ರಾಜ್ಯ

ಮುಷ್ಠಿ ಬೀಗ ಪ್ರವೀಣ ವೀರಭದ್ರ ಕಮ್ಮಾರ ಸೇರಿ ಹಲವರ ಸನ್ಮಾನ

ಧಾರವಾಡ prajakiran.com :
ದಿವ್ಯಾಂಗರು ಸ್ವಾವಲಂಬಿ ಜೀವನ ನಡೆಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಸಂಘ-ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ ಹಂಚಾಟೆ ಹೇಳಿದರು.

ತಾಲೂಕಿನ ಶಿಕ್ಷಕರ ಭವನದಲ್ಲಿ ಗುರುವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನದಲ್ಲಿ ಮಾತನಾಡಿದರು.
ಅವರಲ್ಲಿರುವ ದೈಹಿಕ, ಮಾನಸಿಕ ನ್ಯೂನ್ಯತೆಯನ್ನು ಕಡಿಮೆ ಮಾಡಿ ಅವರ ಸಾಮರ್ಥ್ಯ ಹೆಚ್ಚಿಸಲು ಇಡೀ ಸಮಾಜ ಪ್ರಯತ್ನಿಸಬೇಕು.

ಇಂತಹ ಮಕ್ಕಳ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಅವರಿದ್ದಲ್ಲಿಯೇ ಸರ್ಕಾರದ ಸೌಲಭ್ಯಗಳನ್ನು ಒಯ್ಯುವ ಕೆಲಸವಾಗಲಿ ಎಂದರು.

ಧಾರವಾಡ ಜಿಲ್ಲಾ
ಡಿ ವಾಯ್ ಪಿ ಸಿ ಪ್ರಮೋದ‌ ಮಹಾಲೆ ಮಾತನಾಡಿ, ೧೯೯೨ರಿಂದ ವಿಕಲಚೇತನ ದಿನಾಚರಣೆ ನಡೆಸಲಾಗುತ್ತಿದೆ. ಸಾಮಾನ್ಯರಲ್ಲಿ ಇರುವಂತೆಯೇ ದಿವ್ಯಾಂಗರಲ್ಲೂ ಸಾಕಷ್ಟು ಪ್ರತಿಭಗಳಿದ್ದು, ಅವರಿಗೆ ಅವಕಾಶಗಳನ್ನು ಒದಗಿಸುವ ಕೆಲಸ ಪಾಲಕರು, ಶಿಕ್ಷಕರು ಹಾಗೂ ಸಮಾಜ ಮಾಡಬೇಕಿದೆ.

ದಿವ್ಯಾಂಗರಿಗೆ ಇರುವ ಸೌಲಭ್ಯ, ಅವಕಾಶಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ತಿಳಿಯುವುದಕ್ಕಾಗಿಯೇ ಈ ದಿನಾಚರಣೆ ಆಚರಿಸಲಾಗುತ್ತಿದೆ.

ದಿವ್ಯಾಂಗರು ಸ್ವಾವಲಂಬಿಗಳಾಗಲು ಪಾಲಕರು, ಶಿಕ್ಷಕರು ಮಾಧ್ಯಮಗಳಾಗಿ ಕೆಲಸ ಮಾಡಬೇಕು. ಪಾಲಕರು ಇಂತಹ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸವಾಲು ಎದುರಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರ ಸಮನ್ವಯ ಅಧಿಕಾರಿ ಎನ್ ಎಸ್ ಧಪೇದಾರ ಇದ್ದರು.

ಮಕ್ಕಳಿಗೆ ವಿವಿಧ ಸಾಮಗ್ರಿ ವಿತರಿಸಲಾಯಿತು. ಗಣನೀಯ ಸೇವೆ ಸಲ್ಲಿಸಿದ ಅವರೊಳ್ಳಿ ಗ್ರಾಮದ ಮುಷ್ಠಿ ಬೀಗ ಪ್ರವೀಣರಾದ ವೀರಭದ್ರ ಕಮ್ಮಾರ, ಪತ್ರಕರ್ತ ಬಸವರಾಜ ಹಿರೇಮಠ, ಸಮಾಜಮುಖಿ ಶಿಕ್ಷಕಿ ಆಶಾ ಮುನವಳ್ಳಿ, ಪ್ರತಿಭಾ ಕಾರಂಜಿ ರಾಜ್ಯ ಮಟ್ಟದ ಪ್ರತಿಭೆ ಅಕ್ಸು ಮುಲ್ಲಾ, ವಿಕಲಚೇತನ ಮಕ್ಕಳಿಗಾಗಿ ನಿರಂತರ ಸೇವೆ ಮಾಡಿದ ಬಾಬಾಜಾನ ಮುಲ್ಲಾ, ನಂದನಕುಮಾರ ದ್ಯಾಪೂರ, ಕುಸುಮಾವತಿ ಕುಲಕರ್ಣಿ, ಎನ್.ಬಿ. ಹರಿಹರ ಅವರನ್ನು ಸತ್ಕರಿಸಲಾಯಿತು.

ಸಂಪನ್ಮೂಲ ಶಿಕ್ಷಕಿ ವಿ.ಎನ್. ಕೀರ್ತಿವತಿ ಸ್ವಾಗತಿಸಿದರು. ಬಸವರಾಜ ದೇಸೂರ ನಿರೂಪಿಸಿದರು. ಲಲಿತಾ ಹೊನವಾಡ ವಂದಿಸಿದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *