ಕ್ರೀಡೆ

ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಇನ್ನಿಲ್ಲ

ನವದೆಹಲಿ prajakiran.com : ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ(66) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಯಶ್‌ಪಾಲ್ ಶರ್ಮಾ ಅವರು ಪತ್ನಿ ರೇಣು ಶರ್ಮಾ, ಮಕ್ಕಳಾದ ಪೂಜಾ, ಪ್ರೀತಿ ಹಾಗೂ ಚಿರಾಗ್‌ರನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 7:30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 1983ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಯಶ್ ಪಾಲ್ ಶರ್ಮಾ ಆಡಿದ್ದರು. ಈ ಸಂದರ್ಭದಲ್ಲಿಯೇ ಮೊದಲ ಬಾರಿಗೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆಲುವನ್ನು ಸಾಧಿಸಿತ್ತು. ಬಿಸಿಸಿಐ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. Share on: […]

ಕ್ರೀಡೆ

ವಿಶ್ವದಾಖಲೆ ಬರೆದ ಮಹಿಳಾ ಕ್ರಿಕೇಟರ್ ಮಿಥಾಲಿ ರಾಜ್

ನವದೆಹಲಿ prajakiran.com : ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಭಾರತದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ರನ್ನು ದಾಖಲೆ ಹಿಂದಿಕ್ಕಿ ಮಿಥಾಲಿ ರಾಜ್ ವಿಶ್ವದಾಖಲೆ ಬರೆದಿದ್ದಾರೆ. ಎಡ್ವರ್ಡ್ಸ್ ಎಲ್ಲಾ ಆವೃತ್ತಿ ಸೇರಿ ಒಟ್ಟಾರೆ 10,273 ರನ್ ಗಳಿಸಿದ್ರು. ಇವರನ್ನು ಹಿಂದಿಕ್ಕಲು ಮಿಥಾಲಿ ಅವರಿಗೆ ಕೇವಲ 12 ರನ್ […]

ಕ್ರೀಡೆ

ವಿಂಬಲ್ಡನ್‌ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಗೆದ್ದ ರೋಹನ್‌ ಬೋಪಣ್ಣ, ಸಾನಿಯಾ ಮಿರ್ಜಾ ಜೋಡಿ

ನವದೆಹಲಿ prajakiran.com : ವಿಂಬಲ್ಡನ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ನಡೆದ ಸರ್ವ ಭಾರತೀಯರ ಪಂದ್ಯದಲ್ಲಿ ರೋಹನ್‌ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ರಾಮಕುಮಾರ್‌ ರಾಮನಾಥನ್‌ ಮತ್ತು ಅಂಕಿತಾ ರೈನಾ ವಿರುದ್ಧ ಎರಡನೇ ಸುತ್ತಿಗೆ ಆಯ್ಕೆಯಾದರು. ಗ್ರ್ಯಾನ್ ಸ್ಲಾಮ್‌ನ ಮಿಶ್ರ ಡಬಲ್ಸ್‌ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ಎರಡು ಭಾರತೀಯ ತಂಡಗಳು ಮುಖಾಮುಖಿಯಾಗಿವೆ. ಸಾನಿಯಾ ಹಾಗೂ ಬೋಪಣ್ಣ ಜೋಡಿ, 6-2, 7-6(5) ಸೆಟ್‌ಗಳಲ್ಲಿ ಸುಲಭವಾಗಿ ಜಯಗಳಿಸಿದೆ. ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ […]

ಕ್ರೀಡೆ

ಬಿಸಿಸಿಐ : ಟಿ 20 ವಿಶ್ವಕಪ್‌ ಯುಎಇಗೆ ಸ್ಥಳಾಂತರ

ಮುಂಬೈ prajakiran.com : ಕೊರೋನಾ ಭೀತಿ ಹಿನ್ನೆಲೆ ಈ ವರ್ಷದ ಟಿ20 ವಿಶ್ವಕಪ್‌ನ್ನು ಯುಎಇಗೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ. ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್​ ಕೂಡಾ ದುಬೈನಲ್ಲಿ ನಡೆಯಲಿದೆ ಎಂದು ಈ ಹಿಂದೆ ಬಿಸಿಸಿಐ ಘೋಷಿಸಿತ್ತು. ಇದೀಗ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ತೀರ್ಮಾನಿಸಿದೆ. ಟಿ20 ವಿಶ್ವಕಪ್ ನ್ನು ಯುಎಇಗೆ ಸ್ಥಳಾಂತಸುತ್ತಿದ್ದೇವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದ್ದೇವೆ. ದಿನಾಂಕಗಳನ್ನು ಐಸಿಸಿ […]

ಕ್ರೀಡೆ

ಸ್ಟೇಡಿಯಂನಲ್ಲಿ ಮಿಲ್ಖಾ ಸಿಂಗ್ ಬದಲು ಫರಾನ್ ಅಕ್ತರ್ ಫೋಟೊ

ನೋಯ್ಡಾ prajakiran.com : ಭಾರತದ ಅಥ್ಲೀಟ್ ದಿಗ್ಗಜ ಮಿಲ್ಖಾ ಸಿಂಗ್ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದು, ಇದೀಗ ಮಿಲ್ಕಾ ಸಿಂಗ್ ಅವರ ಫೋಟೋ ಬದಲು ಫರಾನ್ ಅಕ್ತರ್ ಅವರ ಫೋಟೋ ಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮಿಲ್ಖಾ ಸಿಂಗ್ ಅವರ ಆತ್ಮಕತೆ ಆಧಾರಿತ ಸಿನಿಮಾ ‘ಭಾಗ್ ಮಿಲ್ಖಾ ಭಾಗ್‌’ನಲ್ಲಿ ಫರಾನ್ ಅಕ್ತರ್ ಮಿಲ್ಖಾ ಸಿಂಗ್ ಅವರ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಮಿಲ್ಕಾ ಸಿಂಗ್ ಅವರ ನಿಧನರಾದ ಹಿನ್ನೆಲೆ ನೋಯ್ಡಾದ ಸ್ಟೇಡಿಯಂ ಒಂದರಲ್ಲಿ ಮಿಲ್ಖಾ ಸಿಂಗ್ ಅವರಿಗೆ ಅಂತಿಮ ನಮನ […]

ಕ್ರೀಡೆ

ಕೋವಿಡ್‌ನಿಂದಾಗಿ ಪತ್ನಿ ಅಗಲಿದ ಬೆನ್ನ ಹಿಂದೆಯೇ ಅಥ್ಲೀಟ್ ಮಿಲ್ಕಾಸಿಂಗ್ ಕೂಡ ವಿಧಿವಶ…..!

ದಂತ ಕಥೆ ಮಿಲ್ಕಾಸಿಂಗ್ ಇನ್ನು ನೆನಪು ಮಾತ್ರ….! ಪಂಜಾಬ್ prajakiran.com : ದೇಶದ ಹೆಮ್ಮೆಯ ಅಥ್ಲೆಟಿಕ್ ದಂತಕಥೆ, ‘ಫ್ಲೈಯಿಂಗ್ ಸಿಖ್’ ಎಂದೇ ಖ್ಯಾತಿಹೊಂದಿದ್ದ ಪ್ರಸಿದ್ದ ಓಟಗಾರ( ಅಥ್ಲೀಟ್ ) ಮಿಲ್ಕಾ ಸಿಂಗ್ (91) ಶುಕ್ರವಾರ ತಡರಾತ್ರಿ ವಿಧಿವಶರಾದರು. ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಂಡಿಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಇತ್ತಿಚೆಗೆ […]

ಕ್ರೀಡೆ

ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ವಿರಾಟ್ ಕೋಹ್ಲಿಗೆ 4ನೇ ಸ್ಥಾನ

ನವದೆಹಲಿ prajakiran.com : ಐಸಿಸಿ ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿ ಬಿಡುಗಡೆಯಾಗಿದ್ದು , ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದೆ. ವಿರಾಟ್ 814 ರೇಟಿಂಗ್ ಹೊಂದಿದ್ದು, ಈ ಮೂಲಕ ಬೆಸ್ಟ್ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಲಿ 891 ರೇಟಿಂಗ್ ಮೂಲಕ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಡೆದಿದ್ದಾರೆ. 886 ರೇಟಿಂಗ್ ನ್ಯೂಜಿಲೆಂಡ್ ಕೇನ್ ವಿಯಮ್ಸನ್ ಎರಡನೇ ಸ್ಥಾನ. 878 ರೇಟಿಂಗ್ ಮೂಲಕ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶ್ಚಾಗ್ನೆ […]

ಕ್ರೀಡೆ

ಭಾರತ ತಂಡಕ್ಕೆ ಮತ್ತಿಬ್ಬರು ತರಬೇತುದಾರರ ನೇಮಕ

ನವದೆಹಲಿ prajakiran.com : ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಮತ್ತು ಭಾರತ ಏಕದಿನ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್ ಸರಣಿ ಪಂದ್ಯ ಆರಂಭವಾಗಲಿದ್ದು, ಭಾರತ ತಂಡಕ್ಕೆ ಮತ್ತಿಬ್ಬರು ತರಬೇತುದಾರರನ್ನು ನೇಮಿಸಲಾಗಿದೆ. ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಜತೆಗೆ ಟಿ. ದಿಲೀಪ್‌ ಮತ್ತು ಪಾರಸ್‌ ಮಾಂಬ್ರೆ ಅವರನ್ನು ಆಯ್ಕೆ ಮಾಡಲಾಗಿದ್ದು, ಟಿ. ದಿಲೀಪ್‌ ಫೀಲ್ಡಿಂಗ್‌ ಮತ್ತು ಪಾರಸ್‌ ಮಾಂಬ್ರೆ ಬೌಲಿಂಗ್‌ ಕೋಚ್‌ ಆಗಿರುತ್ತಾರೆ. ಈಗಾಗಲೇ ಬಿಸಿಸಿಐ ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಒಟ್ಟು 20 ಸದಸ್ಯರ ಭಾರತ […]

ಕ್ರೀಡೆ

ಕಿಚ್ಚ ಸುದೀಪ್‌ ಸೇರಿದಂತೆ ಸೆಲೆಬ್ರಿಟಿಗಳ ಜೊತೆ ಚೆಸ್ ಆಡಲಿದ್ದಾರೆ ವಿಶ್ವನಾಥ್ ಆನಂದ್

ಬೆಂಗಳೂರು Prajakiran.com : ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಜೂ.13ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಚೆಸ್ ಆಟವಾಡಲಿದ್ದಾರೆ. ಸಂಜೆ 5ಕ್ಕೆ ಈ ಪಂದ್ಯಗಳು ಆರಂಭವಾಗಲಿದ್ದು, ತಾರೆಯರು, ಉದ್ಯಮಿಗಳೊಂದಿಗೆ ಆನಂದ್ ಆಟವಾಡಲಿದ್ದಾರೆ. ವಿಶೇಷವೆಂದರೆ ಈ ಪಂದ್ಯಗಳಲ್ಲಿ ಬಾಲಿವುಡ್‌ ನಟ‌ ಅಮೀರ್‌ ಖಾನ್‌, ಬಹುಭಾಷಾ ತಾರೆ, ಕರ್ನಾಟಕದ ಖ್ಯಾತ ನಟ ಕಿಚ್ಚ ಸುದೀಪ್‌ ಕೂಡಾ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ನಟ ರೀತೇಶ್‌ ದೇಶಮುಖ್‌, ಗಾಯಕ ಅರಿಜಿತ್‌ ಸಿಂಗ್‌, ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಯಜುವೇಂದ್ರ ಚಹಲ್‌, ಶಿಯೋಮಿ […]

ಕ್ರೀಡೆ

ಕೊರೋನಾ ವಿರುದ್ಧ ಹೋರಾಡಲು ಆರ್ ಸಿ ಬಿ 45 ಕೋಟಿ ನೆರವು

ನವದೆಹಲಿ prajakiran. com : ದೇಶದಲ್ಲಿ ಮಹಾಮಾರಿ ಕೊರೋನಾ ದಿನದಿನಕ್ಕೆ ತನ್ನ ರೂಪ ಬದಲಾಯಿಸುತ್ತ ಜನರ ಪ್ರಾಣ ತೆಗೆಯುತ್ತಲೇ ಇದೆ. ಈ ಹಿನ್ನೆಲೆ ಕೋವಿಡ್ ವಿರುದ್ಧ ಹೋರಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೂಲ ಸಂಸ್ಥೆ ‘ಡಿಯಾಜಿಯೋ’ 45 ಕೋಟಿ ರೂ. ನೆರವು ನೀಡುವುದಾಗಿ ಸಿಇಒ ಆನಂದ್ ಕೃಪಾಲು ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಕಷ್ಟದ ಸಮಯದಲ್ಲಿ ದೇಶದ ಪರವಾಗಿ ನಿಂತು ಕೊರೋನಾ ವಿರುದ್ಧ ಹೋರಾಡಲು ಸಿದ್ಧರಾಗಿದ್ದೇವೆ. ಸರ್ಕಾರ ಕೈಗೊಂಡ […]