ಕ್ರೀಡೆ

ತಾಯಿಯನ್ನು ಕಳೆದುಕೊಂಡ ಮೂರು ದಿನದ ಅಂತರದಲ್ಲಿಯೇ ಕರ್ನಾಟಕ ಕೇಸರಿ ಕೋವಿಡ್ ಗೆ ಬಲಿ

ಮುಧೋಳ prajakiran.com : ತಾಯಿಯನ್ನು ಕಳೆದುಕೊಂಡ ಮೂರು ದಿನದ ಅಂತರದಲ್ಲಿಯೇ ಕರ್ನಾಟಕ ಕೇಸರಿ ಖ್ಯಾತಿಯ ಸಿದ್ದಾಂತ ಮಾನೆ ಕೂಡ ಕೋವಿಡ್ ಗೆ ಬಲಿಯಾಗಿದ್ದಾನೆ. ಕೇವಲ 35 ವಯಸ್ಸಿನ ಈ ಯುವ ಪ್ರತಿಭೆ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ. ಕರ್ನಾಟಕ ಕೇಸರಿ, ದಸರಾ ಕೇಸರಿ ಅಖಿಲ ಭಾರತ ಮಟ್ಟದ ಕುಸ್ತಿಯಲ್ಲಿ ಪದಕ ವಿಜೇತನಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ. ಹಾಗೂ ಪ್ರಸ್ತುತ ಮುಧೋಳ ನಗರ ಸಭೆಯ ಅಧ್ಯಕ್ಷರಾಗಿ ಸಲ್ಲಿಸುತ್ತಿದ್ದ ಸಿದ್ಧಾಂತ ಮಾನೆಯವರು […]

ಕ್ರೀಡೆ

ಕೊಲೆ ಪ್ರಕರಣದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಬಂಧನ : ದೆಹಲಿ ಪೋಲಿಸರಿಂದ ಅಧಿಕೃತ ಹೇಳಿಕೆ

ನವದೆಹಲಿ prajakiran.com : ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದ ಮೇಲೆ ರೆಸ್ಲರ್ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸುಶೀಲ್‌ ಕುಮಾರನನ್ನು ಬಂಧಿಸಲಾಗಿದೆ ಎಂದು ದೆಹಲಿಯ ಸ್ಪೆಶಲ್ ಸೆಲ್‌ನ ಸ್ಪೆಶಲ್ ಸಿಪಿ ನೀರಜ್ ಠಾಕೂರ್ ಮಾಹಿತಿ ನೀಡಿದ್ದಾರೆ. ಸುಶೀಲ್ ಕುಮಾರ್ ಅವರನ್ನು ಇಂದು ಅಧಿಕೃತವಾಗಿ ಬಂಧಿಸಿರುವುದಾಗಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಶಿವಕುಮಾರ್, ಇನ್ಸ್‌ಪೆಕ್ಟರ್ ಕರಂಬೀರ್ ನೇತೃತ್ವದ ವಿಶೇಷ ಸೆಲ್ ಎಸ್‌ಆರ್ ತಂಡ […]

ಕ್ರೀಡೆ

ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್‌ಗೆ ಬಲಿ

ನವದೆಹಲಿ prajakiran.com : ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್‌ನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಅವರಿಗೆ ಬ್ಲಾಕ್‌ಫಂಗಸ್ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ಮೊನಾಲಿ ಅವರ ನಿಧನದ ಕೆಲ ಗಂಟೆಗಳ ಹಿಂದೆಯಷ್ಟೇ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು. ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು.  ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು.  Share on: WhatsApp

ಕ್ರೀಡೆ

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟಿ 20 ಕ್ರಿಕೆಟ್ ರದ್ದು

ಕೋಲಂಬಿಯಾ prajakiran.com : ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಪಂದ್ಯಾವಳಿ ರದ್ದಾಗಿದೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯ ಕೋವಿಡ್ ಕಾರಣದಿಂದ ರದ್ದಾಗಿ, ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಕೋವಿಡ್ ಕಾರಣದಿಂದ ಈ ವರ್ಷದ ಪಂದ್ಯ ಕೂಡ ರದ್ದಾಗಿದೆ. ಕೋವಿಡ್ ಎಲ್ಲೇಡೆಯೂ ಹರಡಿ ಕಠಿಣ ಪರಿಸ್ಥಿತಿ ಉಂಟಾಗಿರುವುದರಿಂದ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿ ನಡೆಸುವುದು ಕಷ್ಟ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಯಶ್ಲೆ ಡಿ ಸಿಲ್ವ ಹೇಳಿದ್ದಾರೆ. ಈ ಬಗ್ಗೆ […]

ಕ್ರೀಡೆ

ಕೊರೋನಾ ಲಸಿಕೆ ಪಡೆದ ಕ್ರಿಕೆಟಿಗ ರಿಷಬ್ ಪಂತ್

ಮುಂಬೈ prajakiran.com : ಭಾರತ ತಂಡದ ರಿಷಬ್ ಪಂತ್ ಗುರುವಾರ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ತಾವು ಲಸಿಕೆ ಪಡೆದಿರುವ ಪೋಟೋವನ್ನು ಟ್ವಿಟರ್‌ನಲ್ಲಿ ರಿಷಬ್ ಶೇರ್ ಮಾಡಿ ‘ನಾನು ಇವತ್ತು ಮೊದಲ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಯಾರೆಲ್ಲ ಲಸಿಕೆ ಪಡೆಯಲು ಅರ್ಹರಿದ್ದಿರೋ ಅವರೆಲ್ಲ ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ,  ಚೇತೇಶ್ವರ್ ಪೂಜಾರ, ಉಮೇಶ್ ಯಾದವ್ ಸೇರಿದಂತೆ […]

ಕ್ರೀಡೆ

ಕ್ರಿಕೆಟಿಗರಿಗೆ ಮನೆಯಿಂದ ಹೊರಬಾರದಂತೆ ಬಿಸಿಸಿಐ ಎಚ್ಚರಿಕೆ

ಮುಂಬಯಿ prajakiran.com : ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿರುವ ಭಾರತೀಯ ಕ್ರಿಕೆಟಿಗರಿಗೆ ಮನೆ ಬಿಟ್ಟು ಹೊರಬರದಂತೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಯಾವುದೇ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟರೆ ಅವರನ್ನು ತಂಡದಿಂದ ಕೈಬಿಡಲಾಗುವುದು. ಆಟಗಾರರು ಕೊರೋನಾದಿಂದ ಗುಣಮುಖರಾಗಿ ಬಂದರೂ ಮತ್ತೆ ವಿಶೇಷ ವಿಮಾನ ವ್ಯವಸ್ಥೆ ಮಾಡುವುದಿಲ್ಲ ಎಂದು ಹೇಳಿದೆ. ಜೂ.2 ರಂದು ಇಂಗ್ಲೆಂಡ್‌ಗೆ ಹೊರಡುವ ನಿರೀಕ್ಷೆ ಇದ್ದು, ಅದಕ್ಕೂ ಮುನ್ನ ಮುಂಬೈನಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅಲ್ಲಿಯವರೆಗೂ ಎಲ್ಲರೂ ಸುರಕ್ಷಿತವಾಗಿದ್ದು, ಮನೆಯಿಂದ ಹೊರಹೋಗದಿರಿ ಎಂದು ಬಿಸಿಸಿಐ ಹೇಳಿದೆ. Share […]

ಕ್ರೀಡೆ

ಹಾಕಿ ಆಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಇನ್ನಿಲ್ಲ

ನವದೆಹಲಿ Prajakiran.com : ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದಿದ್ದ, ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಹೆಮ್ಮಾರಿ ಕೊರೋನಾ ಸೋಂಕಿನಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾರೆ. ರವೀಂದರ್ ಪಾಲ್ ಸೋಂಕಿನಿಂದ ಬಳಲಿದ್ದು ಕಳೆದ ಏ.24 ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಶುಕ್ರವಾರ ಇದ್ದಕ್ಕಿದ್ದಂತೆ ಅವರ ಆರೋಗ್ಯ ಸ್ಥತಿ ಗಂಭೀರವಾಗಿದ್ದು, ವೆಂಟಿಲೇಟರ್‌ ಅಳವಡಿಲಾಯಿತು ಎಂದು […]

ಕ್ರೀಡೆ

ಕೊರೋನಾ ಲಸಿಕೆ ಪಡೆದ ಕ್ರಿಕೆಟಿಗ ಶಿಖರ್ ಧವನ್

ನವದೆಹಲಿ prajakiran.com : ಭಾರತ ತಂಡದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿರುವ ಶಿಖರ್ ಲಸಿಕೆಯನ್ನು ಪಡೆಯಲು ಯಾರು ಹಿಂಜರಿಯಬೇಡಿ. ಕೊರೋನಾ ವಿರುದ್ಧ ಹೋರಾಡಲು ಲಸಿಕೆ ನಮಗೆ ಸಹಾಯ ಮಾಡುತ್ತದೆ. ಕೊರೋನಾ ಮಣಿಸಲು ಮುಂಚೂಣಿಯಲ್ಲಿ ನಿಂತಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿತ್ತೇನೆ ಎಂದಿದ್ದಾರೆ. ಇನ್ನು ಶಿಖರ್ ಧವನ್ ಕೊರೋನಾ ಲಸಿಕೆ ತೆಗೆದುಕೊಂಡು ಟೀಂ ಇಂಡಿಯಾದ ಮೊದಲ ಆಟಗಾರರಾಗಿದ್ದಾರೆ. Share on: […]

ಕ್ರೀಡೆ

ಕೊರೋನಾಗೆ ಬಲಿಯಾದ ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್​

ನವದೆಹಲಿ prajakiran.com : ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದೀಗ ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ ಮತ್ತು ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್ (34)​ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರೆ. ಜಗದೀಶ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ವಡೋದರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಕೊನೆಯುಸಿರೆಳೆದಿದ್ದಾರೆ. ಮಹಾಮಾರಿ ಕರೋನಾ ಪಾಸಿಟಿವ್ ಘಟಾನುಘಟಿ ನಾಯಕರು, ಸಿನಿಮಾ ನಟರು ಸೇರಿದಂತೆ ವಿವಿಧ ರಂಗದ ಗಣ್ಯರು ಕರೋನಾದಿಂದ ಬಳಲಿ ಬೆಂಡಾಗಿ ಇಹಲೋಕ ತ್ಯಜಿಸಿರುವುದು ವಿಧಿಯಾಟ. Share on: WhatsApp

ಕ್ರೀಡೆ

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಕೊರೋನಾಗೆ ಬಲಿ….!

ಬೆಂಗಳೂರು prajakiran.com : ದೇಶದಲ್ಲಿ ಕೊರೋನಾ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ದಿನೇ ದಿನೇ ಹಲವಾರು ಜನರನ್ನು ಬಲಿಪಡೆಯುತ್ತಿದೆ. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ (63) ಕೊರೋನಾ ದಿಂದ ನಿಧನರಾಗಿದ್ದಾರೆ. ಚಿಕ್ಕಮಗಳೂರ ಕಡೂರಿನ ಚೆಲುವಾಂಬ ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಏ.20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಬಂದಿದೆ. ನಾಲ್ಕು ದಿನಗಳಿಂದ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಕಳೆದ ರಾತ್ರಿ ಅತಿಯಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು […]