ಅಂತಾರಾಷ್ಟ್ರೀಯ

ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಬಳಿ ಸ್ವಂತ ವಾಹನ ಇಲ್ಲ…!

ಧಾರವಾಡ ಪ್ರಜಾಕಿರಣ.ಕಾಮ್ : ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಅವರ ಬಳಿ ಒಂದೇ ಒಂದು ಸ್ವಂತ ವಾಹನವಿಲ್ಲ.

ಹಾಗಂತ ಅವರು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ನಾಮಪತ್ರದ ಜೊತೆಗೆ ಜೋಶಿ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮೌಲ್ಯದ ವಿವರಣೆ ನೀಡಿದ್ದಾರೆ.

ಜೋಶಿ ಕುಟುಂಬದವರ ಒಟ್ಟು ಆಸ್ತಿ 21,09,60,953 ಆಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಈ ಆಸ್ತಿ ಮೌಲ್ಯ 7 ಕೋಟಿ ಹೆಚ್ಚಳವಾಗಿದೆ.

2019ರಲ್ಲಿ ಜೋಶಿ ಕುಟುಂಬದ ಆಸ್ತಿ 14.71 ಕೋಟಿ ಇತ್ತು. ಜೋಶಿ ಅವರು ತಮ್ಮ ವೈಯಕ್ತಿಕ 13,97,29,450 ಕೋಟಿ ಆಸ್ತಿ ಹೊಂದಿದ್ದು, 2019ರಲ್ಲಿ ಇವರ ಆಸ್ತಿ 11.13 ಕೋಟಿಯಷ್ಟಿತ್ತು.

ಆಸ್ತಿ ಜೊತೆಗೆ ಜೋಶಿ ಅವರ ಸಾಲ ಕೂಡ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ 5.17 ಕೋಟಿ ಸಾಲ ಹೊಂದಿದ್ದ ಜೋಶಿ ಅವರ ಸಾಲ ಈಗ 6.63 ಕೋಟಿಗೆ ಏರಿಕೆಯಾಗಿದೆ.

ಜೋಶಿ ಅವರ ವೈಯಕ್ತಿಕ ಚರಾಸ್ತಿ 2.72 ಕೋಟಿಯಷ್ಟಿದ್ದು, ಅವರ ಒಟ್ಟು ಸ್ಥಿರಾಸ್ತಿ 11.24 ಕೋಟಿ ಇದೆ.

ಪತ್ನಿ ಜ್ಯೋತಿ ಅವರ ಚರಾಸ್ತಿ 5.93 ಕೋಟಿ, ಸ್ಥಿರಾಸ್ತಿ 86.39 ಲಕ್ಷ ಇದೆ. ಪತ್ನಿ ಜೋಶಿ ಹೆಸರಿನಲ್ಲಿ 1.37 ಕೋಟಿ ಸಾಲವಿದೆ.

ಜೋಶಿ ಅವರ ಬಳಿ 184 ಗ್ರಾಂ ಮಾತ್ರ ಚಿನ್ನವಿದ್ದು, 5 ಕೆಜಿ ಬೆಳ್ಳಿ ಇದೆ. ಪತ್ನಿ ಜ್ಯೋತಿ ಬಳಿ 500 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ಇದೆ.

ಪುತ್ರಿ ಅನನ್ಯಾ ಬಳಿ 250 ಗ್ರಾಂ ಚಿನ್ನವಿದ್ದು, 32,03,449 ಮೌಲ್ಯದ ಆಸ್ತಿ ಇದೆ.

ಇನ್ನು ಪ್ರಹ್ಲಾದ ಜೋಶಿ ಅವರು ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾದರೂ ಅವರ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಪತ್ನಿ, ಮಕ್ಕಳ ಹೆಸರಿನಲ್ಲೂ ಜೋಶಿ ವಾಹನ ಹೊಂದಿಲ್ಲ. ಕಳೆದ ಸಲದ ಅಫಿಡವಿಟ್‌ನಲ್ಲಿ ಮಹೀಂದ್ರಾ ಸ್ಕಾರ್ಪಿಯೊ ವಾಹನ ಇರುವುದಾಗಿ ಜೋಶಿ ಘೋಷಿಸಿಕೊಂಡಿದ್ದರು.

ಮಗಳ ಹೆಸರಿನಲ್ಲಿ ಒಂದು ಬೈಕ್ ಇರುವುದಾಗಿ ಘೋಷಿಸಿಕೊಂಡಿದ್ದ ಜೋಶಿ, ಈಗ ಯಾರ ಹೆಸರಿನಲ್ಲೂ ವಾಹನ ಇಲ್ಲ ಎಂದು ಘೋಷಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *