ಮುಂಬೈ prajakiran.com : ಭಾರತ ತಂಡದ ರಿಷಬ್ ಪಂತ್ ಗುರುವಾರ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ತಾವು ಲಸಿಕೆ ಪಡೆದಿರುವ ಪೋಟೋವನ್ನು ಟ್ವಿಟರ್ನಲ್ಲಿ ರಿಷಬ್ ಶೇರ್ ಮಾಡಿ ‘ನಾನು ಇವತ್ತು ಮೊದಲ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ.
ಯಾರೆಲ್ಲ ಲಸಿಕೆ ಪಡೆಯಲು ಅರ್ಹರಿದ್ದಿರೋ ಅವರೆಲ್ಲ ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್ ಸೇರಿದಂತೆ ಅನೇಕರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.