ಮಧ್ಯಪ್ರದೇಶ prajakiran.com : ರೆಮ್ಡೆಸಿವಿರ್ ಔಷಧಗಳನ್ನು ತರುತ್ತಿದ್ದ ವಿಮಾನ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ರನ್ವೇಗೆ ಬಡಿದು ಅಪಘಾತಕ್ಕೀಡಾಗಿದೆ.
ಈ ಘಟನೆ ಬುಧವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಯಾವುದೇ ಸಾವು ಸಂಭವಿಸಿಲ್ಲ.
ವಿಮಾನದಲ್ಲಿದ್ದ ಪೈಲಟ್ ಸಯೀದ್ ಮಜೀದ್ ಅಖ್ತರ್ ಮತ್ತು ಸಹ ಪೈಲಟ್ ಶಿವಶಂಕರ್ ಜೈಸ್ವಾಲ್ ಸೇರಿದಂತೆ ಇನ್ನೊರ್ವ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಅಮಿತ್ ಸಂಘಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಮಹಾರಾಜಪುರ ವಾಯುಪಡೆ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳ ತಿಳಿದುಬಂದಿದೆ.