ಕೋಲಂಬಿಯಾ prajakiran.com : ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಪಂದ್ಯಾವಳಿ ರದ್ದಾಗಿದೆ.
ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯ ಕೋವಿಡ್ ಕಾರಣದಿಂದ ರದ್ದಾಗಿ, ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಕೋವಿಡ್ ಕಾರಣದಿಂದ ಈ ವರ್ಷದ ಪಂದ್ಯ ಕೂಡ ರದ್ದಾಗಿದೆ.
ಕೋವಿಡ್ ಎಲ್ಲೇಡೆಯೂ ಹರಡಿ ಕಠಿಣ ಪರಿಸ್ಥಿತಿ ಉಂಟಾಗಿರುವುದರಿಂದ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿ ನಡೆಸುವುದು ಕಷ್ಟ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಯಶ್ಲೆ ಡಿ ಸಿಲ್ವ ಹೇಳಿದ್ದಾರೆ.
ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.