ಧಾರವಾಡ prajakiran.com : ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಪಲ್ಸ್ ಆಕ್ಸಿಮೀಟರ್ ನೀಡಲಾಗಿದೆ ಎಂದು ಧಾರವಾಡ ಎಸ್ಪಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ವಿವರ ನೀಡಿದ್ದಾರೆ.
ಕರೊನಾ ವಿರುದ್ಧದ ಹೋರಾಟದೊಂದಿಗೆ ನಮ್ಮ ಪೊಲೀಸರು ಕೆಲಸ ಮಾಡಬೇಕಿದೆ.
ಹೀಗಾಗಿ ಪ್ರತಿ ಠಾಣೆಗೆ ಪಲ್ಸ್ ಆಕ್ಸಿಮೀಟರ್ ಕೊಟ್ಟಿದ್ದೇವೆ. ಕರೊನಾ ಲಕ್ಷಣ ಇಲ್ಲದವರ ಪತ್ತೆಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು
ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ತೆಗೆಯಬೇಕು. ಈಗಾಗಲೇ ನಮ್ಮಲ್ಲಿ 8 ಸಿಬ್ಬಂದಿಗೆ ಕರೊನಾ ಪಾಸಿಟಿವ್ ಆಗಿದೆ.
ಇಬ್ಬರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ವಿವರಿಸಿದರು.
ನಮ್ಮೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಒಬ್ಬ ಎ ಎಸ್ ಐ ಯನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ನಾವೆಲ್ಲ ಟೆಸ್ಟ್ ಮಾಡಿಸಿಕೊಂಡಿದ್ವಿ.
ಇದರಿಂದ ನಾನೂ ಸಹ ಕೆಲವು ದಿನ ಹೋಂ ಕ್ವಾರೈಂಟಿನ್ ನಲ್ಲಿಇದ್ದೆ. ನನ್ನ ಗಂಟಲು ಹಾಗೂ ರಕ್ತದ ತಪಾಸಣಾ ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸ್ವತಃ ಸ್ಪಷ್ಟಪಡಿಸಿದರು.