ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ 139 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.
ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1398ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಬುಧವಾರ ಚಿಕಿತ್ಸೆ ಫಲಿಸದೆ ಐವರು ಸಾವನ್ನಪ್ಪಿದ್ದರೆ, ಈವರೆಗೆ 44 ಜನ ಸಾವನ್ನಪ್ಪಿದ್ದಾರೆ.
ಬುಧವಾರ 32 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 482 ಜನ ಬಿಡುಗಡೆಯಾಗಿದ್ದಾರೆ.
ಇನ್ನೂ 872 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ ಎಂದು ವಿವರಿಸಿದೆ.
ಸಾವನ್ನಪ್ಪಿದವರ ವಿವರ : ಪಿ-25498 ಸೋಂಕಿತ 52 ವರ್ಷದ ಮಹಿಳೆ, ಪಿ-45201 ಸೋಂಕಿತ ವರ್ಷದ 60 ವೃದ್ದ, ಪಿ-45244 ಸೋಂಕಿತ 58 ವರ್ಷದ ಮಹಿಳೆ, ಪಿ-45261 ಸೋಂಕಿತ 51 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಪಿ-25538 ಸೋಂಕಿತ 48 ವರ್ಷದ ವ್ಯಕ್ತಿ ಇವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ. ಇದಲ್ಲದೆ, ಇನ್ನೂ 41 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.