ಜಿಲ್ಲೆ

ಸಹಕಾರಿ ರಂಗದ ಧುರೀಣ ದೇಸಾಯಿಗೌಡರು ಇನ್ನಿಲ್ಲ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ ಪಿಎಲ್ ಡಿ (PLD) ಬ್ಯಾಂಕಿನ ಅಧ್ಯಕ್ಷರು, ಸಹಕಾರಿ ಧುರೀಣರಾಗಿದ್ದ ದೇಸಾಯಿಗೌಡ್ರು ಶಂಕರಗೌಡ ಪಾಟೀಲ್ ಇವರು ಮೇ 4 ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು‌. ದೇಸಾಯಿ ಗೌಡ್ರು ನವಲಗುಂದ ತಾಲೂಕಿನ ಮಾಜಿ ಶಾಸಕರಾದ ದಿ. ಶಂಕರಗೌಡ್ರ.ವಿ.ಪಾಟೀಲ.(ಶಲವಡಿ) ಅವರ ಪುತ್ರರಾಗಿದ್ದರು. ಪ್ರಸ್ತುತ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ , ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು […]

ಜಿಲ್ಲೆ

ಧಾರವಾಡದ ಬಿಜೆಪಿ ಮಾಜಿ ಅಧ್ಯಕ್ಷ ಬಸವರಾಜ ವಿಭೂತಿ ಕೋವಿಡ್ ನಿಂದ ಸಾವು…!

ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರ ಮೂರನೇ ಕ್ರಾಸ್ ನಿವಾಸಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿ ಜೆ ಪಿ ಯ ಮಾಜಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿ (83)  ಕೋವಿಡ ಸೂಂಕಿನಿಂದ ಶನಿವಾರ ಹುಬ್ಬಳ್ಳಿಯ ಕೆ ಎಮ್ ಸಿ ಯಲ್ಲಿ ನಿಧನ ಹೊಂದಿದರು. ಅವರು ಎಸ್ ಎಸ್ ಎಲ್ ಸಿ ಬಂಧು ಮಾಸಿಕ ಪುಸ್ತಕದ ಸಂಪಾದಕ, ಪ್ರಕಾಶಕರಾಗಿದ್ದರು .   ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ  ಕಾಯ೯ಕತ೯ರಾಗಿದ್ದರು. ಮೃತರಿಗೆ […]

ಜಿಲ್ಲೆ

ಸರ್ಕಾರದ ನಿರ್ದೇಶನ ಪಾಲಿಸದ ಖಾಸಗಿ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ…..

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿಕೆ ಧಾರವಾಡ prajakiran.com : ಕೆಪಿಎಂಇ ಕಾಯ್ದೆಯಡಿ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಅನುಮತಿ ಪಡೆದ ಒಟ್ಟು ಬೆಡ್‍ಗಳ ಪೈಕಿ ಶೇ.50ರಷ್ಟು ಬೆಡ್‍ಗಳನ್ನು ಸರ್ಕಾರಕ್ಕೆ ಮೀಸಲಿಡಲು ಈಗಾಗಲೇ ಸರ್ಕಾರದಿಂದ ಆದೇಶವಾಗಿದೆ. ಮತ್ತು ಈ ಆದೇಶ ಕುರಿತು ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿ ಆದೇಶದ ಪ್ರತಿ ಮತ್ತು ಮಾಹಿತಿಯನ್ನು ನೀಡಲಾಗಿದೆ. ಪ್ರತಿ ಆಸ್ಪತ್ರೆಯೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ […]

ಜಿಲ್ಲೆ

ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಆಕ್ಸಿಜನ್ ಪೂರೈಕೆಗೆ ಸೂಚನೆ

*ಸತ್ತೂರ: ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಘಟಕಕ್ಕೆ ಜಿಲ್ಲಾಧಿಕಾರಿಗಳ ಭೇಟಿ ಧಾರವಾಡ prajakiran.com : ಇಲ್ಲಿನ ಸತ್ತೂರಿನಲ್ಲಿರುವ ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಆವರಣಕ್ಕೆ ಇಂದು ಜಿಲ್ಲಾಧಿಕಾರಿಗಳಾದ ನಿತೇಶ್ ಕೆ.ಪಾಟೀಲ ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಲಾಭೂರಾಮ್ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು. ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳಿಗೆ ಆಕ್ಸಿಜನ್ ಪೂರೈಸುವ ಘಟಕಗಳು ಮುಂದಿನ ಆದೇಶದವರೆಗೂ ವೈದ್ಯಕೀಯ ಸೇವೆಗಳಿಗೆ ಮಾತ್ರ ಆಕ್ಸಿಜನ್ ಪೂರೈಸಬೇಕು. ಪ್ರತಿದಿನ ನಮ್ಮ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಸರಬರಾಜಿನ ಖಚಿತ ಸಂಗ್ರಹ ಹೊಂದಿರಬೇಕು ಎಂದು […]

ಜಿಲ್ಲೆ

ಮದುವೆಗೆ ಅಧಿಕ ಜನ : ಧಾರವಾಡದ ರಾಯಲ್  ಕಮ್ಯುನಿಟಿ ಹಾಲ್‌ಗೆ ಬೀಗ….!

ಧಾರವಾಡ prajakiran.com : ಏ.22 ರಂದು ನಿಯಮ ಉಲ್ಲಂಘಿಸಿ ಅನುಮತಿ ನೀಡಿದ್ದಕ್ಕಿಂತ ಅಧಿಕ ಜನರು ಸೇರಿ ಮದುವೆ ಸಮಾರಂಭ ನಡೆಯಲು ಅವಕಾಶ ನೀಡಿದ್ದ ಧಾರವಾಡದ ರಾಯಲ್ ಕಮ್ಯುನಿಟಿ ಹಾಲ್‌ಗೆ ಏ.23 ರಿಂದ ಏ.28 ರವರೆಗೆ ಆರು ದಿನಗಳ ಕಾಲ ಬೀಗ ಹಾಕಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ,ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಸಭಾಂಗಣದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ, ಆದೇಶವನ್ನು ಜಾರಿಗೊಳಿಸಲು ಮಹಾನಗರಪಾಲಿಕೆಯ ವಲಯ 2 ರ ಅಧಿಕಾರಿಗಳಿಗೆ […]

ಜಿಲ್ಲೆ

ಧಾರವಾಡ ತಹಸಿಲ್ದಾರ ನೈಟ್ ಕರ್ಪ್ಯೂ ರೌಂಡ್ಸ್ : ಮಾವಿನಹಣ್ಣಿನ ಅಂಗಡಿಗೆ ದಂಡ

ಧಾರವಾಡ prajakiran.com :  ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ಅವರು ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ಜಿಲ್ಲಾಧಿಕಾರಿ ವಿಧಿಸಿರುವ ಕಲಂ 144 ರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವದರ ಕುರಿತು ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸುಪರ್ ಮಾರ್ಕೆಟ್, ಸುಭಾಸರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ನಂತರ ನರೇಂದ್ರ ಕ್ರಾಸ್ ವರೆಗೆ ಸಂಚರಿಸಿ, ನರೇಂದ್ರ ಕ್ರಾಸ್ ದಲ್ಲಿ ಆದೇಶ ಉಲ್ಲಂಘಿಸಿ, 9 ಗಂಟೆ ನಂತರವು ಮಾವಿನ […]

ಜಿಲ್ಲೆ

ಮುಂದುವರೆದ ಸಾರಿಗೆ ನೌಕರರ ಮುಷ್ಕರ….!

ಧಾರವಾಡ Prajakiran.com : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟ ಹಮ್ಮಿಕೊಂಡ ಪ್ರತಿಭಟನೆ ಶನಿವಾರವೂ ಮುಂದುವರೆದಿದೆ.   ಇದರಿಂದಾಗಿ ಬಸ್ ನಿಲ್ದಾಣ ಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರು ಹಾಗೂ ಸಾರಿಗೆ ನೌಕರರು ರಾಜ್ಯದ ಬಿಜೆಪಿ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಬೇಡಿಕೆ ಈಡೇರಿಸುವ ವರೆಗೆ ಹೋರಾಟ ಮುಂದುವರೆಯಲಿದೆ ಎಂದು ನೌಕರರ ಕೂಟದ ಗೌರವ ಅಧ್ಯಕ್ಷ ಪು.ಎಚ್. ನೀರಲಕೇರಿ ತಿಳಿಸಿದರು. ಪರಿಶಿಷ್ಟ ಜಾತಿ ಹಾಗೂ ಪ.ಪಂಗಡ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿಕೆ ನೀಡಿದ ಎಸ್ಸಿ […]

dharwad dc order
ಜಿಲ್ಲೆ

ಧಾರವಾಡ ಜಿಲ್ಲೆಯ ವನಹಳ್ಳಿ ಗ್ರಾಮ ವಾಸ್ತವ್ಯ ಮೂಂದುಡಿಕೆ

ಕೋವಿಡ ಹೆಚ್ಚಳದಿಂದಾಗಿ ಕಂದಾಯ ಇಲಾಖೆ ಮುನ್ನೆಚರಿಕೆ ಕ್ರಮ ಧಾರವಾಡ prajakiran.com : ಕಂದಾಯ ಸಚಿವರ ಸೂಚನೆ‌ ಮೇರೆಗೆ ಬರುವ ಏಪ್ರಿಲ್ 17 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಅಂಗವಾಗಿ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮ ವಾಸ್ತವ್ಯ ಹಾಗೂ ಕನಕೂರ ಗ್ರಾಮ ಪಂವಾಯತ ವ್ಯಾಪ್ತಿಯ ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ ಹಾಗೂ ವನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಪಿಂಚಣಿ,ಕಂದಾಯ ಅದಾಲತ್ ಹಾಗೂ ಪೌತಿ ಖಾತಾ ಆಂದೋಲನವನ್ನು ಮೂಂದಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ […]

ಜಿಲ್ಲೆ ರಾಜ್ಯ

ಸೋಮೇಶ್ವರ ಕೆರೆ ನೀರು ಪೋಲು : ಪಾದಯಾತ್ರೆ ಕೈಗೊಂಡ ಜಯ ಕರ್ನಾಟಕ

ಧಾರವಾಡ Prajakiran. Com : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೋಮೆಶ್ವರ ಕೆರೆ ನೀರು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದು ನಮ್ಮ ನಾಡಿನ ಸಂಪತ್ತು. ಅಭಿವೃದ್ಧಿ ಯೋಜನೆ ನೆಪದಲ್ಲಿ ಕೊಡಿ ಒಡೆದು ನೀರು ಹರಿಬಿಡುವ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರಿದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಆಗ್ರಹಿಸಿದರು. ಅವತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಗೆ ಬೆಂಬಲಿಸಿ, […]

ಜಿಲ್ಲೆ

ಧಾರವಾಡದ ನವಲೂರ ಮೇಲಸೇತುವೆ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಧಾರವಾಡ prajakiran.com : ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನವಲೂರ ಮೇಲಸೇತುವೆ ದುರಸ್ತಿ ಕಾಮಗಾರಿ ಸ್ಥಳಕ್ಜೆ ಅನಿರೀಕ್ಷಿತ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಮಾಡಿದರು. ಕಾಮಗಾರಿ ಗುಣಮಟ್ಟದಿಂದ ಆಗಬೇಕು. ಮಳೆಗಾಲ ಆರಂಭವಾಗುವ ಮೊದಲು ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕೆಂದು‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಕಾಲ್ನಡಿಗೆಯಲ್ಲಿ ನವಲೂರ ಮೇಲಸೇತುವೆ ಉದ್ದಕ್ಕೂ ಸಂಚರಿಸಿ, ಕಾರ್ಮಿಕರು ಮಾಡುತ್ತಿರುವ ದುರಸ್ತಿ ಕಾರ್ಯವನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ಎನ್.ಕೆ.ಕುರಂದಕರ ಹಾಗೂ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದು, ಮಾಹಿತಿ ನೀಡಿದರು. Share […]