ರಾಜ್ಯ

ರಾಜ್ಯದಲ್ಲಿ ಭಾನುವಾರವೂ ಕರೋನಾ ಮಹಾಸ್ಪೋಟ : 37 ಸಾವು, 1925 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 37 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 1925  ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ     23474 ಕ್ಕೆ ಏರಿಕೆಯಾಗಿದೆ.



 ಇಂದು ರಾಜ್ಯದಲ್ಲಿ  603  ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  9847   ಜನ ಗುಣಮುಖರಾಗಿದ್ದು,   13251   ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.    243 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಭಾನುವಾರವೂ  37 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ  372 ಕ್ಕೆ ಏರಿಕೆಯಾದಂತಾಗಿದೆ.




ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೇ  1172 ಜನ ಸೋಂಕಿತರಿದ್ದರೆ ಇಂದು ಬರೋಬ್ಬರಿ 1235 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.



ಇನ್ನೂಳಿದಂತೆ   ದಕ್ಷಿಣ ಕನ್ನಡ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ ಹಾಗೂ ಧಾರವಾಡ 45, ಬೀದರ 29, ಮೈಸೂರು 25, ಕೊಪ್ಪಳ 22, ಉತ್ತರಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರದಲ್ಲಿ ತಲಾ 13, ಬೆಳಗಾವಿ ಹಾಗೂ ದಾವಣಗೆರೆಯಲ್ಲಿ ತಲಾ 11, ರಾಯಚೂರು ಹಾಗೂ ಮಂಡ್ಯದಲ್ಲಿ ತಲಾ 10, ಚಿಕ್ಕಮಗಳೂರು 9, ಶಿವಮೊಗ್ಗ 8, ಗದಗ 7, ರಾಮನಗರ 6, ಬಾಗಲಕೋಟೆ 4, ಚಿತ್ರದುರ್ಗ 3 ಹೀಗೆ ಒಟ್ಟು 27 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ  16 ಜನ ಸಾವನ್ನಪ್ಪಿದ್ದರೆ,  ಬೀದರನಲ್ಲಿ ಬರೋಬ್ಬರಿ 9ಜನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಲಬುರಗಿ, ಬೆಳಗಾವಿ ಹಾಗೂ ದಾವಣಗೆರೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ , ಧಾರವಾಡ, ಬಳ್ಳಾರಿ, ಹಾಸನ,  ಮೈಸೂರು, ತುಮಕೂರ  ಜಿಲ್ಲೆಯಲ್ಲಿ ತಲಾಒಬ್ಬರು ಸಾವನ್ನಪ್ಪಿದ್ದಾರೆ.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *