕುಂದಾನಗರಿ ಬೆಳಗಾವಿ ಹಾಗೂ ಧಾರವಾಡದಲ್ಲಿ ಕೆಲಮನೆಗಳಿಗೆ ನೀರು ನುಗ್ಗಿದೆ. ಮಳೆ ಆರ್ಭಟಕ್ಕೆ ತಗ್ಗು ಪ್ರದೇಶದ ಜನರು ತತ್ತರಗೊಂಡಿದ್ದಾರೆ. ಬೆಳಗಾವಿಯ ಶಾಹು‌ನಗರದ ಕೆಲ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಜನತೆ ಪರದಾಡಬೇಕಾಯಿತು. ಅಲ್ಲದೆ, ಮಳೆ ನೀರು ನುಗ್ಗಿದ್ದರಿಂದ ಅದನ್ನು ಹೊರ ಹಾಕಲು ಹರ ಸಾಹಸ ಮಾಡಿದರು. ಇನ್ನೂ ಬೆಳಗಾವಿಯ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇದರಿಂದ ಒಬ್ಬರಿಗೆ […]

ಅಪರಾಧ

ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರ ದಾರುಣ ಸಾವು : ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್

ಬೆಳಗಾವಿ prajakiran.com :  ಊಟ ಮುಗಿಸಿ ವಾಯು ವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತ ಮಹಿಳೆಯರನ್ನು ಸವಿತಾ ಪಾಟೀಲ್ (45), ವಿದ್ಯಾ ಪಾಟೀಲ್   (47) ಎಂದು ಗುರುತಿಸಲಾಗಿದೆ. ಶಾಂತಾ ಕೃಷ್ಣ ಚೌಗುಲೆ (55) ಗಾಯಾಳು ಎಂದು ಗುರುತಿಸಲಾಗಿದೆ.  ಮೇ 24ರಂದು ಭಾನುವಾರ ರಾತ್ರಿ 11.30 ಕ್ಕೆ ಮುತಗಾ ಸಮೀಪ ಈ ಅಪಘಾತ ನಡೆದಿದ್ದು, ಬಿಜೆಪಿ ಯುವ ಮೋರ್ಚಾ ಮುಖಂಡ ಯುವರಾಜ […]