ಮುಂಬೈ prajakiran.com : ಕೊರೋನಾ ಭೀತಿ ಹಿನ್ನೆಲೆ ಈ ವರ್ಷದ ಟಿ20 ವಿಶ್ವಕಪ್ನ್ನು ಯುಎಇಗೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್ ಕೂಡಾ ದುಬೈನಲ್ಲಿ ನಡೆಯಲಿದೆ ಎಂದು ಈ ಹಿಂದೆ ಬಿಸಿಸಿಐ ಘೋಷಿಸಿತ್ತು.
ಇದೀಗ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ.
ಟಿ20 ವಿಶ್ವಕಪ್ ನ್ನು ಯುಎಇಗೆ ಸ್ಥಳಾಂತಸುತ್ತಿದ್ದೇವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದ್ದೇವೆ.
ದಿನಾಂಕಗಳನ್ನು ಐಸಿಸಿ ನಿರ್ಧರಿಸುತ್ತದೆ ಎಂದು ಬಿಸಿಸಿಂಐ ಕಾರ್ಯದರ್ಶಿ ಜೇ ಶಾ ತಿಳಿಸಿದ್ದಾರೆ.