ಟೋಕಿಯೋ prajakiran.com : ಟೋಕಿಯೋ ಒಲಂಪಿಕ್ಸ್-2020ರಲ್ಲಿ ಭಾರತ ಶುಭಾರಂಭ ಮಾಡಿದ್ದು, 49 ಕೆಜಿ ವಿಭಾಗದ ಮಹಿಳಾ ವೇಟ್ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾಳೆ.
ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಸಮರ್ಥವಾಗಿ ಎತ್ತುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಮೀರಾಬಾರಿ ಚಾನು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಇದು ಭಾರತದ ಶ್ರೇಷ್ಠ ಸಾಧನೆಯಾಗಿದ್ದು, ಉತ್ತಮ ಆರಂಭ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿಡ್ನಿ ಒಲಂಪಿಕ್ ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ 69 ಕೆಜಿ ವೇಟ್ಲಿಫಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು