ಅಂತಾರಾಷ್ಟ್ರೀಯ

ಲೋಕಸಭೆ ಚುನಾವಣೆಯಲ್ಲಿ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ!?

*ಲೋಕಸಭೆ ಚುನಾವಣೆಯಲ್ಲಿ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ!?*

*ಮುಂದಿಟ್ಟ ಹೆಜ್ಜೆ ಹಿಂದೆ ಇಡದಂತೆ ಒತ್ತಡ*
*ಜನರ ಬೇಡಿಕೆ ನಾವೇ ಸ್ಪರ್ಧೆ ಮಾಡಬೇಕೆಂಬುದು*

*ಧಾರವಾಡ ಲೋಕಸಭೆ ಚುನಾವಣೆ ಹಿತರಕ್ಷಣಾ ಸಮಿತಿ ರಚನೆ*

*ಯಾವುದೇ ಪರಿಸ್ಥಿತಿಯಲ್ಲಿ ಜೋಶಿ ಪರಾಭವ ಗೊಳಿಸುವಲ್ಲಿ ಎರಡು ಮಾತಿಲ್ಲ*

*ನಮ್ಮ ಹೋರಾಟ ಜೋಶಿ ವಿರುದ್ಧ ಅಲ್ಲ, ಅವರ ವ್ಯಕ್ತಿತ್ವ, ನುಡಿಯ ಬಗ್ಗೆ ಮಾತ್ರ*

ಧಾರವಾಡ ಪ್ರಜಾಕಿರಣ.ಕಾಮ್ : ನಾವು ಯಾವುದೇ ಒತ್ತಡಕ್ಕೆ, ಆಮಿಷಕ್ಕೆ ಮಣಿಯೋದಿಲ್ಲ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಖಡಕ ಎಚ್ಚರಿಕೆ ನೀಡಿದರು.

ಅವರು ಮಂಗಳವಾರ ಧಾರವಾಡದ ಸೇವಾಲಯದಲ್ಲಿ ನಡೆದ ಭಕ್ತರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅವರೆಲ್ಲರೂ ಸೇರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಅಂತ ಹೇಳಿದ್ದಾರೆ. ಮಠಗಳು ಇದೀಗ ಬದಲಾಗಿವೆ. ಎಲ್ಲರೂ ಸಹ ನನಗೆ ಕರೆ ಮಾಡಿ ಮುಂದಿಟ್ಟ ಹೆಜ್ಜೆ ಹಿಂದೆ ಇಡದಂತೆ ಹೇಳಿದ್ದಾರೆ. ಜನರ ಬೇಡಿಕೆ ನಾವೇ ಸ್ಪರ್ಧೆ ಮಾಡಬೇಕೆಂಬುದು ಇದೆ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಮುಟ್ಟಿದೆ ಎಂದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ವಿಶೇಷವಾಗಿ ನನ್ನ ಹಿಂದೆ ಪ್ರಮುಖರು ಇದ್ದಾರೆ. ಅವರ ಅಂತಿಮ ತೀರ್ಮಾನವನ್ನು ಪಡೆಯುತ್ತೇನೆ. ಅತಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ‌ ನನ್ನ ತೀರ್ಮಾನ ಹೇಳುತ್ತೇನೆ ನಮ್ಮ ಗುರುಗಳ ಮತ್ತು ಭಕ್ತರ ನಿರ್ಣಯ ಪಡೆದು ವಿಚಾರ ತಿಳಿಸುತ್ತೇನೆ. ಒಂದು ಸತ್ಯ ಯಾವುದೇ ಪರಿಸ್ಥಿತಿಯಲ್ಲಿ ಜೋಶಿ ಯವರನ್ನ ಪರಾಭವ ಗೊಳಿಸುವಲ್ಲಿ ಎರಡು ಮಾತಿಲ್ಲ.
ಧಾರವಾಡದ ಲೋಕಸಭೆ ಚುನಾವಣೆ ಸಲುವಾಗಿ ಸಮಿತಿ ರಚನೆ ಮಾಡಲಾಗಿದೆ. ಮುರುಘಾ ಶ್ರೀಗಳು ಎಲ್ಲಾ ಸಭೆ, ಚರ್ಚೆ ಗಳಿಗೆ ನಮ್ಮ ಜೊತೆ ಇದ್ರು. ಆದ್ರೆ ಕೆಲವರು ಮಠಕ್ಕೆ ಹೋಗಿ ಹೆದರಿಸಿ, ಅವರಿಗೆ ಪತ್ರ ಓದಿಸಿದ್ದಾರೆ. ಕೇವಲ ಚುನಾವಣೆಗೆ ಮಾತ್ರ ಕರೆ ಮಾಡಿ ಆಶೀರ್ವಾದ ಮಾಡಿ ಅಂತ ಜೋಶಿ ಹೇಳುತ್ತಾರೆ‌‌. ನಾನು ಆಗ ಕೇವಲ ನಮ್ಮನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಿ ಅಂತ ಪ್ರಶ್ನೆ ಮಾಡಿದ್ದೆ. ಆಗ ಈ ಬಾರಿ ಮಾತ್ರ ಕ್ಷಮೆ ಮಾಡಿ ಮುಂದೆ ಹೀಗಾಗಲ್ಲ ಅಂತ ಹೇಳಿದ್ರು. ಆದರೆ ಮಠಗಳಿಗೆ ಅನುದಾನ ಸಿಕ್ಕಿಲ್ಲ‌. ಉತ್ತರ ಭಾರತದಲ್ಲಿ 50 ಜನ ಸನ್ಯಾಸಿಗಳು ಸಂಸದರಾಗಿದ್ದಾರೆ. ಅವರಿಗಿಲ್ಲದ ಮಡಿವಂತಿಕೆ ದಕ್ಷಿಣ ಭಾರತದ ಸ್ವಾಮೀಜಿಗಳಿಗೆ ಏಕೆ ಎಂದು ಪ್ರಶ್ನಿಸಿದರು.
ನಮ್ಮ ಹೋರಾಟ ಜೋಶಿ ವಿರುದ್ಧ ಅಲ್ಲ, ಅವರ ವ್ಯಕ್ತಿತ್ವ, ನುಡಿಯ ಬಗ್ಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಸಭೆಯ ನಿರ್ಣಯ:

ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಶ್ರೀಗಳಿಗೆ ಭಕ್ತರು ಒತ್ತಾಯಿಸಿದ್ದಾರೆ. ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಭಕ್ತರು ನಿರ್ಣಯ ಕೈಗೊಂಡಿದ್ದಾರೆ.

ಧಾರವಾಡದಲ್ಲಿ ಭಕ್ತರ ಸಭೆ ಕರೆದು ಸ್ಪರ್ಧೆ ಬಗ್ಗೆ ಚರ್ಚೆ ಹಿನ್ನೆಲೆ ಭಕ್ತರ ಅಭಿಪ್ರಾಯ ಸ್ಪರ್ಧೆ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಧಾರವಾಡ ಲೋಕಸಭೆ ಚುನಾವಣೆ ಹಿತರಕ್ಷಣಾ ಸಮಿತಿ ರಚನೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸಬೇಕು ಸಭೆಯಲ್ಲಿ ನಿರ್ಣಯ ಮಾಡಿದ್ದು, ಸ್ವಾಮೀಜಿಗಳ ನಿರ್ಧಾರಕ್ಕೆ ಭಕ್ತರು ಬದ್ಧವಾಗಿದ್ದಾರೆ. ಸಭೆಯಲ್ಲಿ ತನು, ಮನ, ಧನದಿಂದ ಸ್ವಾಮೀಜಿಗೆ ಬೆಂಬಲ ನೀಡಲು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ವಿವಿಧ ರೈತ ಸಂಘ, ಭಕ್ತರು ಸಭೆಯಲ್ಲಿ ಭಾಗಿಯಾಗಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *