ರಾಜ್ಯ

ಶಿಕ್ಷಕರು ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ವಿದ್ಯಾರ್ಥಿಗಳನ್ನು ಸಂಪರ್ಕಿಸಿ

ಧಾರವಾಡ prajakiran.com : ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡಬೇಕು ಎಂದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ ಹೇಳಿದರು.  ಅವರು ಮಂಗಳವಾರ ನಗರದ ಡಯಟ್‌ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಜಿಲ್ಲಾ ಮಟ್ಟದ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯು ಬೇರೆ ರಾಜ್ಯಗಳಲ್ಲಿಯೂ ಇದೀಗ ಅನುಷ್ಠಾನವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು. ಪ್ರತೀ ವಾರ […]

ಜಿಲ್ಲೆ

ಶಿಕ್ಷಣಾಧಿಕಾರಿಗಳ ಸಂಘದ ಬೇಡಿಕೆಗೆ ಸಚಿವರ ಭರವಸೆ

ಧಾರವಾಡ prajakiran.com : ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಸಲ್ಲಿಸಿದ ಪ್ರಮುಖ ೪ ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಭರವಸೆ ನೀಡಿದರು. ಗುರುವಾರ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಶಿಕ್ಷಣಾಧಿಕಾರಿಗಳ ಸಂಘದ ಪರವಾಗಿ ಮನವಿ ಅರ್ಪಿಸಲಾಯಿತು. ಈಗಾಗಲೇ ಡಿ.ಪಿ.ಸಿ ಆಗಿರುವ ಶಿಕ್ಷಣ ಇಲಾಖೆಯ ಗ್ರುಪ್ ಬಿ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶೀಘ್ರ ಸ್ಥಳ ನಿಯುಕ್ತಿಗೊಳಿಸುವದು. ಸರ್ಕಾರದಿಂದ ರಚನೆಯಾಗಿರುವ ಹೊಸ ತಾಲೂಕುಗಳಿಗೆ ಶೀಘ್ರವೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕಗೊಳಿಸಿ […]

ರಾಜ್ಯ

ಧಾರವಾಡದ ಕೆ ಇ ಎಸ್ ಅಧಿಕಾರಿ ಹಾಸಿಗೆ ಹಿಡಿದು 6 ವರ್ಷ ಕಳೆದರೂ ನೆರವಿಗೆ ಬಾರದ ಸರಕಾರ

ಮಹದೇವ ಮಾಳಗಿ ಕುಟುಂಬದ ದಯನೀಯ ಸ್ಥಿತಿ ನಿರ್ಲಕ್ಷಿಸಿದ ಶಿಕ್ಷಣ ಇಲಾಖೆ, ಅಧಿಕಾರಿಗಳ ವಿರುದ್ದ ಹಿಡಿಶಾಪ ಧಾರವಾಡ prajakiran.com : ಧಾರವಾಡ ಜಿಲ್ಲೆಯ ಈ ಹಿಂದಿನ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸದ್ಯ ಬೆಳಗಾವಿಯ ಡಯಟ್ ಹಿರಿಯ ಉಪನ್ಯಾಸಕ ಹುದ್ದೆಯಲ್ಲಿರುವ  ಗೆಜೆಟೆಡ್ ಅಧಿಕಾರಿ ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದರೂ ಅವರ ನೆರವಿಗೆ ಬರದೇ ಆಳುವ ಸರಕಾರಗಳು ನಿರ್ಲಕ್ಷ್ಯ ತೋರಿಸಿರುವುದು ಕುಟುಂಬದವರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಆರು ವರ್ಷದಿಂದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿಯ […]

ರಾಜ್ಯ

ರಾಜ್ಯದ 49 ಹೊಸ ತಾಲೂಕುಗಳಿಗೆ ಬಿಇಒ ನೇಮಿಸಿ

ಹುಬ್ಬಳ್ಳಿ prajakiran.com : ರಾಜ್ಯದ 49 ಹೊಸತಾಲೂಕುಗಳಿಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಬೇಕು ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷಅಶೋಕ ಸಜ್ಜನ ಮನವಿ ಮಾಡಿದ್ದಾರೆ. ಈಗಾಗಲೇ ಹೊಸದಾಗಿ  ಮಂಜೂರಾಗಿರುವ ತಾಲೂಕುಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಅನುಷ್ಠಾನ ಗೊಳಿಸುವುದಕ್ಕಾಗಿ, ವಿಶೇಷವಾಗಿ ಗ್ರಾಮೀಣ ಭಾಗದ  ಶಾಲೆಗಳಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿಪರ ದೆಸೆಯಲ್ಲಿ ಸಾಗಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶಕುಮಾರ್ ಕೂಡಲೇ ಹೊಸ ಕ್ಷೇತ್ರಶಿಕ್ಷಣಾಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆಡಳಿತಾತ್ಮಕ […]

ಜಿಲ್ಲೆ

ಗದಗನ ಶೇ. ೯೦ ಮಕ್ಕಳ ಕೈ ಸೇರಿದ ಪಠ್ಯಪುಸ್ತಕ

ಮಂಜುನಾಥ ಎಸ್. ರಾಠೋಡ ಗದಗprajakiran.com : ಕೊರೊನಾ ಭೀತಿಯಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಮನೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ೨೦೨೦-೨೧ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ೧ರಿಂದ ೧೦ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ಗದಗ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪುಸ್ತಕಗಳು ಬಂದಿವೆ. […]

ಜಿಲ್ಲೆ

ಧಾರವಾಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಧಾರವಾಡ prajakiran.com : ಧಾರವಾಡ ತಾಲೂಕಿನ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಧಾರವಾಡ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಹರವಲಯದ  ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.  ತಾಲೂಕಿಗೆ ಬಂದ ಪ್ರಥಮ ಆದಿತ್ಯ ಭಟ್ (೬೨೦ ಅಂಕ) ಬಾಲಬಳಗ ಸೃಜನ ಶೀಲ ಆಂಗ್ಲ ಮಾಧ್ಯಮ ಶಾಲೆ,  ದ್ವಿತೀಯ ಅಂಕಿತ ಪಾಟೀಲ (೬೧೯ ಅಂಕ) ಕೆ ಇ ಬೋರ್ಡ್ ಆಂಗ್ಲ ಮಾಧ್ಯಮ ಶಾಲೆ, ತೃತೀಯ ಎಸ್ ಧರಣಿ (೬೧೮ ಅಂಕ) ಪವನ […]