ಸಿನಿಮಾ

ನಟಿ ಸಂಜನಾ ಗಲ್ರಾನಿ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ

ಬೆಂಗಳೂರು prajakiran.com :  ಒಂದು ವಾರಗಳ ಕಾಲ ಸಿಸಿಬಿ ವಿಚಾರಣೆ ಎದುರಿಸಿದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಿಚಾರಣೆಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದ್ದು, ಸಿಸಿಬಿ ಇನ್ನು ವಿಚಾರಣೆ ಬಾಕಿಯಿರುವುದರಿಂದ ಐದು ದಿನಗಳ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.

 ನಟಿ ರಾಗಿಣಿ 11 ದಿನಗಳ ವಿಚಾರಣೆ ಎದುರಿಸಿ ಇದೀಗ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಹೋದ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.

ನಟಿ ಸಂಜನಾ ಗಲ್ರಾನಿಗೆ ಪೊಲೀಸ್ ಕಸ್ಟಡಿ ನೀಡಲು ಸೂಕ್ತ ಸಾಕ್ಷ್ಯಗಳಿಲ್ಲ. ರಿಮಾಂಡ್ ಅರ್ಜಿಯಲ್ಲಿ ಸಂಜನಾ ಹೆಸರಿಲ್ಲ. ಹೀಗಾಗಿ ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಅವರ ವಕೀಲರು ಮನವಿ ಮಾಡಿದರು.

ಆದರೆ ಸಿಸಿಬಿ ಪರ ವಾದಿಸಿದ ವಕೀಲರು ಈ ಪ್ರಕರಣದಲ್ಲಿ ಇನ್ನು ಸಾಕಷ್ಟು ಮಹತ್ವದ ವಿಚಾರಣೆ  ಬಾಕಿ ಇದೆ. ಸಾಕಷ್ಟು ಆರೋಪಿಗಳ ಜೊತೆಗೆ ಸಂಜನಾ ಒಡನಾಟವಿದೆ. ಅವರ ಬಳಿಯಿರುವ ಮಹತ್ವದ ಸಾಕ್ಷ್ಯ ಸಂಗ್ರಹಿಸಬೇಕು ಎಂದು ವಾದ ಮಂಡಿಸಿದರು.

ಅದರಲ್ಲೂ ವಿಶೇಷವಾಗಿ ಡ್ರಗ್ಸ್ ಮೂಲದ ವಿಚಾರಣೆ, ಸಿಮ್ ಇಲ್ಲದ ಮೊಬೈಲ್ ಬಳಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಡ್ರಗ್ಸ್ ಸರಬರಾಜಿಗೆ ಹಣ ಎಲ್ಲಿಂದ ಬಂದಿದೆ ಎಂಬುದು ಪತ್ತೆ ಮಾಡಬೇಕು ಎಂದು ನ್ಯಾಯಾಲಯದ ಗಮನ ಸೆಳೆದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿ ಬದಲಿಗೆ   ಕೇವಲ ಮೂರು ದಿನಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ಎ 14 ಆರೋಪಿಯಾಗಿರುವ ನಟಿ ಸಂಜನಾಗಲ್ರಾನಿ  ಮತ್ತೆ ಪೊಲೀಸ್ ಕಸ್ಟಡಿ ಬಂದಿದ್ದು, ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *