ಜಿಲ್ಲೆ

ಧಾರವಾಡದ ಎಸ್‌ಡಿಎಂನಲ್ಲಿ 4,  ಹುಬ್ಬಳ್ಳಿಯ ಕಿಮ್ಸ್ ನಲ್ಲಿ 160 ಕರೋನಾ ಸೋಂಕಿತರು

ಧಾರವಾಡ prajakiran.com  : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ 160, ಎಸ್‌ಡಿಎಂನಲ್ಲಿ 4, ಹಾಗೂ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 22 ಸೇರಿ ಒಟ್ಟು 186 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಯಶವಂತ ಮದೀನಕರ ತಿಳಿಸಿದರು. ಜುಲೈ 1 ರಂದು ವರದಿಯಾದ ತೀವ್ರ ಉಸಿರಾಟದ ತೊಂದರೆ ಇರುವ ಎಲ್ಲಾ 8  ಪ್ರಕರಣಗಳು ಹಾಗೂ 90 ಐಎಲ್‌ಐ ಪ್ರಕರಣಗಳಲ್ಲಿ 75 ಪ್ರಕರಣಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ […]

ಜಿಲ್ಲೆ

ಮತ್ತೋಮ್ಮೆ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಪಿ.ಎಚ್. ನೀರಲಕೇರಿ

* ಧಾರವಾಡದಲ್ಲಿಯೂ ನೇರಪ್ರಸಾರ ವೀಕ್ಷಣೆ * ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ ದ ಪ್ರತಿಜ್ಞಾ ದಿನ  ಧಾರವಾಡ prajakiran.com : ದೇಶ ಹಾಗೂ ರಾಜ್ಯದಲ್ಲಿ ಕರೋನಾವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಭ್ರಷ್ಟ, ಕೋಮುವಾದಿ ಬಿಜೆಪಿ ಸರಕಾರದ ದುರಾಡಳಿತವನ್ನು ಬುಡಸಮೇತ ಕಿತ್ತೋಗೆದು ಮತ್ತೋಮ್ಮೆ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು ದೃಢ ಸಂಕಲ್ಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ತಿಳಿಸಿದರು. ಅವರು ಧಾರವಾಡದ ಕಿಲ್ಲಾ ರಸ್ತೆಯಲ್ಲಿರುವ ವಿಶಾಲ್ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಪ್ರತಿಜ್ಞಾ ದಿನದ ನೇರ […]

ಜಿಲ್ಲೆ

ಧಾರವಾಡದ ಶಿಂಗನಹಳ್ಳಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್

ಧಾರವಾಡ prajakiran.com : ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೋಗುರು ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದ ಯುವಕನೊಂದಿಗೆ ವಿವಾಹ ಮಾಡಲಾಗುತ್ತಿತ್ತು. ಈ ಬಗ್ಗೆ ಅಧಿಕೃತ ಮೂಲಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳ ತಂಡದೊಂದಿಗೆ ಭೇಟಿ ನೀಡಿ ಬಾಲ್ಯ ವಿವಾಹವನ್ನು ತಡೆ ಹಿಡಿಯಲಾಗಿದೆ. ಅಪ್ರಾಪ್ತ ಬಾಲಕ, ಬಾಲಕಿಯರ ತಂದೆ, ತಾಯಿ ಹಾಗೂ ನೆರೆದ ಹಿರಿಯರಿಗೆ ಬಾಲ್ಯ […]

ಜಿಲ್ಲೆ

ಧಾರವಾಡದಲ್ಲಿ 13 ಜನ ಗುಣಮುಖ : ಒಟ್ಟು 155 ಜನ ಆಸ್ಪತ್ರೆಯಿಂದ ಡಿಸ್ ಚಾರ್ಜ್

ಧಾರವಾಡ prajakiran.com  : ಕೋವಿಡ್ ನಿಂದ ಗುಣಮುಖರಾಗಿರುವ  13 ಜನರನ್ನು  ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-6525 – (28 ವರ್ಷ, ಮಹಿಳೆ), ಪಿ-7056 – (27 ವರ್ಷ,ಮಹಿಳೆ), ಪಿ-7539 – (59 ವರ್ಷ,ಪುರುಷ), ಪಿ-7378- ( 12 ವರ್ಷ,ಗಂಡು ಮಗು), ಪಿ-7379 – ( 75 ವರ್ಷ,ಮಹಿಳೆ), ಪಿ-7380 – ( 83 ವರ್ಷ,ಪುರುಷ ), ಪಿ- 7383 -(57 ವರ್ಷ,ಪುರುಷ), ಪಿ-7381 – ( 12 […]

ಜಿಲ್ಲೆ

ನೆನೆಗುದಿಗೆ ಬಿದ್ದಿರುವ ಧಾರವಾಡದ ನವಲೂರು ಬಿಆರ್‌ಟಿಎಸ್‌ ಬ್ರಿಡ್ಜ್‌ ಕಾಮಗಾರಿ

ಬೆಂಗಳೂರು prajakiran.com : ಕಳೆದ ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನವಲೂರು ಬಿಆರ್‌ಟಿಎಸ್‌ ರೋಡ್‌ ಓವರ್‌ ಬ್ರಿಡ್ಜ್‌ ಕಾಮಗಾರಿಯನ್ನು  ಪೂರ್ಣಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು. ಬೆಂಗಳೂರು ನಗರದ ಖನಿಜ ಭವನದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕೆಆರ್‌ಡಿಎಸಿಎಲ್‌, ಹೆಚ್‌ ಡಿ ಬಿ ಆರ್‌ ಟಿ ಎಸ್‌ ಹಾಗೂ ನವಲೂರಿನ ಗ್ರಾಮಸ್ಥರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್  ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಅಹವಾಲು ಆಲಿಸಿದರು. ಇದಕ್ಕಾಗಿಯೇ ಹೊಸ ಸಂಸ್ಥೆಯ ಸಮಾಲೋಚಕರನ್ನು ಬಳಸಿಕೊಳ್ಳಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ […]

ಜಿಲ್ಲೆ

ನಿರಾತಂಕದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಿರಿ ಎಂದ ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ prajakiran.com : ರಾಜ್ಯ ಸರ್ಕಾರ ನೀಡಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಓಪಿ) ಪ್ರಕಾರ ಜಿಲ್ಲೆಯಲ್ಲಿ  ಪ್ರಸಕ್ತ ಎಸ್ ಎಸ್ ಎಲ್ ಸಿ   ಪರೀಕ್ಷೆಗಳನ್ನು ಯಶಸ್ವಿಯಾಗಿ ಏರ್ಪಡಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಸರ್ವ ಸಿದ್ಧತೆಗಳನ್ನು ಧಾರವಾಡ ಜಿಲ್ಲಾಡಳಿತ ಮಾಡಿಕೊಂಡಿದೆ. ಸಾಮಾಜಿಕ ಅಂತರದ ನಿಯಮದೊಂದಿಗೆ ಆಸನ ವ್ಯವಸ್ಥೆ, ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ, ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.  ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಆಗಮಿಸಲು ವಾಕರಸಾಸಂ ೨೦೦ ಮಾರ್ಗಗಳಲ್ಲಿ ವಿಶೇಷ ಬಸ್‌ಗಳ ಸಂಚಾರ […]

ಜಿಲ್ಲೆ

ಧಾರವಾಡ ಜಿಲ್ಲೆಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ನಿರ್ಭಂಧಿತ ಪ್ರದೇಶ ಘೋಷಣೆ

ಧಾರವಾಡ prajakiran.com : ಜೂನ್ ೨೫ ರಿಂದ ಜುಲೈ ೪ ರವರೆಗೆ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಮಯದಲ್ಲಿ ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯನ್ನು ಹೊರತುಪಡಿಸಿ) ಇರುವ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ದಂಡ ಪ್ರಕ್ರಿಯಾ ಸಂಹಿತೆ-೧೯೭೩ರ ಕಲಂ ೧೪೪ ರನ್ವಯ ನಿರ್ಭಂಧಿತ ಪ್ರದೇಶವೆಂದು ಘೋಷಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಈ ಘೋಷಿತ ಆದೇಶವು ಜೂನ್ ೨೫ರಿಂದ ಜುಲೈ ೪ ರವರೆಗೆ ಪರೀಕ್ಷಾ […]

ಜಿಲ್ಲೆ

ವಾಯವ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಧಾರವಾಡ prajakiran.com : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ ರೆಡ್ ಕ್ರಾಸ್ ಸಂಸ್ಥೆಯವತಿಯಿಂದ ನೌಕರರಿಗೆ ಮಾಸ್ಕ್, ಸ್ಯಾನಿಟೈಸರ್, ಆರೋಗ್ಯ ಪೇಯ ಮತ್ತು ಸಾಬೂನು ಗಳನ್ನು ಸೋಮವಾರ ವಿತರಣೆ ಮಾಡಲಾಯಿತು. ಚಾಲನೆ ನೀಡಿ ಮಾತನಾಡಿದ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಕರೊನಾ ಕಾಯಿಲೆಯ ಹರಡುವಿಕೆ ಸರ್ವವ್ಯಾಪಿಯಾಗಿದ್ದು. ದೈನಂದಿನ ಕರ್ತವ್ಯದಲ್ಲಿ ಸಾಮಾಜಿಕ ಸುರಕ್ಷತೆ ಕಾಯ್ದುಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು. ಕೊರೊನಾ ತಡೆಗಟ್ಟುವ ಸಲುವಾಗಿ ಎಲ್ಲ ಕ್ಷೇತ್ರದಲ್ಲಿನ ಉದ್ಯೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಆಧ್ಯತೆ ನೀಡುವ […]

ಜಿಲ್ಲೆ

ಸೂಚನೆ ಪಾಲಿಸದ ಆಸ್ಪತ್ರೆ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಧಾರವಾಡ ಜಿಲ್ಲಾಧಿಕಾರಿ  

ಧಾರವಾಡ prajakiran.com : ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಪ್ರತಿದಿನ ತಮಲ್ಲಿ ಚಿಕಿತ್ಸೆಗೆ ಬರುವ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ಲಕ್ಷಣಗಳಿರುವ ವ್ಯಕ್ತಿಗಳ ಹೆಸರು ಮತ್ತು ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಮಾಹಿತಿಯನ್ನು ಕೆಪಿಎಂಇ ಪೋರ್ಟ್ಲ್‌ನಲ್ಲಿ ಕಡ್ಡಾಯವಾಗಿ ಅಪ್‌ಡೇಟ್ ಮಾಡಬೇಕು. ಈ ಸೂಚನೆಯನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚನೆ ನೀಡಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿ […]

ಜಿಲ್ಲೆ

ಧಾರವಾಡ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ರವಿವರ್ಮಾ ಪಾಟೀಲ ಆಯ್ಕೆ

ಧಾರವಾಡ prajakiran.com : ಧಾರವಾಡ ತಾಲೂಕು ಪಂಚಾಯಿತಿ ಕೊನೆ ಅವಧಿಗೆ ಅಧ್ಯಕ್ಷರಾಗಿ ಮಾದನಬಾವಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ರವಿವರ್ಮಾ ಪಾಟೀಲ ಆಯ್ಕೆಯಾದರು. ಮಂಗಳವಾರ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ  ಬೆಳಗ್ಗೆ ರವಿವರ್ಮಾ ಪಾಟೀಲ ಹಾಗೂ ಸುರೇಂದ್ರ ದೇಸಾಯಿ ಅವರು ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ  ಬೆಂಬಲ ಸೂಚಿಸಿದರು. ೨೪ ಸಂಖ್ಯಾಬಲ ಹೊಂದಿರುವ ತಾಪಂಗೆ ಅಧ್ಯಕ್ಷರ ಆಯ್ಕೆಗೆ […]