ರಾಜ್ಯ

ರಾಜ್ಯದಲ್ಲಿ ಶನಿವಾರ ಕರೋನಾಕ್ಕೆ ಬರೋಬ್ಬರಿ 72 ಸಾವು,  5072 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ72 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 5072  ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 90942 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 2403 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 33750 ಜನ ಗುಣಮುಖರಾಗಿದ್ದು,  55388 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 611 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಶನಿವಾರವೂ […]

ರಾಜ್ಯ

ಬೆಂಗಳೂರಿನಲ್ಲಿ ಸೋಂಕಿತರಿಗೆ ಬೆಡ್ ಗಳೇ ಸಿಗ್ತಿಲ್ಲ…. ಮುಂದುವರೆದ ರೋಗಿಗಳ ಪರದಾಟ…!

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಗೂ ಕೋವಿಡ್ ಯೇತರ ರೋಗಿಗಳಿಗೆ ಬೆಡ್ ಗಳೇ ಸಿಗುತ್ತಿಲ್ಲ. ತಮ್ಮ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಮಕ್ಕಳು ಪರದಾಡುತ್ತಿದ್ದರೆ, ಮಕ್ಕಳನ್ನು, ಸಂಬಂಧಿಕರನ್ನು ಉಳಿಸಿಕೊಳ್ಳಲು ಪೋಷಕರು ಹಾಗೂ ಕುಟುಂಬಸ್ಥರು ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಅಮ್ಮನ ಉಳಿಸಿಕೊಳ್ಳಲು ಮಗನ ಪರದಾಟ ಒಂದೆಡೆಯಾದರೆ, ತಂದೆಯನ್ನು ಉಳಿಸಿಕೊಳ್ಳಲು ಇಬ್ಬರು ಪುತ್ರರ ಹೆಣಗಾಟ ಬೆಂಗಳೂರಿನಲ್ಲಿ ಕಂಡು ಬಂದಿದೆ. ಮೂರು ನಾಲ್ಕು ಆಸ್ಪತ್ರೆ ಅಲೆದಾಟ […]

ಅಪರಾಧ

ವಿದ್ಯುತ್ ಮಗ್ಗಕ್ಕೆ ನೇಣು ಹಾಕಿಕೊಂಡು ನೇಕಾರ ಆತ್ಮಹತ್ಯೆ ….!

ಬೆಂಗಳೂರು prajakiran.com : ವಿದ್ಯುತ್ ಮಗ್ಗಕ್ಕೆ ನೇಣು ಹಾಕಿಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದ ರಾಜಧಾನಿಯಲ್ಲಿಯೇ ನಡೆದಿದೆ. ಕೊರೋನಾ ಲಾಕ್ ಡೌನ್ ನಿಂದ ಎದುರಾದ ಸಂಕಷ್ಟವನ್ನು ಎದುರಿಸಲಾಗದ ನೇಕಾರನೊಬ್ಬ ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮೃತ ನೇಕಾರನನ್ನು 55 ವರ್ಷದ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಾಡ್೯ ನಂ 5ರ ಅಗ್ರಹಾರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಪತಿ […]

ರಾಜ್ಯ

ರಾಜ್ಯದಲ್ಲಿ ಗುರುವಾರ ಕರೋನಾಕ್ಕೆ  97 ಸಾವು,  5030 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ97  ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 5030  ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  80863 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ2071 ಜನ ಬಿಡುಗಡೆಗೊಂಡಿದ್ದು,  ಈವರೆಗೆ ಒಟ್ಟು  29310 ಜನ ಗುಣಮುಖರಾಗಿದ್ದು,   49931 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 640 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಗುರುವಾರವೂ 97 […]

ರಾಜ್ಯ

ಹಳ್ಳಿಹಕ್ಕಿ ಹೆಚ್. ವಿಶ್ವನಾಥ, ಸಿ.ಪಿ. ಯೋಗೇಶ್ವರ ಸೇರಿ ಐವರು ಮೇಲ್ಮನೆ ಪ್ರವೇಶ

ಬೆಂಗಳೂರು prajakiran.com : ಹುಣಸೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ ಹಾಗೂ ಚೆನ್ನಪಟ್ಟಣದಲ್ಲಿ ಸೋಲು ಅನುಭವಿಸಿದ್ದ ಸಿ.ಪಿ. ಯೋಗೀಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಶಾಂತಾರಾಮ್ ಸಿದ್ದಿ, ತಳವಾರ ಸಾಬಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಶಿಫಾರಸ್ಸು ಮಾಡಿದ ಎಲ್ಲರ ಹೆಸರುಗಳಿಗೆ ರಾಜ್ಯಪಾಲ ವಜುಬಾಯಿ ರೂಢೂಬಾಯಿ ವಾಲಾ ಅಂತಿಮ ಮುದ್ರೆ ಒತ್ತಿದ್ದಾರೆ. ಆ ಮೂಲಕ […]

ರಾಜ್ಯ

ಬೆಡ್ ಸಿಗದ ಹಿನ್ನಲೆಯಲ್ಲಿ 20 ಸಾವಿರ ಕೊಟ್ಟು ಆಸ್ಪತ್ರೆಗೆ ದಾಖಲಾದ ವರ್ಕ್ ಇನ್ಸಪೆಕ್ಟರ್ ….!

ಬೆಂಗಳೂರು prajakiran.com : ರಾಜ್ಯದ ರಾಜಧಾನಿಯಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. 3-4 ಆಸ್ಪತ್ರೆ ಸುತ್ತಾಡಿದರೂ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ ಎಂಬ ಕಾರಣಕ್ಕೆ  20 ಸಾವಿರ ಕೊಟ್ಟು ವರ್ಕ್ ಇನ್ಸಪೆಕ್ಟರ್ ಒಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಬಿಎಂಪಿಯ ವರ್ಕ್ ಇನ್ಸಪೆಕ್ಟರ್ ಅವರಿಗೆ ಇಂತಹ ದಯನೀಯ ಪರಿಸ್ಥಿತಿ ಬಂದಿದೆ. ಇಂತಹ ಘಟನೆ ಯಾರಿಗೂ ಬರಬಾರದು. ಬಿಬಿಎಂಪಿ ಸಿಬ್ಬಂದಿಗೆ ಇಂತಹ ಸಂಕಷ್ಟ ಎದುರಾದರೆ ಹೇಗೆ. ಯಾರೊಬ್ಬ ಅಧಿಕಾರಿಗಳು ನಮಗೆ ಕ್ಯಾರೆ ಎನ್ನುತ್ತಿಲ್ಲ ಎಂಬ […]

ರಾಜ್ಯ

ರಾಜ್ಯದಲ್ಲಿ ಶನಿವಾರ ಕರೋನಾಕ್ಕೆ 93 ಸಾವು, 4537 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 93 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 4537 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 59652 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 1018 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  21775 ಜನ ಗುಣಮುಖರಾಗಿದ್ದು,  36631 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 580 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ […]

ರಾಜ್ಯ

ಬೆಂಗಳೂರಿನ ಎಂಟು ವಲಯಗಳಲ್ಲಿ ಆಗುವ ಅನಾಹುತಗಳಿಗೆ ನೀವೇ ಹೊಣೆಗಾರರು

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿ ಸಚಿವರ ಜೊತೆಗೆ ಸಭೆ ನಡೆಸಿ ವಸ್ತು ಸ್ಥಿತಿ ಅವಲೋಕಿಸಿದರು. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಂಟು ವಲಯಗಳ ಉಸ್ತುವಾರಿ ಸಚಿವರಿಗೆ  ನಿಮ್ಮ ವಲಯಗಳಲ್ಲಿ ಆಗುವಅನಾಹುತಗಳಿಗೆ ನೀವೇ ಹೊಣೆಗಾರರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಪ್ರತಿ 50 ಬೆಡ್ ಗೆ ಒಬ್ಬ ನೋಡೆಲ್ ಅಧಿಕಾರಿ ನೇಮಿಸಿ, ನಿಮ್ಮ ವಲಯದಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ […]

ರಾಜ್ಯ

ರಾಜ್ಯದಲ್ಲಿ ಗುರುವಾರ ಕರೋನಾಕ್ಕೆ 104 ಸಾವು, 4169 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 104  ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 4169 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ          51422 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 1263 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  19729 ಜನ ಗುಣಮುಖರಾಗಿದ್ದು,   30655 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 539 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ […]

ರಾಜ್ಯ

ಬೆಂಗಳೂರು ಖಾಕಿಗೆ ಕರೋನಾ ಕಂಟಕ : ಈವರೆಗೆ 668 ಜನರಿಗೆ ಪಾಸಿಟಿವ್, 1000 ಪೊಲೀಸ್ ಕ್ವಾರಂಟಿನ್

ಬೆಂಗಳೂರು prajakiran.com : ರಾಜ್ಯದ ರಾಜಧಾನಿಯನ್ನು ಬೆಚ್ಚಿಬೀಳುವಂತೆ ಮಾಡಿರುವ ಕಿಲ್ಲರ್ ಕರೋನಾ ಕರೋನಾ ಸೇನಾನಿಯಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೆಂಗಳೂರು ನಗರವೊಂದರಲ್ಲಿಯೇ ಈವರೆಗೆ 668 ಜನ ಪೊಲೀಸರಿಗೆ ಪಾಸಿಟಿವ್ ಬಂದಿದ್ದು, 1000 ಜನ ಪೊಲೀಸರು ಹೋಂ ಕ್ವಾರಂಟಿನ್  ನಲ್ಲಿ ಇದ್ದಾರೆ. ಈವರೆಗೆ 8 ಪೊಲೀಸರು ಸಾವನ್ನಪ್ಪಿದ್ದು, ಪೊಲೀಸರ ಸಂಕಷ್ಟ ಹೇಳತೀರದಂತಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥೀತಿ ಬಿಗಡಾಯಿಸುತ್ತಿದ್ದು,  ಇಂದು ಗುರುವಾರ ಮತ್ತೇ ಮೂರು ಪೊಲೀಸ್ ಠಾಣೆ ಸೀಲ್ ಡೌನ್ ಆಗಿವೆ. ಬೆಂಗಳೂರಿನ ಶಿವಾಜಿನಗರ, ಮಾಗಡಿ ರೋಡ್ ಹಾಗೂ ಯಶವಂತಪುರ […]