ಚಿಕ್ಕಮಗಳೂರು prajakiran.com : ಶಾಲೆಯಲ್ಲಿ ಶಿಕ್ಷಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ಮಲೆನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಉಪ್ಪಳ್ಳಿ ಯಲ್ಲಿರುವ ಯುನಿಟೈಡ್ ಶಾಲೆಯಲ್ಲಿಯೇ ಈ ಕೈ ಕೈ ಮಿಲಾಯಿಸಿದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆಬಂದಿದೆ.
ಸಲೀಂ ಹಾಗೂ ಜಮೀರ್ ಎಂಬುವರು ಈ ಶಾಲೆಯನ್ನು ಟ್ರಸ್ಟ ಮಾಡಿಕೊಂಡು ನಡೆಸುತ್ತಿದ್ದರು. ಇದೀಗಅದೇ ಹೆಸರಿನಲ್ಲಿ ನ್ಯೂ ಯುನಿಟೈಡ್ ಶಾಲೆ ಆರಂಭಿಸಿದ್ದಕ್ಕೆ ಈ ಗುದ್ದಾಟ ನಡೆದಿದೆ.
ಹಣಕಾಸು ಅವ್ಯವಹಾರ ಆರೋಪದ ಮೇಲೆ ಶಾಲಾ ಕೊಠಡಿಯಲ್ಲಿಯೇ ಹೊಡೆದಾಟ ನಡೆದಿದ್ದು, ಜಂಗೀಕುಸ್ತಿ ಯಲ್ಲಿ ಪುರುಷ ಮಹಿಳಾ ಸಿಬ್ಬಂದಿ ಎಂದು ಲೆಕ್ಕಿಸದೆ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಇವರ ಹೊಡೆದಾಟ ನೋಡಿದರೆ ಮಕ್ಕಳಿಗೆ ಇನ್ನೇನ್ ಪಾಠ ಮಾಡ್ತಾರೆ ಎಂದು ಶಾಲೆಯ ಮಾನ ಹರಾಜು ಆಗಿದೆ.
ಇದರಿಂದಾಗಿ ಶಾಲೆಯ ಇನ್ನುಳಿದ ಸಿಬ್ಬಂದಿಕಂಗಾಲು ಆಗಿದ್ದಾರೆ. ಯಾರು ಹಣ ತಿಂದಿದ್ದಾರೆ ಎಂಬುದು ಗೊತ್ತಿದೆ ಎಂದು ನಿಂದಿಸಿಕೊಂಡಿದ್ದಾರೆ.
ಶಾಲಾ ಆವರಣದಲ್ಲಿಯೇ ಪರಸ್ಪರ ತಿಕ್ಕಾಟ ನಡೆಯಲು ನ್ಯೂ ಯುನಿಟೈಡ್ ಹೆಸರಲ್ಲಿ ಮತ್ತೊಂದು ಶಾಲೆ ಆರಂಭ ಮಾಡಿದ್ದಕ್ಕೆ ಜಮೀರ್ ಹಾಗೂ ಸಲೀಂ ನಡುವೆ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದೆ.
ಈಗಾಗಲೇ ಈ ಸಂಬಂಧ ಸಲೀಂಗೆ ನೋಟಿಸ್ ಕೊಟ್ಟಿದ್ದರು. ಸಲೀಂ ಹಾಗೂ ಪತ್ನಿಯನ್ನು ಉಚ್ಛಾಟನೆ ಮಾಡಿರುವುದಾಗಿ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದರು.
ಮತ್ತೋಂದು ಶಾಲೆ ಮಾಡಲು ಹುನ್ನಾರ ನಡೆಸಿದ್ದರಿಂದ ಈ ತಿಕ್ಕಾಟ ನಡೆದಿದ್ದು, ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ನೋಡಬೇಕಿದೆ.