ರಾಜ್ಯ

ರಾಜ್ಯದಲ್ಲಿ ಭಾನುವಾರ ಸೋಂಕಿಗೆ ಬರೋಬ್ಬರಿ 84 ಸಾವು, 5532 ಪ್ರಕರಣ

ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 84 ಜನ ಸಾವನ್ನಪ್ಪಿದ್ದಾರೆ. 

ಮತ್ತೆ ಹೊಸದಾಗಿ 5532 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,34, 819 ಕ್ಕೆ ಏರಿಕೆಯಾಗಿದೆ. 

ಇಂದು ರಾಜ್ಯದಲ್ಲಿ 4077 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  57725 ಜನ ಗುಣಮುಖರಾಗಿದ್ದು 74,590 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

638 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಭಾನುವಾರವೂ 84 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 2496 ಕ್ಕೆ ಏರಿಕೆಯಾದಂತಾಗಿದೆ. 

ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. 

ಬೆಂಗಳೂರಿನಲ್ಲಿ 2105 ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ ಬಳ್ಳಾರಿ 377, ಕಲಬರುಗಿ ಹಾಗೂ ಮೈಸೂರು 238, ರಾಯಚೂರು 212, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದಕ್ಷಿಣ ಕನ್ನಡ 163, ಹಾವೇರಿ 146, ಹಾಸನ 142, ಬೀದರ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ, 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂಗಳೂರು ಗ್ರಾಮಾಂತರ 38, ತುಮಕೂರು 35, ಚಾಮರಾಜನಗರ 31, ಉತ್ತರಕನ್ನಡ 26, ಕೊಡಗು 16 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ  21 ಜನ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಮೈಸೂರು 10, ಧಾರವಾಡ 8, ಕಲಬುರ್ಗಿ 6, ಶಿವಮೊಗ್ಗ 4, ಗದಗ, ಮಂಡ್ಯ, ದಾವಣಗೆರೆ ತಲಾ 3, ಬಳ್ಳಾರಿ, ರಾಯಚೂರು, ಹಾಸನ, ಬಾಗಲಕೋಟೆ, ಕೊಪ್ಪಳ ಹಾಗೂ ಚಾಮರಾಜನಗರ ತಲಾ 2, ಬೆಳಗಾವಿ, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು  ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *