ರಾಜ್ಯ

ಧಾರವಾಡದ ಉಪನಗರ ಪೊಲೀಸ್ ಠಾಣೆ ಸೀಲ್ ಡೌನ್  

ಧಾರವಾಡ prajakiran.com : ಕಳೆದ ಹಲವು ದಿನಗಳಿಂದ ಹುಬ್ಭಳ್ಳಿ-ಧಾರವಾಡ ಮಹಾನಗರ ಪೊಲೀಸರು ಸೇರಿದಂತೆ ಧಾರವಾಡ ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕರೋನಾ ಅಟ್ಟಹಾಸ ಗುರುವಾರವು ಮುಂದೆವರೆದಿದೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯ ಒಬ್ಬ ಎ ಎಸ್ ಐ ಹಾಗೂ ಇನ್ನೊಬ್ಬ ಹೆಡ್ ಕಾನ್ಸಟೇಬಲ್ ಗೆ ಕೊರೊನಾ ಪಾಸಿಟಿವ್  ಇರುವುದು ದೃಢಪಟ್ಟಿದೆ.

ರಾತ್ರಿ ತಪಾಸಣೆ ಮಾಡಿಸಿಕೊಂಡ ಹೆಡ್ ಕಾನ್ಸಟೇಬಲ್ ಪಾಸಿಟಿವ್ ಬಂದಿದೆ ಎಂದು ತೋರಿಸಲು ಪೊಲೀಸ್ ಠಾಣೆಗೆ ಬಂದಿದ್ದರಿಂದ ಹಲವರು ಆತಂಕಗೊಂಡಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ಇಬ್ಬರು ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ. ಈಗಾಗಲೇ ಹೋಂ ಕ್ವಾರಂಟಿನ್ ನಲ್ಲಿ ಇಬ್ಬರು ಪೊಲೀಸರು ಇದ್ದಾರೆ.  

ಈ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಯನ್ನು ಗುರುವಾರ ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಪೊಲೀಸರು ಹೊರಗಿನಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಿ ನಂತರ ಇಡೀ ಠಾಣೆಯನ್ನು ಸ್ಯಾನಿಟೈಜೇಶನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೂಡ ಒಬ್ಬ ಹೆಡ್ ಕಾನಸ್ಟೇಬಲ್ ಮತ್ತೊಬ್ಬ ಕಾನ್ಸಟೇಬಲ್ ಗೆ ಕರೋನಾ ವಕ್ಕರಿಸಿತ್ತು.

ಈ ಪೈಕಿ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದರೆ, ಇನ್ನೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈಗ ಧಾರವಾಡದ ಉಪನಗರ ಪೊಲೀಸ್ ಠಾಣೆಯ ನಾಲ್ವರು ಪೊಲೀಸರಿಗೆ ವ್ಯಾಪಿಸಿದಂತಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *