ರಾಜ್ಯ

ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಸದಸ್ಯರ ಅನರ್ಹತೆ ಎತ್ತಿ ಹಿಡಿದ ಹೈಕೋರ್ಟ್

ಧಾರವಾಡ prajakiran.com : ಆಪರೇಷನ್ ಕಾಂಗ್ರೆಸ್ ಗೆ ಒಳಗಾಗಿದ್ದ ಧಾರವಾಡ ಜಿಲ್ಲೆಯ ನಾಲ್ವರು ಬಿಜೆಪಿ ಜಿಪಂ ಸದಸ್ಯರ ಅನರ್ಹತೆಯನ್ನು ಧಾರಾವಾಡ ಹೈಕೋರ್ಟ್ ಎತ್ತಿ ಹಿಡಿದಿದೆ. ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣಕುಮಾರ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ನಾಲ್ವರು ಬಿಜೆಪಿ ಸದಸ್ಯರಾದ ಗುಡಗೇರಿ ಕ್ಷೇತ್ರದ ಜ್ಯೋತಿ ಶಿವಾನಂದ ಬೆಂತೂರ, ಗರಗ ಕ್ಷೇತ್ರದ ರತ್ನಾ ಪಾಟೀಲ, ತಬಕದ ಹೊನ್ನಳ್ಳಿ ಕ್ಷೇತ್ರದ ಮಂಜವ್ವ ಹರಿಜನ ಹಾಗೂ ಗಳಗಿಹುಲಕೊಪ್ಪದ ಅಣ್ಣಪ್ಪ ದೇಸಾಯಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ಚುನಾವಣಾ […]

ರಾಜ್ಯ

ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ ಬಿ. ಅಧಿಕಾರ ಸ್ವೀಕಾರ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುಶೀಲಾ ಬಿ. ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ.ಬಿ.ಸಿ.ಸತೀಶ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ಹೈದರಾಬಾದಿನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ.ಸುಶೀಲಾ ಅವರು, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ ೨೦೧೩ ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆಗೆ ಅರ್ಹತೆ ಪಡೆದರು. ಪುನಃ ೨೦೧೫ ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ […]

ರಾಜ್ಯ

ಕೇಂದ್ರ ಸರಕಾರದ ಯೋಜನೆಗಳು ಅನರ್ಹರ ಪಾಲಾದರೆ ಕ್ರಿಮಿನಲ್ ಪ್ರಕರಣ….!

ಧಾರವಾಡ prajakiran.com  : ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ, ವಸತಿ ಯೋಜನೆಗಳಲ್ಲಿ ಕೇಂದ್ರ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭ್ರಷ್ಟಾಚಾರ, ಯಾವುದೇ ರೀತಿಯ ಒತ್ತಡಗಳಿಗೆ ಅವಕಾಶ ಮಾಡುವ ಮತ್ತು ತಪ್ಪು ಮಾಹಿತಿ ದಾಖಲಿಸಿ ಯೋಜನೆಗಳ ಲಾಭ ಅನರ್ಹರಿಗೆ ತಲುಪಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಓ ಅವರಿಗೆ ಸೂಚಿಸಿದರು. ಅವರು ಮಂಗಳವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವೆಬೆಕ್ಸ್ ಮೂಲಕ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕೃತ […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣ : ನಿವೃತ್ತ ಪೊಲೀಸ್ ಆಯುಕ್ತ ಸೇರಿ 6 ಪೊಲೀಸರ ವಿಚಾರಣೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿವೃತ್ತ ಪೊಲೀಸ್ ಆಯುಕ್ತ ಸೇರಿ 6 ಪೊಲೀಸರ ವಿಚಾರಣೆ ನಡೆದಿದೆ ಅಂದಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಜಿನೇಂದ್ರ ಖಣಗಾವಿ, ಧಾರವಾಡ ಎಸಿಪಿ ವಾಸುದೇವ ನಾಯ್ಕ, ಅಂದಿನ ಉಪನಗರ ಪೊಲೀಸ್ ಇನ್ಸಪೆಕ್ಟರ್ ಗಳಾದ ಚನ್ನಕೇಶವ ಟಿಂಗರಿಕರ್ ಹಾಗೂ ಮೋತಿಲಾಲ್ ಪವಾರ್ ಸೇರಿ ಹಲವು ಪೊಲೀಸರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಎಸಿಪಿ, ಇನ್ಸಪೆಕ್ಟರ್ ಸೇರಿ 6 ಜನರ ವಿಚಾರಣೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಧಾರವಾಡ ಎಸಿಪಿ ಹಾಗೂ ಸದ್ಯ ಗದಗ ಎಸಿಬಿ ಡಿವೈಎಸ್ಪಿ ಆಗಿರುವ ವಾಸುದೇವ ನಾಯ್ಕ, ಅಂದಿನ ಉಪನಗರ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ್ ಸೇರಿ ಆರು ಜನ ಪೊಲೀಸರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿ ರಾತ್ರಿಯವರೆಗೆ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ. 2016ರ […]

ರಾಜ್ಯ

ಧಾರವಾಡ ಜಿಪಂ ಸದಸ್ಯತ್ವ ಅನರ್ಹ ಪ್ರಕರಣ : ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ

ಧಾರವಾಡ prajakiran.com : ಭಾರತೀಯ ಜನತಾ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ  ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ಜೂ. ೧೦ ರಂದು ರಾಜ್ಯ ಚುನಾವಣಾ ಆಯೋಗವು ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ […]

ರಾಜ್ಯ

ಧಾರವಾಡ ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಧಾರವಾಡ prajakiran.com : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ  ಹಳೇ ತೇಗೂರ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ರೈತ- ಕೃಷಿಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಧಾರವಾಡ ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನೆಡೆಸಲಾಯಿತು.  ಇಲ್ಲಿಯವರೆಗೆ ಮಾಡಿದ ೨೬ ದಿನಗಳ ಕೂಲಿಯನ್ನು ಬಿಡುಗಡೆ ಈ ಕೂಡಲೇ  ಮಾಡಬೇಕು ಎಂದು ಒತ್ತಾಯಿಸಿದರು.  ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ  ಅನೂಕೂಲವಾಗಲಿ […]

ರಾಜ್ಯ

ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಬಿಜೆಪಿ ಸದಸ್ಯರ ಅನರ್ಹಗೊಳಿಸಿದ ಚುನಾವಣಾ ಆಯೋಗ

ಧಾರವಾಡ prajakiran.com : ಬಿಜೆಪಿ ಪಕ್ಷ ನೀಡಿದ ವಿಪ್ ಉಲ್ಲಂಘಿಸಿರುವ  ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಬಿಜೆಪಿ ಸದಸ್ಯರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿ ಆದೇಶಿಸಿದೆ. ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ ಮತ್ತು ಗರಗ ಜಿಪಂ ಸದಸ್ಯರಾದ ರತ್ನಾ ದಯಾನಂದ ಪಾಟೀಲ ಅನರ್ಹಗೊಂಡ ಸದಸ್ಯರಾಗಿದ್ದಾರೆ.  ಕಳೆದ ವರ್ಷದ ಫೆಬ್ರುವರಿ ೫ […]

ರಾಜ್ಯ

ಧಾರವಾಡದಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ನೌಕರ ಅಮಾನತು

ಧಾರವಾಡ prajakiran.com : ಮಹಿಳಾ  ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಧಾರವಾಡದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನೌಕರರೊಬ್ಬರನ್ನು ಅಮಾನತು ಮಾಡಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ ಗುರುರಾಜ ಕುಲಕರ್ಣಿ ಎಂಬುವರೇ ಅಮಾನತುಗೊಂಡ ನೌಕರನಾಗಿದ್ದು, ಅಚ್ಚರಿ ಸಂಗತಿಯೆಂದರೆ ಇವರೇ ಪ್ರಭಾರ ನಿರ್ದೇಶಕ ಹುದ್ದೆ ಕೂಡ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.   ಗುರುರಾಜ ಕುಲಕರ್ಣಿ ಅವರು ಲೈಂಗಿಕ ಕಿರುಕುಳ ನಡೆಸಿದ ಬಗ್ಗೆ ಮಹಿಳಾ ಸಹೋದ್ಯೋಗಿ ದೂರು […]