ರಾಜ್ಯ

ಫ್ರೂಟ್ ಇರ್ಫಾನ್ ಕೊಲೆ : ಚುರುಕುಗೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸರ ತನಿಖೆ

ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಹುಬ್ಬಳ್ಳಿಯ ಖಬರಸ್ತಾನದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರಅಂತ್ಯಕ್ರಿಯೆ

ಚುರುಕುಗೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸರ ತನಿಖೆ

ಪ್ರಕರಣ ಭೇದಿಸಲು ಆರು ತಂಡಗಳ ಕಾರ್ಯಾಚರಣೆ

ಹುಬ್ಬಳ್ಳಿ-ಧಾರವಾಡ prajakiran.com : ಹಲವು ಭೂವಿವಾದ, ಜೀವ ಬೆದರಿಕೆ, ಮೀಟರ್ ಬಡ್ಡಿ ದಂಧೆ, ಕೊಲೆ ಪ್ರಕರಣಗಳಿಂದಲೇ ಕುಖ್ಯಾತಿ ಪಡೆದಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಗೂ ಕರೋನಾ ಪಾಸಿಟಿವ್ ಇರುವುದು ಮರಣೋತ್ತರ ಪರೀಕ್ಷೆ ವೇಳೆ ದೃಢಪಟ್ಟಿದೆ.

ಹಳೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಗುರುವಾರ ನಡೆದ ಶೂಟೌಟ್ ನಲ್ಲಿ ತೀವ್ರ ಗಾಯಗೊಂಡಿದ್ದ ಆತ ತಡ ರಾತ್ರಿ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಆತನ ಕಾಲಿಗೆ ತಾಗಿದ್ದ ಗುಂಡನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿತ್ತು. ಆದರೆ ತಲೆಯ ಒಳಗೆ ಹೊಕ್ಕಿದ್ದ ಗುಂಡು ತೆಗೆಯಲು ಸಾಧ್ಯವಾಗಲಿಲ್ಲ.ಅಲ್ಲದೆ ತೀವ್ರ ರಕ್ತಸ್ರಾವದಿಂದ ಬಳಲಿದ್ದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದ.

ಆತನ ಸಾವಿನ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತರಲಾಗಿತ್ತು.

ಈ ವೇಳೆ ಕೋವಿಡ್ -19 ದೃಢಪಟ್ಟ ಹಿನ್ನಲೆಯಲ್ಲಿ ಕೋವಿಡ್ ನಿಯಮಾನುಸಾರ ಹುಬ್ಬಳ್ಳಿಯ ಖಬರಸ್ತಾನದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲಾಯಿತು.

ಹುಬ್ಬಳ್ಳಿ-ಧಾರವಾಡ ಪೊಲೀಸರ ಕಾರ್ಯಾಚರಣೆ ಚುರುಕು :

ಆತನ ಸಾವನ್ನಪ್ಪಿದ್ದ ಬೆನ್ನಲ್ಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತ ಆರ್. ದಿಲೀಪ್ ಅವರು ಅದರ ತನಿಖೆಗೆ ಡಿಸಿಪಿ  ಆರ್.ಬಿ. ಬಸರಗಿ ನೇತೃತ್ವದಲ್ಲಿ ಆರು ಪೊಲೀಸ್ ತನಿಖೆ ತಂಡಗಳನ್ನು ರಚಿಸಿದ್ದಾರೆ.

ಅವರು ಕಳೆದ ಎರಡು ದಿನಗಳಿಂದ ಹಗಲು ರಾತ್ರಿ ಎನ್ನದೆ ಆತನ ಪೂರ್ವಾವರ, ಚಲನವಲನ, ಹಿಂದಿನ ದ್ವೇಷ, ಜೀವ ಬೆದರಿಕೆ, ಭೂವಿವಾದ, ಮೀಟರ್ ಬಡ್ಡಿ ಹೀಗೆ ಎಲ್ಲಾ ಆಯಾಮಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅದರ ಆಧಾರದ ಮೇಲೆ ಹಲವಾರು ಸಂಶಯಾಸ್ಪದ ವ್ಯಕ್ತಿಗಳನ್ನು ಹಾಗೂ ಈ ಹಿಂದೆ ಆತನ ವಿರುದ್ದ ದೂರು ನೀಡಿದವರನ್ನು ಕರೆಸಿ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.  

ಕಾರ್ಯಾಚರಣೆ ಚುರುಕು : ಹೋಟೆಲ್ ಬಳಿ ದೊರೆತ ಸಿಸಿ ಟಿವಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಹಲವರನ್ನು ಅನುಮಾನದ ಮೇಲೆ ವಶಕ್ಕೆ ಪಡೆದಿರುವ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *