ರಾಜ್ಯ

ಘಟಪ್ರಭಾ,ಹಿರಣ್ಯಕೇಶಿ ನದಿ ದಡದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವಿ

ಬೆಳಗಾವಿ prajkiran.com : ಹಿಡಕಲ್ ( ಘಟಪ್ರಭಾ) ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.  

 ಇದರಿಂದಾಗಿ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿದ್ದು, ಜಲಾಶಯದ ಗರಿಷ್ಠ ಮಟ್ಟ 2175 ಅಡಿಗಳು ಇದ್ದು, ಆಗಸ್ಟ್ 8 ಶನಿವಾರರಂದು ಮುಂಜಾನೆ 8.30 ಕ್ಕೆ ಜಲಾಶಯದ ಮಟ್ಟ 2163.33 ಅಡಿಗಳು ಇದ್ದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ 46749 ಕ್ಯೂಸೆಕ್ಸ್ ಇದೆ.

ಇದೇ ರೀತಿ ಒಳಹರಿವಿನ ಪ್ರಮಾಣ ಮುಂದುವರೆದರೆ ಜಲಾಶಯದ ಕ್ರಷ್ಟ ಗೇಟುಗಳ ಮೂಲಕ ಘಟಪ್ರಭಾ ನದಿಗೆ ಆಗಸ್ಟ್ 9ರಂದು 5000 ಕ್ಯೂಸೆಕ್ಸ್ ನೀರು ಬಿಡಬಹುದಾಗಿದೆ.

ಆದ್ದರಿಂದ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಇಂಗಳಗಿ, ಲೇಬರ್ ಕ್ಯಾಂಪ್, ಶಿಂಧೀಹಟ್ಟಿ,  ನಿರ್ವಾನಹಟ್ಟಿ,  ನದಿಗುಡಿಕೇತರ, ಘೋಡಗೇರಿ, ಶಿವಾಪೂರ, ಸುಲ್ತಾನಪೂರ, ನೋಗಿನಹಾಳ, ಅವರಗೊಳ,ಕೊಟಬಾಗಿ, ಗುಡಸ, ಜಂಗಟಿಹಾಳ, ಶಿರಢಾಣ,ನಂದಗಾವ, ಮತ್ನಾಳ, ಖಾನಾಪೂರ, ಸಾವಳಗಿ, ಧೂಪಧಾಳ   ಗ್ರಾಮಗಳ ಗ್ರಾಮಸ್ಥರು ತಮ್ಮ ಜಾನುವಾರುಗಳ ಸಮೇತ ನದಿಯ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *