ಸಿನಿಮಾ

ತಮಿಳು ಹಾಸ್ಯ ನಟ ವಿವೇಕ್ ಇನ್ನು ನೆನಪು ಮಾತ್ರ

ಚೆನ್ನೈ (ತಮಿಳುನಾಡು) prajakiran.com :
ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಹಾಸ್ಯ ನಟ ವಿವೇಕ್ (59) ಶನಿವಾರ ಬೆಳಗಿನ ಜಾವ 4.55 ಕ್ಕೆ ವಿಧಿವಶರಾದರು.

ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೇಯಷ್ಟೇ ಆರೋಗ್ಯ ಪರಿಶೀಲನೆ ಮಾಡಿದ್ದ  ವೈದ್ಯರು
ವಿವಿಧ ತಪಾಸಣೆ ಮಾಡಿದ್ದರು.

ವಿವೇಕ್ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶನಿವಾರ ಬೆಳಗಿನ ಜಾವ ಮತ್ತೆ
ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಸಿಮ್ಸ್ ಆಸ್ಪತ್ರೆ ವೈದ್ಯ ಡಾ. ಶಿವಸ್ವಾಮಿ ತಿಳಿಸಿದ್ದಾರೆ.

 ವಿವೇಕ್ಅವರು ತಮ್ಮ ಹಾಸ್ಯ ನಟನೆಯಿಂದ ತಮಿಳು ಚಿತ್ರರಂಗದಲ್ಲಿ ನೂರಾರು ಸಿನಿಮಾ ಗಳಿಗೆ ವಿವಿಧ ರೀತಿಯ ಗೆಟ್ ಅಪ್ ಗಳಲ್ಲಿ ಮಿಂಚಿ, ತಮ್ಮದೆ ಆದ ಅಭಿಮಾನಿಗಳನ್ಬು ಹೊಂದಿದ್ದರು. 

ಅವರು ತಮ್ಮ ಹಾವ ಭಾವ ನಟನೆಯಿಂದ ತಮಿಳು ಸಿನಿಮಾ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.

ಅವರ ಅಕಾಲಿಕ ನಿಧನ  ತಮಿಳು ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಇಂತಹ ಅದ್ಬುತ ನಟ ವಿವೇಕ್ ಇನ್ನು ನೆನಪು ಮಾತ್ರ .

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *