ರಾಜ್ಯ

ಸವದತ್ತಿ ಯಲ್ಲಮ್ಮನ ಭಕ್ತರಿಂದ ಪೊಲೀಸರ ಸುಲಿಗೆ…!

ಧಾರವಾಡ/ಸವದತ್ತಿ : ನಾಡಿನ ಶಕ್ತಿಪೀಠಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ಪೂಜೆಗಾಗಿ ಬರುವಅಮಾಯಕ ಭಕ್ತರ ಸುಲಿಗೆಗೆ ಧಾರವಾಡ ಹಾಗೂ ಸವದತ್ತಿ ಪೊಲೀಸರು ಮುಂದಾಗಿದ್ದಾರೆ ಎಂದು ಕನಾ೯ಟಕ ಪ್ರದೇಶ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾಯ೯ದರ್ಶಿ ಆನಂದ ಸಿಂಗನಾಥ ಆರೋಪಿಸಿದ್ದಾರೆ.

ಪ್ರತಿ ವರ್ಷದಂತೆ ಈ ವಷ೯ವು ಕೂಡ ಭಕ್ತರು ಹರಿದು ಬರುತ್ತಿದ್ದಾರೆ. ಕರೊನಾಹಿನ್ನಲೆ ನವೆಂಬರ್ 30ರವರೆಗೆ ಯಲ್ಲಮ್ಮನ್ನ ದಶ೯ನ ನಿಷೇಧವಿದೆ.

ಆದರೂ ಸಾವಿರಾರು ಮಂದಿ ಬರುತ್ತಿದ್ದಾರೆ. ಅವರ ವಾಹನ ತಡೆದು ವಾಪಾಸ್ ಕಳುಹಿಸಬೇಕಾದವರೆ ಹಣವಸೂಲು ಮಾಡುತ್ತಿದ್ದಾರೆ.

ಪ್ರತಿಯೊಂದು ವಾಹನದಿಂದ ಎರಡು ನೂರರಿಂದ ಐದುನೂರವರೆಗೆ ಪಡೆಯುತ್ತಿದ್ದಾರೆ. ರಸೀದಿ ಸಹ ನೀಡುತ್ತಿಲ್ಲ ಎಂದು ದೂರಿದ್ದಾರೆ.

 ಜೋಗಳ ಸತ್ಯಬಾಯಿಯ ಮಂದಿರದಲ್ಲಿ ಪರಡಿ ತುಂಬಿ ಅಲ್ಲಿಂದ ಎಲ್ಲ ಪದ್ದತಿಗಳು ಮಾಡಿ ಬರುತ್ತಿದ್ದಾರೆ.ಜಿಲ್ಲಾಡಳಿತ ಕಣ್ಣುಮುಚ್ಚಿಕುಳಿತಿದೆ.

ಆದರೆ ಇಂತಹ ಭಕ್ತರಿಗೆ ನಮ್ಮ ಟ್ರಾಫಿಕ್ ಪೊಲೀಸ  ರಶೀದಿ ಇಲ್ಲದೆ ೫೦೦ ಕೊಡು ೩೦೦ ಕೊಡು ಅಂತಾ ಹಣ ವಸೂಲಿಗೆ ಇಳದಿರುವುದು  ಬಹಳದುಃಖದ ಸಂಗತಿ.

ಜನರಿಗಾಗಿ ಒಂದು ಒಳ್ಳೆಯ ಜಾಗೃತಿ ಮೂಡಿಸುವುದನ್ನು ಬಿಟ್ಟು ಸವದತ್ತಿ ಹತ್ತಿರ ವಸೂಲಿ ಮತ್ತು ಧಾರವಾಡದ ಅಮ್ಮಿನಬಾವಿ ಹತ್ತಿರ ಪೊಲೀಸ ಇಲಾಖೆಯವರು ಸುಲಿಗೆ ಮಾಡುತ್ತಿರುವುದು ಖಂಡನೀಯ.

ಕೂಡಲೇ ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಆನಂದ ಸಿಂಗನಾಥ ಒತ್ತಾಯಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *