ಸಿಎಂ ಬಿಎಸ್ ವೈ ಅಳಿಯನಿಗೂ ಪಾದಿಟಿವ್
ಬೆಂಗಳೂರು prajakiran.com : ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇಂದು ಅವರ ಮೊಮ್ಮಗಳು ಹಾಗೂ ಅವರ ಪತಿಗೆ ಕೊರೋನಾ ಸೋಂಕು ತಗುಲಿದೆ.
ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ಎರಡನೇ ಬಾರಿ ದೃಢಪಟ್ಟಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಡುವೆ ಮೊಮ್ಮಗಳು ಡಾ. ಸೌಂದರ್ಯ ಹಾಗೂ ಅವರ ಪತಿ ಡಾ. ನಿರಂಜನ್ಗೂ ಕೊರೋನಾ ಸೋಂಕು ದೃಢಪಟ್ಟಿದೆ.
ಸೌಂದರ್ಯ ನಿನ್ನೆಯೇ ಆಸ್ಪತ್ರೆಗೆ ದಾಖಲಾಗಿದ್ದು, ಡಾ. ನಿರಂಜನ್ ಎ.15 ರಂದೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಮೂವರು ಒಂದೇ ಆಸ್ಪತ್ರೆಯಲ್ಲಿದ್ದು ಅಕ್ಕಪಕ್ಕದ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.