ಮುಂಬೈ Prajakiran.com : ಬಾಲಿವುಡ್ ನಟಿ, ಫ್ಯಾಶನ್ ಡಿಸೈನರ್ ಮಂದಿರ ಬೇಡಿ ಪತಿ, ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ (49) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಮೃತಪಟ್ಟಿದ್ದಾರೆ.
ರಾಜ್ ಕೌಶಲ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ಬೇಗ ನಾವು ಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ ಅವರನ್ನು ಕಳೆದುಕೊಳ್ಳುವಂತಾಗಿದೆ. ಇದೊಂದು ಆಘಾತಕಾರಿ ಸುದ್ದಿ.
ನನ್ನ ಮೊದಲ ಸಿನಿಮಾ ಮೈ ಬ್ರದರ್ ನಿಖಿಲ್ ನಿರ್ಮಾಪಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಒನಿರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜ್ ಕೌಶಲ್ ಅವರು ಪ್ಯಾರ್ ಮೈನೆ ಕಭೀ ಕಭೀ, ಶಾದಿ ಕಾ ಲಡ್ಡೂ , ಮೈ ಬ್ರದರ್ ನಂತಹ ಹಲವು ಸಿನಿಮಾಗಳ ನಿರ್ಮಾಪಕರಾಗಿದ್ದಾರೆ. ನಂತರ ನಿರ್ದೇಶನದಲ್ಲಿ ತೊಡಗಿದ್ದರು.