ರಾಜ್ಯ

ಸಾರಿಗೆ ನೌಕರರ ಹೋರಾಟ : ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ

ಧಾರವಾಡ prajakiran.com : ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿರುವ ಸಾರಿಗೆ ಸಂಸ್ಥೆಯ ನೌಕರರನ್ನು ಹಿರಿಯ ಅಧಿಕಾರಿಗಳು, ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಎಚ್.ನೀರಲಕೇರಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು,ಈ ಮೂಲಕ ಸರಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆಕ್ರೋಷವ್ಯಕ್ತಪಡಿಸಿದರು.

ಕಳೆದ ೪ ದಶಕಗಳಿಂದ ಸಿಬ್ಬಂದಿಗೆ ಹಿಂಸೆ ಕೊಟ್ಟಿದ್ದಾರೆ. ಕಾರ್ಮಿಕ ಇಲಾಖೆ, ಸರ್ಕಾರದ ನಿಗಮದಿಂದ ಸೌಲಭ್ಯಗಳನ್ನು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.

ಒಂದು ಕಡೆ ಕೋವಿಡ್ ನೆಪ, ಇನ್ನೊಂದು ಕಡೆ ಎಲೆಕ್ಷನ್ ನೆಪ ಹೇಳುತ್ತಾರೆ. ಆದರೆ, ಶೇ.೮ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ಹೇಳುತ್ತಾರೆ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗೋದಿಲ್ಲವೇ ಎಂದರು.

ಸರಕಾರ ನೌಕರರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಡುವುದಕ್ಕೆ ಆಗುತ್ತಿಲ್ಲ. ಈ ಕುರಿತು ಪ್ರತಿಭಟನೆಗೆ ಮುಂದಾದರೆ ಎಸ್ಮಾ ಜಾರಿ ಮಾಡುವುದಗಿ ಬೆದರಿಕೆ ಹಾಕಲಾಗುತ್ತಿದೆ.ಅಲ್ಲದೇ ಕರ್ತವ್ಯಕ್ಕೆ ಬರದ ನೌಕರರ ಮನೆಗಳೀಗೆ ನೋಟಿಸು ಕೊಡಲಾಗುತ್ತಿದೆ.

ನಮ್ಮ ಕಾರ್ಮಿಕರಿಂದ ಸಂಸ್ಥಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಕಾರ್ಮಿಕರು ಭಯದ ೬ನೇ ವೇತನ ಆಯೋಗ ಜಾರಿ, ಸರಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ೯ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಸಾಕಷ್ಟು ಕಾಲಾವಕಾಶ ಕೊಟ್ಟರೂ ಸರಕಾರ ನಿರ್ಲಕ್ಷö್ಯ ತೋರಿಸುತ್ತಿದೆ ಎಂದರು.

ಸರಕಾರÀ ಅರ್ಥಿಕ ತೊಂದರೆಯನ್ನು ಕೆಳಹಂತದ ನೌಕರರಿಗೆ ಹೇಳುತ್ತಿದೆ.ಆದರೆ.ಅಧಿಕಾರಿಗಳು ತಮ್ಮ ಸಂಬಳ-ಸೌಲತ್ತುಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಇದು ಯಾವ ನ್ಯಾಯ ಎಂದು ಕಿಡಿಕಾರಿದರು.

ಚಾಲಕ-ನಿರ್ವಾಹಕರು ಹಗಲು ರಾತ್ರಿ ದುಡಿಯುತ್ತಾರೆ.ಆದೆ, ಶುಕ್ರವಾರದಿಂದ ಭಾನುವಾರದವರೆಗೆ ಸಂಶ್ಥೆಯ ಅಧಿಕಾರಿಗಳು ಕರ್ತವ್ಯದಲ್ಲೇ ಇರೊಲ್ಲ. ಎಲ್ಲೆಲ್ಲೋ ಇರೋ ಕ್ಯಾಸಿನೋಗಳಿಗೆಲ್ಲ ಹೋಗುತ್ತಿದ್ದಾರೆ.

ಇಂತಹ ವಿಷಯಗಳನ್ನು ಮುಂಬರುವ ದಿನಗಳಲ್ಲಿ ಬಯಲಿಗೆಳೆಯಬೇಕಾಗುತ್ತದೆ ಎಂದು ನೀರಲಕೇರಿ ಎಚ್ಚರಿಸಿದರು.

ನಾವು ಹಮ್ಮಿಕೊಂಡ ಮುಷ್ಕರ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಸರ್ಕಾರ ಪೊಲೀಸರ ಮೂಲಕ ಕಿರುಕುಳ ಕೊಡುತ್ತಿದೆ. ಪೊಲೀಸ್ ಇಲಾಖೆ ಬಳಸಿ ಮೊಕದ್ದಮೆ ಹಾಕಿಸುತ್ತಿದ್ದಾರೆ.

ಯಾವುದೇ ಎಫ್‌ಐಆರ್, ಎಸ್ಮಾದಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀಶೈಲಗೌಡ ಕಮತರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *