ನವದೆಹಲಿ prajakiran.com : ಭಾರತ ತಂಡದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಲಸಿಕೆ ಪಡೆದ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿರುವ ಶಿಖರ್ ಲಸಿಕೆಯನ್ನು ಪಡೆಯಲು ಯಾರು ಹಿಂಜರಿಯಬೇಡಿ.
ಕೊರೋನಾ ವಿರುದ್ಧ ಹೋರಾಡಲು ಲಸಿಕೆ ನಮಗೆ ಸಹಾಯ ಮಾಡುತ್ತದೆ.
ಕೊರೋನಾ ಮಣಿಸಲು ಮುಂಚೂಣಿಯಲ್ಲಿ ನಿಂತಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿತ್ತೇನೆ ಎಂದಿದ್ದಾರೆ.
ಇನ್ನು ಶಿಖರ್ ಧವನ್ ಕೊರೋನಾ ಲಸಿಕೆ ತೆಗೆದುಕೊಂಡು ಟೀಂ ಇಂಡಿಯಾದ ಮೊದಲ ಆಟಗಾರರಾಗಿದ್ದಾರೆ.