ರಾಜ್ಯ

ಮನೆ ಹಾನಿ ತಾರತಮ್ಯ ಸರಿಪಡಿಸಲು ರಾಜೀವ ಗಾಂಧಿ ವಸತಿ ಯೋಜನೆ ಪೋರ್ಟಲ್ ನಲ್ಲಿ ಅವಕಾಶವಿಲ್ಲ….!

ತಾಂತ್ರಿಕ ದೋಷದ ನೆಪವೊಡ್ಡಿ ಪುನರ್ ಪರಿಶೀಲನೆ ನಡೆಸಿದರೂ ಕೈ ಚೆಲ್ಲಿ ಕುಳಿತ ಕೆಳ ಹಂತದ ಅಧಿಕಾರಿಗಳು

ಧಾರವಾಡ : ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಯಲ್ಲಿ ಸಾವಿರಾರು ಮನೆ ಹಾನಿಯಾಗೀಡಾಗಿವೆ.

ಈ ಕುರಿತು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಿದ ಪರಿಣಾಮ ಧಾರವಾಡ ತಾಲೂಕಿನ ತಹಸೀಲ್ದಾರ್ ಸಂತೋಷ ಹಿರೇಮಠ ಹಾಗೂ ಅಧಿಕಾರಿಗಳು ತಾಲೂಕಿನ ಹೆಬ್ಬಳ್ಳಿ, ಕವಲಗೇರಿ, ನರೇಂದ್ರ ಸೇರಿದಂತೆ ಅಹವಾಲು ಸಲ್ಲಿಸಿದ ನೂರಾರು ನೋಂದವರ ಮನೆಗೆ  ರಜಾದಿನ‌ ಲೆಕ್ಕಿಸದೆ ಭಾನುವಾರವು ಭೇಟಿ ನೀಡಿ ಪುನರ್ ಪರಿಶೀಲನೆ ನಡೆಸಿದರು.

ಮನೆ ಹಾನಿ ತಾರತಮ್ಯ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು.
ಆದರೆ, ಈಗಾಗಲೇ
ರಾಜೀವ ಗಾಂಧಿ ವಸತಿ ಯೋಜನೆ ಪೋರ್ಟಲ್ ನಲ್ಲಿ ಅನುಮೋದನೆ ಗೊಂಡ ಮನೆಗಳ ಕೆಟಗೆರಿ ಬದಲಾವಣೆ ಮಾಡಲು
ಅವಕಾಶವಿಲ್ಲ.

ತಾಂತ್ರಿಕ ದೋಷದ ನೆಪವೊಡ್ಡಿ
ಪುನರ್ ಪರಿಶೀಲನೆ ನಡೆಸಿದರೂ ಕೆಳ ಹಂತದ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ.

ಅನುಮೋದನೆಗೊಳ್ಳದ ಮನೆಗಳಿಗೆ ಅನುಮೋದನೆ ನೀಡಲು ಶಿಫಾರಸು ಮಾಡಿದ್ದಾರೆ. ಆದರೆ, ಈಗಾಗಲೇ
ರಾಜೀವ ಗಾಂಧಿ ಯೋಜನೆ ಪೋರ್ಟಲ್ ನಲ್ಲಿ ಸಿ ಕೆಟಗೆರಿ‌ ಮನೆಗಳು ಎಂದು ಅನುಮೋದನೆ ಗೊಂಡ ಬಳಿಕ ಅವುಗಳನ್ನು ಬಿ 1,, ಬಿ 2 ಕೆಟಗೆರಿ ಮಾಡಲು ಅವಕಾಶವಿಲ್ಲದೆ, ಅಧಿಕಾರಿಗಳು ಪರದಾಟ ನಡೆಸುತ್ತಿದ್ದಾರೆ.

ಅಲ್ಲದೆ, ಇವರ ಅನುಮೋದನೆ ನೀಡುವ ಪೋರ್ಟಲ್ ಅವಧಿ ಕೊನೆಯ ದಿನ. ನವೆಂಬರ್ 7 ಆಗಿತ್ತು. ಹೀಗಾಗಿ ಅದು ಕೂಡ ಇವತ್ತು ಮುಕ್ತಾಯ ಗೊಂಡಿದೆ.

ಹೀಗಾಗಿ ಅದನ್ನು ಕೂಡ ವಿಸ್ತರಣೆ ಮಾಡಲು ಸರಕಾರಕ್ಕೆ ಮನವಿ ಮಾಡಲು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಒತ್ತಾಯಿಸಿದ್ದಾರೆ‌.

ಸರಕಾರದ ನೋಡಲ್ ಅಧಿಕಾರಿಗಳು ಕೆಲ‌ ಮನೆ ಹಾನಿ ಪರಿಶೀಲನೆ ನಡೆಸದೆ ಸಿ ಕೆಟಗೇರಿ ಮಾಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಒಂದು ಗೋಡೆ ಬಿದ್ದರೆ, ಸಿ ಕೆಟಗೇರಿ ಆಗಬಹುದು. ಆದರೆ, ಮೂರು ಗೋಡೆ ಬಿದ್ರು ಕವಲಗೇರಿಯ ಮಲ್ಲೇಶಪ್ಪ ಹಿತ್ತಲಮನಿ ಅವರ ಮನೆ ಹಾಗೂ ಹೆಬ್ಬಳ್ಳಿ ಗ್ರಾಮದ ಉಮೇಶ ಮಠಪತಿ ಅವರ ಮನೆ ಸಿ‌ ಕೆಟಗೇರಿ ಮಾಡಲಾಗಿದೆ.

ಅದನ್ನು ಬದಲಾವಣೆ ಮಾಡುವ ಅಧಿಕಾರಿ ನಮಗೆ ಇಲ್ಲ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.

ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಬಹುತೇಕ ಜನ ಕೇವಲ 50 ಸಾವಿರದಷ್ಟು ಸಹಾಯಧನದಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಅರ್ಜಿ ಸಲ್ಲಿಸಿಲ್ಲ.

ಜೊತೆಗೆ ಮುಂದೆ‌ ಮತ್ತೆ ಮನೆ ಬಿದ್ದರೆ, ಅದು ಹಳೆಯ ಮನೆಯಾಗಲಿದೆ. ಹೀಗಾಗಿ ಸಂತ್ರಸ್ತರು ಅದರ ಲಾಭ ಪಡೆಯಬೇಕು ಎಂದರು.

ಸರ್ಕಾರದ ಈ ಕ್ರಮ ಸರಿಯಾದುದ್ದಲ್ಲ. ತಾಂತ್ರಿಕ ದೋಷ ಸರಿಪಡಿಸುವ ಮೂಲಕ ಎಲ್ಲಾ ಸಂತ್ರಸ್ತರಿಗೆ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ರಾಜ್ಯದ ಜನಪ್ರತಿನಿಧಿಗಳು, ಧಾರವಾಡ ಜಿಲ್ಲೆಯ ಆಡಳಿತ ಮಾಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮನವಿ ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *