dharwad dc order
ಜಿಲ್ಲೆ

ಧಾರವಾಡ ಜಿಲ್ಲೆಯಾದ್ಯಂತ ಮದ್ಯ, ಪಟಾಕಿ ಮಾರಾಟ ನಿಷೇಧ

ಧಾರವಾಡ prajakiran.com : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಕಾರ್ಯಕ್ರಮ ಜರುಗುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಆಗಸ್ಟ್ ೪ರಂದು ಮಧ್ಯರಾತ್ರಿ ೧೨ ಗಂಟೆಯಿಂದ  ಆಗಸ್ಟ್  ೬ ರ ಬೆಳಿಗ್ಗೆ -೬ ಗಂಟೆಯವರೆಗೆ ಮದ್ಯ ಸಾಗಾಣಿಕೆ ಹಾಗೂ ಪಟಾಕಿ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮತೀಯ ಸೌಹಾರ್ದತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆದೇಶ ಹೊರಡಿಸಲಾಗಿದೆ. […]

auto
ಜಿಲ್ಲೆ

ಗಿಡಬಿದ್ದು ಆಟೋ ಜಖಂ, ಚಾಲಕ ಪಾರು…!

ಧಾರವಾಡ prajakiran.com : ನಗರದಲ್ಲಿ ಸುರಿದ ಮಳೆಯಿಂದ ಮರವೊಂದು ಆಟೋ ಮೇಲೆ ಉರುಳಿದ ಘಟನೆ ಧಾರವಾಡದ ಸಿಬಿಟಿ ಬಳಿ ನಡೆದಿದೆ.. ಮುಂಜಾನೆಯಿಂದ ಸುರಿದ ಮಳೆಯಿಂದ ಮರ ಧರೆಗೆ ಉರುಳಿದೆ. ಇದರಿಂದ ನೂರ ಅಹ್ಮದ್ ಮಾಗಡಿ ಎಂಬುವವರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ. ಆದರೆ ಆಟೋ ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿರುವುದರಿಂದ ಆಟೋ ಚಾಲಕ ದಿಕ್ಕು ತೋಚದೆ ಕಂಗಲಾಗಿದ್ದಾನೆ.‌ ಕೆಎ 25 ಸಿ 9100 ನಂಬರಿನ ರಿಕ್ಷಾ ಜಖಂಗೊಂಡಿದ್ದು, ಚಾಲಕನಿಗೆ ಕೆಲ ಸಣ್ಣಪುಟ್ಟ ಗಾಯಗಳಾಗಿವೆ. ಇದ್ದಕ್ಕಿದ್ದಂತೆ ಮರ ಉರುಳಿ ಬಿದ್ದಿದ್ದರಿಂದ ಗಾಯಗೊಂಡ ಚಾಲಕನನ್ನು […]

associatuon
ಜಿಲ್ಲೆ

ಚಾಲುಕ್ಯ ಬಡಾವಣೆ ಹಿತರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆ

ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆ ಧಾರವಾಡ prajakiran.com : ಇಲ್ಲಿಯ ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆಯಾಗಿದ್ದಾರೆ. ಈ ಕುರಿತು ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳು ಪುನರ್ ಆಯ್ಕೆ ಆದರು.  ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ಅವರು ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಅಧ್ಯಕ್ಷರಾಗಿ ಪುನರ್ ಆಯ್ಕೆ […]

ಜಿಲ್ಲೆ

ಕೊರೊನಾ ಸುರಕ್ಷತೆ : ಜಿಲ್ಲಾಡಳಿತದಿಂದ ಉಚಿತ ದೂರವಾಣಿ ಸಮಾಲೋಚನೆ  

ಧಾರವಾಡ prajakiran.com : ಕೊರೊನಾ ಸುರಕ್ಷತೆ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ನಾಗರಿಕರಿಗೆ ಉಚಿತ ಸಮಾಲೋಚನೆ ಸೌಲಭ್ಯ ಕಲ್ಪಿಸಿದೆ. ಸಲಹೆ ನೀಡಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಹಾಗೂ ಸರ್ಕಾರೇತರ ಸಂಸ್ಥೆಗಳು ಮತ್ತು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿರುವ ಆಸಕ್ತ ವೈದ್ಯರ ಸಹಯೋಗದಲ್ಲಿ ಆಶ್ರಯದಲ್ಲಿ, ವೈದ್ಯರೊಂದಿಗೆ ಚರ್ಚಿಸಿ ಸಲಹೆ ಪಡೆಯಲು ದೂರವಾಣಿ ಮೂಲಕ ಉಚಿತ ಸಮಾಲೋಚನೆ ನಡೆಸಬಹುದು. ಈ ಸೌಲಭ್ಯವನ್ನು ನಾಗರಿಕರು https://i-invent.org/ddclics ವೆಬ್ ವಿಳಾಸ ಮೂಲಕ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share on: WhatsApp

ಜಿಲ್ಲೆ

ಕೋವಿಡ್ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಜನಜಾಗೃತಿ

ಧಾರವಾಡ prajakiran.com : ಕೋವಿಡ್ ಸರಪಳಿ ತುಂಡರಿಸಲು ಜನಜಾಗೃತಿಯೇ ಮುಖ್ಯವಾಗಿರುವದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ,ಅಬಕಾರಿ ಇಲಾಖೆಯ ಸಹಯೋಗದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜನಜಾಗೃತಿ ಚಟುವಟಿಕೆಗಳು ಜರುಗುತ್ತಿವೆ. ಅರಣ್ಯ ಇಲಾಖೆಯ  ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಕಲಕೇರಿ, ದೇವಗಿರಿ ಹಾಗೂ ಬೆಣಚಿ ಗ್ರಾಮಗಳ ಅರಣ್ಯ  ವಲಯ ಪ್ರದೇಶಗಳಲ್ಲಿ ಕೋವಿಡ್ ಜಾಗೃತಿ ಚಟುವಟಿಕೆಗಳನ್ನು ನಡೆಸಿದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಬಳಸುವುದು,  ಪರಸ್ಪರ  ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮಹತ್ವವನ್ನು ಗ್ರಾಮಸ್ಥರಿಗೆ ವಿವರಿಸಿದರು. ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ […]

ಜಿಲ್ಲೆ

ಧಾರವಾಡ ಎಸ್ ಡಿ ಎಂ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ

ಧಾರವಾಡ prajakiran.com  : ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ. ಲಾಕ್ ಡೌನ್ ಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿಯಾದುದು, ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡುತ್ತಿರುವ ಎಸ್ ಡಿ ಎಂ ಆಸ್ಪತ್ರೆ ಉಳಿದ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು. ಅವರು ಸತ್ತೂರಿನ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ  ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ […]

ಜಿಲ್ಲೆ

ಧಾರವಾಡದಲ್ಲಿ ಲಕ್ಷಣ ರಹಿತ ರೋಗಿಗಳ ಸ್ಥಳಾಂತರಕ್ಕೆ ಬಾಡಿಗೆ ವಾಹನ

ಧಾರವಾಡ prajakiran.com : ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಲಕ್ಷಣರಹಿತ ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರುಗಳಿಗೆ ಸ್ಥಳಾಂತರಿಸಲು ಮತ್ತು ಗುಣಮುಖರಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲು ಬಾಡಿಗೆ ವಾಹನಗಳನ್ನು ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧಾತ್ಮಕವಾಗಿ ಕಡಿಮೆ ದರದಲ್ಲಿ ವಾಹನಗಳನ್ನು ಒದಗಿಸುವ ಟ್ರಾವೆಲ್ ಎಜೆನ್ಸಿಗಳೊಂದಿಗೆ  ನಿಯಮಾನುಸಾರ ಕರಾರು ಒಪ್ಪಂದ ಮಾಡಿಕೊಂಡು ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬಹುದು. […]

ಜಿಲ್ಲೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ಹುಬ್ಬಳ್ಳಿ ಧಾರವಾಡ ೬೭ ವಾರ್ಡಗಳಲ್ಲಿ ಟಾಸ್ಕ್ ಪೊರ್ಸ್ ಸಮಿತಿ

ಧಾರವಾಡ prajakiran.com : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡುವ, ಸ್ಯಾನಿಟೈಜರ್ ಬಳಕೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಅಗತ್ಯವಿದೆ. ಸ್ವಯಂ ಸೇವಕರಾಗಿ ಪಾಲ್ಗೋಳ್ಳಲು ಸಿದ್ಧರಿರುವವರ ತಂಡ ರಚಿಸಿ, ಜನಜಾಗೃತಿ ಹೆಚ್ಚಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ರಚಿಸಿರುವ ಸಮಿತಿ ಹಾಗೂ ವಿವಿಧ ಸ್ವಯಂ ಸೇವಾ ಸಮಿತಿ, ಸರ್ಕಾರೇತರ ಸಂಸ್ಥೆಗಳ […]

ಜಿಲ್ಲೆ

ಮನೆಗಳಲ್ಲಿಯೂ ಪ್ರತ್ಯೇಕತೆ ಅನುಸರಿಸಿ ಎಂದ ಧಾರವಾಡ ಜಿಲ್ಲಾಧಿಕಾರಿ ಸಲಹೆ

ಧಾರವಾಡ prajakiran.com : ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕಾಗಿದೆ. ಇತ್ತೀಚೆಗೆ ಸೋಂಕು ಹರಡುವಿಕೆ ವಿಶ್ಲೇಷಿಸಿದಾಗ ಕುಟುಂಬದಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡರೂ ಕೂಡ ಅದು ಇತರ ಸದಸ್ಯರಿಗೆ ಮತ್ತು ಸಂಬಂಧಿಗಳಿಗೆ ವ್ಯಾಪಿಸುತ್ತಿದೆ. ಇದನ್ನು ನಿಯಂತ್ರಿಸಲು ಮನೆಗಳಲ್ಲಿ ಕುಟುಂಬದ ಸದಸ್ಯರೂ ಕೂಡ ಆಂತರಿಕವಾಗಿ ಪ್ರತ್ಯೇಕತೆ,ಸ್ವಚ್ಛತೆ, ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಲಹ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೋಟೆಲ್,ಕೈಗಾರಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರು, ವ್ಯಾಪಾರಿಗಳ ಪ್ರತ್ಯೇಕ ಸಭೆ […]

ಜಿಲ್ಲೆ

ಧಾರವಾಡ ತಾಲೂಕಿನ ಹಲವು ಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ದೊಡ್ಡ ತಗ್ಗು ಗುಂಡಿ

ಮಂಜುನಾಥ ಕವಳಿ ಧಾರವಾಡ prajakiran.com : ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಗ್ರಾಮಗಳನ್ನು ಸಂರ್ಪಕಿಸುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದಾಗಿ ದಿನನಿತ್ಯ ನೂರಾರು ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಎಲ್ಲಿ ಅವು ತಮ್ಮ ಬಲಿ ತೆಗೆದುಕೊಳ್ಳುತ್ತವಯೋ ಎಂಬ ಭಯ ಆವರಿಸಿದೆ.   ಧಾರವಾಡದಿಂದ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಹದಗೆಟ್ಟಿದ್ದರಿಂದ […]