ಕ್ರೀಡೆ

ಸ್ಟೇಡಿಯಂನಲ್ಲಿ ಮಿಲ್ಖಾ ಸಿಂಗ್ ಬದಲು ಫರಾನ್ ಅಕ್ತರ್ ಫೋಟೊ

ನೋಯ್ಡಾ prajakiran.com : ಭಾರತದ ಅಥ್ಲೀಟ್ ದಿಗ್ಗಜ ಮಿಲ್ಖಾ ಸಿಂಗ್ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದು, ಇದೀಗ ಮಿಲ್ಕಾ ಸಿಂಗ್ ಅವರ ಫೋಟೋ ಬದಲು ಫರಾನ್ ಅಕ್ತರ್ ಅವರ ಫೋಟೋ ಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮಿಲ್ಖಾ ಸಿಂಗ್ ಅವರ ಆತ್ಮಕತೆ ಆಧಾರಿತ ಸಿನಿಮಾ ‘ಭಾಗ್ ಮಿಲ್ಖಾ ಭಾಗ್‌’ನಲ್ಲಿ ಫರಾನ್ ಅಕ್ತರ್ ಮಿಲ್ಖಾ ಸಿಂಗ್ ಅವರ ಪಾತ್ರವನ್ನು ನಿಭಾಯಿಸಿದ್ದರು.

ಇದೀಗ ಮಿಲ್ಕಾ ಸಿಂಗ್ ಅವರ ನಿಧನರಾದ ಹಿನ್ನೆಲೆ ನೋಯ್ಡಾದ ಸ್ಟೇಡಿಯಂ ಒಂದರಲ್ಲಿ ಮಿಲ್ಖಾ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಲು ಮಿಲ್ಖಾ ಸಿಂಗ್ ಅವರ ಫೋಟೊ ಬದಲಿಗೆ ಫರಾನ್ ಅಕ್ತರ್ ಅವರ ಫೋಟೊ ಹಾಕಲಾಗಿದೆ.

ನಿಧನರಾದ ದಿಗ್ಗಜರಿಗೆ ಈ ರೀತಿ ಮಾಡುವುದು ಅವಮಾನ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *