ರಾಜ್ಯ

ಧಾರವಾಡದ ಜನ್ನತ್ ನಗರದ ಗರ್ಭೀಣಿಗೂ ಕರೋನಾ ಸೋಂಕು …!

ಧಾರವಾಡ prajakiran.com : ಮಹಾರಾಷ್ಟ್ರದಿಂದ ತವರು ಮನೆಗೆ ಬಂದ ಗರ್ಭೀಣಿಗೂ ಕರೋನಾ ಸೋಂಕು ಹರಡಿದ ಪ್ರಕರಣ ವಿದ್ಯಾನಗರಿ ಧಾರವಾಡದಲ್ಲಿ ದೃಢಪಟ್ಟಿದೆ.

ಧಾರವಾಡದ ಜನ್ನತ್ ನಗರದ ಸೋಂಕಿತ ಪಿ- 8754 ಸೋಂಕಿತ 30 ವರ್ಷದ ಮಹಿಳೆ ಮಹಾರಾಷ್ಟ್ರದ ಸೋಲಾಪುರದ ಬಿಜಾಪೂರ ನಾಕಾ ಭುಖಾರಿಯಾ ಮಸೀದ ಹತ್ತಿರದ ನಿವಾಸಿ ಹೆರಿಗೆಗಾಗಿ ತಂದೆ ಮನೆಗೆ ಬಂದಿದ್ದಾಳೆ.

ಈ ಮಹಿಳೆ ಜೂನ್ 18 ರಂದು ಮಹಾರಾಷ್ಟ್ರದಿಂದ ಧಾರವಾಡ ಜಿಲ್ಲಾ ಆಸ್ಪತ್ರೆ ಗೆ ಬಂದು ಗಂಟಲು ತಪಾಸಣೆ ಮಾಡಿಸಿ ಜನ್ನತ ನಗರದ ತನ್ನ ತಂದೆ ಮನೆಯಲ್ಲಿ ಹೋಮ್ ಕ್ವಾರೆಂಟೆನ ಇದ್ದರು. ಅವರಿಗೆ ಜೂನ್ 21 ರಂದು ಪಾಸಿಟಿವ್ ಬಂದಿರುವುದಾಗಿ ಗೊತ್ತಾಗಿದೆ.



ಈ ಹಿನ್ನಲೆಯಲ್ಲಿ ಆ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.  ಪಾಸಿಟಿವ್ ಬಂದ ಹೆಣ್ಣು ಮಗಳು ಒಂಭತ್ತು ತಿಂಗಳ ತುಂಬು ಗರ್ಭಣಿ ಇದ್ದಾಳೆ ಎಂದು ಹೇಳಲಾಗುತ್ತಿದೆ.

ಇದರಿಂದಾಗಿ ಆಕೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆತಂಕಗೊಂಡಿದ್ದಾರೆ.

ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಒಬ್ಬ ಗರ್ಭೀಣಿಗೆ ಕರೋನಾ ಸೋಂಕು ಬಂದು ಆಕೆಗೆ  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *