ಅಂತಾರಾಷ್ಟ್ರೀಯ

ಅನಿವಾಸಿ ಭಾರತೀಯ ಮಕ್ಕಳನ್ನು ಭಾರತಕ್ಕೆ ಕರೆತರಲು ಯತ್ನ : ಸಚಿವ ಜೈಶಂಕರ್

ಮೃತ ಅನಿವಾಸಿ ಭಾರತೀಯ ಮಹಿಳೆಯ ಮಕ್ಕಳನ್ನು ಭಾರತಕ್ಕೆ ಕರೆತರಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿದೇಶಾಂಗ ಸಚಿವ ಜೈಶಂಕರ್ ಮಾತುಕತೆ

ನವದೆಹಲಿ ಪ್ರಜಾಕಿರಣ.ಕಾಮ್ :

ಕೆಲವು ತಿಂಗಳ ಹಿಂದೆಯಷ್ಟೇ, ಧಾರವಾಡದ ಪ್ರೊ. ಎಸ್. ಎಸ್. ದೇಸಾಯಿ ಅವರ ಪುತ್ರಿ, ಅನಿವಾಸಿ ಭಾರತೀಯರಾದ ಪ್ರಿಯದರ್ಶಿನಿ ಲಿಂಗರಾಜ ಪಾಟೀಲ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಹೋರಾಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಸ್ಟ್ರೇಲಿಯಾದಲ್ಲಿ ಗಂಡ ಹಾಗೂ ಮಕ್ಕಳ ಜೊತೆಗೆ ವಾಸವಾಗಿದ್ದ ಅನಿವಾಸಿ ಭಾರತೀಯ ಮಹಿಳೆ ಧಾರವಾಡ ಮೂಲದ ಪ್ರಿಯದರ್ಶಿನಿ ವಿದೇಶದಿಂದ ತವರಿಗೆ ಹೋಗಿ ಬರುವುದಾಗಿ ಹೇಳಿ ಮನೆಗೂ
ಬಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿದೇಶಿ ಕಾನೂನಾತ್ಮಕ ತೊಡಕಿನಿಂದ ಮೃತಳ ಮಕ್ಕಳು ವಿದೇಶದಲ್ಲಿ ತಂದೆಯ ಹತ್ತಿರ ಇದ್ದವು.

ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದಲ್ಲಿ ಪ್ರೀಯದರ್ಶಿನಿ ಕುಟುಂಬಸ್ಥರು ಚರ್ಚೆ ನಡೆಸಿ, ಮೊಮ್ಮಕ್ಕಳನ್ನು ಸುಪರ್ದಿಗೆ ಕೊಡಿಸುವಂತೆ ಕೇಂದ್ರ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ವಿದೇಶಾಂಗ ಸಚಿವರ ಮಧ್ಯಸ್ಥಿಕೆಗಾಗಿ ಆಗೃಹಿಸಿದ್ರು.‌

**ಸರಳತೆ ಮೆರೆದ ವಿದೇಶಾಂಗ ಸಚಿವ ಜೈಶಂಕರ್**

ಕೂಡಲೇ ಕೇಂದ್ರ ಸಚಿವರು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಸಂಪರ್ಕಿಸಿದ್ರು.

ಸ್ವತ: ಜೈಶಂಕರ್ ಅವರು ನೇರವಾಗಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ಆಗಮಿಸಿ, ಪ್ರೀಯದರ್ಶಿನಿ ಕುಟುಂಬಸ್ಥರ ಜೊತೆಗೆ
ಮಾತುಕತೆ ನಡೆಸಿದ್ರು.

ಅಲ್ಲದೇ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿ, ತಕ್ಷಣವೇ ಶೀಘ್ರವಾಗಿ ಕಾನೂನಾತ್ಮಕ ತೊಡಕನ್ನು ನಿವಾರಿಸಿ, ಅಧಿಕಾರಿಗಳಿಗೆ ವರದಿ ಕೊಡುವಂತೆ ವಿದೇಶಾಂಗ ಸಚಿವರಾದ ಜೈಶಂಕರ್ ಅವರು ಸೂಚನೆ ಕೊಟ್ಟರು.

ತಮ್ಮ ದಿಲ್ಲಿ ನಿವಾಸದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಅವರು ಪ್ರೀಯದರ್ಶಿನಿ ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಧೈರ್ಯ ಹೇಳಿದರು.

ಇದೇ ಸಂದರ್ಭದಲ್ಲಿ ಅವರಿಗಾದ ತೊಂದರೆನ್ನು ಸರಿಪಡಿಸಲು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ಜೋತೆಗೂ ಸುದೀರ್ಘವಾಗಿ ಆಗಿರುವ ಘಟನೆಯನ್ನ ವಿವರಿಸಿದ್ರು.

ಕೇಂದ್ರ ಸರ್ಕಾರದಿಂದ ಮೃತಳ ಕುಟುಂಬದ ಸದಸ್ಯರಿಗೆ ಸೂಕ್ತ ನ್ಯಾಯ ಒದಗಿಸಲು ಸತತ ಪ್ರಯತ್ನ ಮಾಡುವುದು, ಪ್ರೀಯದರ್ಶಿನಿ ಮಕ್ಕಳನ್ನು ಮೃತಳ ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವ ಬಗ್ಗೆ ಭಾರತ ಸರ್ಕಾರವು ಸಹಾನುಭೂತಿ ಹೊಂದಿದೆ ಹಾಗೂ ವಾಸ್ತವ ಸ್ಥಿತಿಗತಿ ಮತ್ತು ಕಾನೂನು ತೊಡಕನ್ನು ವಿವರಿಸಿದ್ರು.

ಇದೇ ಸಂದರ್ಭದಲ್ಲಿ ನೊಂದ ಹಿರಿಯ ಜೀವಗಳಿಗೆ ವಿದೇಶಾಂಗ ಸಚಿವ ಜೈಶಂಕರ ಅವರು ಪ್ರಹ್ಲಾದ ಜೋಶಿ ಅವರ ಸಮ್ಮುಖದಲ್ಲಿ ಮನವಿಗೆ ಸ್ಪಂದಿಸಿ, ಶೀಘ್ರದಲ್ಲಿ ಮೊಮ್ಮಕ್ಕಳನ್ನು ಧಾರವಾಡದಲ್ಲಿರುವ ಕುಟುಂಬಸ್ಥರಿಗೆ ಹಸ್ತಾಂತರಿಸುವ ದಿಸೆಯಲ್ಲಿ, ಸರ್ಕಾರ ಮತ್ತು ವಿದೇಶಾಂಗ ಇಲಾಖೆ ಸಂಪೂರ್ಣ ಪ್ರಯತ್ನ ಮಾಡುವ ಭರವಸೆ ನೀಡಿದ್ರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರೊಂದಿಗೆ ಧಾರವಾಡದ ಹಿರಿಯರಾದ ಮಲ್ಲಿಕಾರ್ಜುನ ಪಾಟೀಲ್ ರವರು, ಹಾಗೂ ಎಸ್ ಎಸ್ ದೇಸಾಯಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *