prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ಚೇತರಿಸಿಕೊಳ್ಳುತ್ತಿದೆ ಭಾರತ, ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ

ನವದೆಹೆಲಿ prajakiran.com : ದೇಶದಲ್ಲಿ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಹಲವಾರು ರಾಜ್ಯಗಳು ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಕೊಂಚ ಮಟ್ಟಿಗೆ ಭಾರತ ಚೇತರಿಸಿಕೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ 2,76,070 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ 3,874 ಕ್ಕೆ ಇಳಿಕೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,76,070 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ 2,57,72,400 ರಷ್ಟಾಗಿದೆ. ದೇಶದಲ್ಲಿ ಬುಧವಾರ 3,69,077 ಕೊರೋನಾ ಸೋಂಕಿತರು […]

ಅಂತಾರಾಷ್ಟ್ರೀಯ

ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಕೋವಿಡ್ ಲಸಿಕೆ : ಜೆ.ಪಿ. ನಡ್ಡಾ

ನವದೆಹಲಿ prajakiran.com :ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ರಾಜಸ್ಥಾನದ ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ರಾಜ್ಯದ ಪಕ್ಷದ ಸಂಸದರೊಂದಿಗೆ ಕೊರೋನಾ ಬಿಕಟ್ಟಿನ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿದರು. ಭಾರತದಲ್ಲಿ 2 ಭಾರತೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು, ಈವರೆಗೆ 18 ಕೋಟಿ ಜನ ಲಸಿಕೆ ಪಡೆದಿದ್ದಾರೆ. ಸದ್ಯ ಲಸಿಕೆ ಕೊರತೆ ಕಾಡುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ ಎಂದು […]

ಕ್ರೀಡೆ

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟಿ 20 ಕ್ರಿಕೆಟ್ ರದ್ದು

ಕೋಲಂಬಿಯಾ prajakiran.com : ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಪಂದ್ಯಾವಳಿ ರದ್ದಾಗಿದೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯ ಕೋವಿಡ್ ಕಾರಣದಿಂದ ರದ್ದಾಗಿ, ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಕೋವಿಡ್ ಕಾರಣದಿಂದ ಈ ವರ್ಷದ ಪಂದ್ಯ ಕೂಡ ರದ್ದಾಗಿದೆ. ಕೋವಿಡ್ ಎಲ್ಲೇಡೆಯೂ ಹರಡಿ ಕಠಿಣ ಪರಿಸ್ಥಿತಿ ಉಂಟಾಗಿರುವುದರಿಂದ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿ ನಡೆಸುವುದು ಕಷ್ಟ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಯಶ್ಲೆ ಡಿ ಸಿಲ್ವ ಹೇಳಿದ್ದಾರೆ. ಈ ಬಗ್ಗೆ […]

ಅಂತಾರಾಷ್ಟ್ರೀಯ

ರಾಜಸ್ಥಾನ್ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ’ ಕೋವಿಡ್‌ಗೆ ಬಲಿ

ಜೈಪುರ್ prajakiran.com :  ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ (88) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಗನ್ನಾಥ್ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪಹಾಡಿಯಾ ನಿಧನಕ್ಕೆ ಸಿಎಂ ಅಶೋಕ್ ಗೆಹ್ಲೋಟ್, ಪಹಾಡಿಯಾ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಕೋವಿಡ್ ಅವರ ಜೀವವನ್ನು ಬಲಿಪಡೆದಿದೆ. ಮೊದಲಿನಿಂದಲೂ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು ಎಂದು ಸಂತಾಪ ಸೂಚಿಸಿದ್ದಾರೆ.  Share on: WhatsApp

ಅಂತಾರಾಷ್ಟ್ರೀಯ

ಜುಲೈ ಅಂತ್ಯಕ್ಕೆ ನಿಯಂತ್ರಣಕ್ಕೆ ಬರಲಿದೆ ಕೋವಿಡ್ ಎರಡನೇ ಅಲೆ : ಮುಂದಿನ 6-8 ತಿಂಗಳಲ್ಲಿ ಮೂರನೇ ಅಲೆ

ನವದೆಹೆಲಿ Prajakiran.com : ಕೊರೋನಾ ಎರಡನೇ ಅಲೆ ಜುಲೈ ಅಂತ್ಯದ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ನೇಮಿಸಿರುವ ಸಮಿತಿ ತಿಳಿಸಿದೆ. ಇದಾದ ನಂತರ ಮುಂದಿನ 6 ರಿಂದ 8 ತಿಂಗಳ ಅವಧಿಯಲ್ಲಿ 3ನೇ ಅಲೆ ಅಪ್ಪಳಿಸಲಿದೆ. ಅಷ್ಟರೊಳಗೆ ದೇಶವಾಸಿಗಳು 2 ಬಾರಿ ಲಸಿಕೆ ಹಾಕಿಸಿಕೊಂಡಲ್ಲಿ ಶೇ.99ರಷ್ಟು ಆತಂಕಪಡುವ ಅಗತ್ಯವಿಲ್ಲ. ಸಮಿತಿಯ ಪ್ರಕಾರ ಮಾಸಾಂತ್ಯದಲ್ಲಿ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ 1.5 ಲಕ್ಷಕ್ಕೆ ಕುಸಿಯಲಿದೆ. ಜೂನ್‌ ಅಂತ್ಯದೊಳಗೆ ದಿನವಹಿ 20,000 ಪ್ರಕರಣಗಳಿಗೆ […]

ಅಂತಾರಾಷ್ಟ್ರೀಯ

ತೌಕ್ತೆ ಚಂಡಮಾರುತ : ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

ಅಹಮದಾಬಾದ್ prajakiran.com : ‘ತೌಕ್ತೆ’ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ. ಈ ಕುರಿತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಹಿತಿ ನೀಡಿದ್ದು, ‘ತೌಕ್ತೆ’ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. ಗುಜರಾತ್ ಸರ್ಕಾರದ ವರದಿ ಪ್ರಕಾರ 45 ಜನರು ‘ತಾಕ್ತೆ’ ಅಬ್ಬರಕ್ಕೆ ಜೀವ ಕಳೆದುಕೊಂಡಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ಗೆ ಭೇಟಿ, ಚಂಡಮಾರುತದಿಂದ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ […]

ಅಂತಾರಾಷ್ಟ್ರೀಯ

ಸಿಡಿಲು ಬಡಿದು ಪ್ರಜ್ಞೆ ತಪ್ಪಿದವನ ಎಚ್ಚರ ಮಾಡಲು ಸಗಣಿಯಲ್ಲಿ ಹೂತ ಜನ….!

ಛತ್ತಿಸಗಡ prajakiran. com : ಸಿಡಿಲ ಬಡಿತದಿಂದ ಪ್ರಜ್ಞೆ ಕಳೆದುಕೊಂಡವನಿಗೆ ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮರುಜೀವ ನೀಡಬಹುದೆಂಬ ಮೂಡನಂಬಿಕೆಯಿಂದ ಕುಟುಂಬ, ಇದೀಗ ಮನೆಯ ಸದಸ್ಯನನ್ನೇ ಕಳೆದುಕೊಂಡಿದೆ. ಈ ಅಮಾನವೀಯ ಘಟನೆ ನಡೆದಿರುವುದು ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯಲ್ಲಿ. ಲಖನ್​ಪುರ್​ ಮಟ್ಕಿ ಎಂಬುವಾತನೇ ಮೃತ ದುರ್ದೈವಿ. ಮಟ್ಕಿ ಅವರು ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಬಡಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ. ಮಟ್ಕಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ತಲೆ ಭಾಗವನ್ನು ಮಾತ್ರ […]

ಅಂತಾರಾಷ್ಟ್ರೀಯ

ಕೊರೋನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಅವಶ್ಯ : ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ prajakiran.com : ಮಹಾಮಾರಿ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಸತ್ತೂರ ಬಳಿಯ ಶ್ರೀ ಸತ್ಯ ಸಾಯಿ ಕಾಲೇಜ್ ಆಫ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಜಾಗೃತರಾಗಿರಬೇಕು. […]

ರಾಜ್ಯ

ರಾಜ್ಯದ ವಕೀಲರ ಹಿತ ಕಾಯಲು 100 ಕೋಟಿ ನೀಡಲು ಒತ್ತಾಯ

ಧಾರವಾಡ prajakiran.com : ಕೊವಿಡ್ -19‌ ವೈರಸ್ ಪರಿಣಾಮವಾಗಿ ಕಳೆದ ವರ್ಷವೂ ಕೇಲವೇ ದಿನಗಳು ಮಾತ್ರ ಕಾರ್ಯಲಾಪಗಳು ನಡೆದವು. ಅಲ್ಲದೇ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿತ್ರು. ಈ ವರ್ಷವೂ ಕೂಡಾ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಈ ಎರಡನೇ ಅಲೇಯ ಪರಿಣಾಮವಾಗಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ಹಾಗೂ ಸರಾಗವಾಗಿ ನಡೆದಲ್ಲಿ ಮಾತ್ರ ಪಕ್ಷಗಾರರು ನ್ಯಾಯಾಲಯಕ್ಕೆ ಬರಲು ಅನುಕೂಲವಾಗುತ್ತದೆ. ಅಲ್ಲದೇ […]

ರಾಜ್ಯ

ರಾಜ್ಯದಲ್ಲಿ ಬುಧವಾರ 49,953 ಜನ ಕರೋನಾದಿಂದ ಗುಣಮುಖ

ಬುಧವಾರವು 34,281 ಕರೋನಾ ಪಾಸಿಟಿವ್ ರಾಜ್ಯದಲ್ಲಿ 468 ಜನ ಸಾವು ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಬುಧವಾರ ಬರೋಬ್ಬರಿ 468 ಜನ ಸಾವನ್ನಪ್ಪಿದ್ದಾರೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 34,281 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 23,06,655 ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಬುಧವಾರ ರಾಜ್ಯದಲ್ಲಿ 34,281 ಜನರಲ್ಲಿ […]