ಅಂತಾರಾಷ್ಟ್ರೀಯ

ಪಂಜಾಬ್ ನಲ್ಲಿ 158 ಜನರಿಗೆ ಬ್ಲ್ಯಾಕ್ ಫಂಗಸ್ ಪತ್ತೆ

ಚಂಡೀಗಢ Prajakiran.com : ಪಂಜಾಬ್ ನಲ್ಲಿ 158 ಜನರಿಗೆ ಬ್ಲಾಕ್ ಫಂಗಸ್ ತಾಗಿರುವುದು ದೃಢವಾಗಿದೆ.

ಆದರೆ ಅವರಲ್ಲಿ 32 ಮಂದಿಗೆ ಈ ಹಿಂದೆ ಕೋವಿಡ್ 19 ಸೋಂಕಿತರಾದ ಬಗ್ಗೆ ಹಿನ್ನೆಲೆಯಿಲ್ಲ.

ಆದರೂ ಅವರಿಗೆ ಬ್ಲಾಕ್ ಫಂಗಸ್ ತಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯುವಾಗಾ ಹೆಚ್ಚಿನ ಪ್ರಮಾಣದ ಸ್ಟೀರಾಯ್ಡ್ ಬಳಸಿದರೆ ಅವರಿಗೆ ಬ್ಲಾಕ್ ಫಂಗಸ್ ದಾಳಿ ಮಾಡುವ ಸಾಧ್ಯತೆಯಿದೆ.

ಬ್ಲಾಕ್ ಫಂಗಸ್ ಏನೂ ಭಯಾನಕ ಖಾಯಿಲೆಯಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಎಂದು ಪಂಜಾಬ್ ನ ಬ್ಲಾಕ್ ಫಂಗಸ್ ನೋಡಲ್ ಅಧಿಕಾರಿ ಡಾ. ಗಗನ್ ದೀಪ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ಬ್ಲಾಕ್ ಫಂಗಸ್ ನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಲಾಗಿದೆ.

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ಗೆ ಔಷಧಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *