ನವದೆಹಲಿ prajakiran.com : ಕೊರೋನಾ ಸೋಂಕು ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೆಟ್ರೋ ಸಂಚಾರ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಇಂದಿನಿಂದ ಮೆಟ್ರೋ ಸೇವೆ ಆರಂಭವಾಗಲಿದೆ.
ಕೊರೋನಾ ಪರಿಸ್ಥಿತಿ ಸುಧಾರಣೆಯಾಗಿದ್ದು, ಇಂದಿನಿಂದ ಮೆಟ್ರೋ ಆರಂಭವಾಗಿದೆ. ಅರ್ಧದಷ್ಟು ಆಸನದಲ್ಲಿ ಮಾತ್ರ ಕೂತು ತೆರಳಲು ಅವಕಾಶ ಇದೆ.
ನಿಂತು ಪ್ರಯಾಣಿಸುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸತತ ಮೂರು ವಾರದಿಂದ ಮೆಟ್ರೋ ಸ್ಥಗಿತವಾಗಿದ್ದು, ಇದೀಗ ಜನರ ಸೇವೆಗೆ ಮೆಟ್ರೋ ಸಿದ್ಧವಾಗಿದೆ.