ರಾಜ್ಯ

ಶಿವಮೊಗ್ಗ ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ : ಎರಡು ದಿನ ಕರ್ಫ್ಯೂ ಜಾರಿ, ಇಬ್ಬರ ಬಂಧನ

ಶಿವಮೊಗ್ಗ prajakiran.com : ಶಿವಮೊಗ್ಗದ ಕುಂಬಾರ ಬೀದಿ ನಿವಾಸಿಯಾಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷ ಸೀಗೆಹಟ್ಟಿ, ಫೆ.20 ರಂದು ರಾತ್ರಿ ಹೋಟೆಲ್‌ ನಲ್ಲಿ ಊಟ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆಯ ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತಿ ಕಾಲೋನಿ ಕ್ರಾಸ್‌ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು‌

ಈ ಕುರಿತು ಅವರ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಕಲಂ 302 ಐಪಿಸಿ ಪ್ರಕರಣ ದಾಖಲಾಗಿದೆ‌.

ಸದರಿ ಪ್ರಕರಣದ ವಿಶೇಷ ತನಿಖಾ ತಂಡವು ಫೆ. 21 ರಂದು ಆರೋಪಿಗಳಾದ ಖಾಸಿಫ್‌, (30) ಬುದ್ಧಾನಗರ, ಶಿವಮೊಗ್ಗ ಮತ್ತು ಸೈಯ್ಯದ್‌ ನಧೀಂ, (20), ಜೆಪಿ ನಗರ, ಶಿವಮೊಗ್ಗ ದಸ್ತಗಿರಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಐಜಿಪಿ ಮುರುಗನ್ ತಿಳಿಸಿದ್ದಾರೆ.

ಹರ್ಷ ಹತ್ಯೆ ನಡೆದ ನಂತರ ನಗರದಲ್ಲಿ ಪ್ರಕ್ಷ್ಯುಬ್ದ ವಾತವರಣ ಉಂಟಾಗಿದೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು,ಹಲವರ ಮೇಲೆ ಹಲ್ಲೆ ನಡೆದಿವೆ.

ನಗರದಲ್ಲಿ ನಡೆದ ಗಲಭೆ ದೃಶ್ಯಗಳನ್ನು ಕಂಡು ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದಾರೆ‌.

ಹತ್ಯೆಗೊಳಗಾದ ಯುವಕನ ಕುಟುಂಬದ ಮೇಲೆ ಹಾಗೂ ಪತ್ರಿಕಾ ಛಾಯಾಗ್ರಾಹಕರ ಮೇಲೆ ಕೂಡ ಹಲ್ಲೆಗಳಾಗಿವೆ.

ಹೀಗಾಗಿ ಶಿವಮೊಗ್ಗದಲ್ಲಿ ಎರಡು ದಿನ ಕರ್ಫ್ಯೂ ಜಾರಿ ಮಾಡಲಾಗಿದೆ.

ಶಿವಮೊಗ್ಗ ನಗರದಲ್ಲಿ ಜರುಗಿದ ಕೋಮು ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಫೆ. 23-02-2022 ರ ರಾತ್ರಿ 9-00 ಗಂಟೆಯ ವರೆಗೆ CRPC ಕಲಂ 144 ರೀತ್ಯಾ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. 

ದಿನಾಂಕಃ22-02-2022 ರಂದು ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.ಶಿ

ಶಿವಮೊಗ್ಗ ನಗರದಾದ್ಯಾಂತ ಬುಧವಾರ ಮುಂಜಾನೆ ವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *