ಅಂತಾರಾಷ್ಟ್ರೀಯ

ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ prajakiran.com : ಕರೋನಾ ನಿಯಂತ್ರಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಇದರ ವಿರುದ್ದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕ ಜತೆಗಿನ ವಿದೇಶಾಂಗ ನೀತಿಯಿಂದಾಗಿ ಮೋದಿ ಭಾರತವನ್ನು ದುರ್ಬಲಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ಅಮೆರಿಕವು ಕಾಶ್ಮೀರ ಸೇರಿ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅದರಲ್ಲೂ ಅಮೆರಿಕದ ಸಂಸ್ಥೆಗಳು ಗೃಹಸಚಿವ ಅಮಿತ್ ಶಾ ಗೆ ನಿರ್ಬಂಧ ಹೇರಲು ಮುಂದಾಗಿವೆ ಎಂಬ ಗಂಭೀರವಾದ ಆಪಾದನೆ ಮಾಡಿದ್ದಾರೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕೊರತೆಯನ್ನು ಟೀಕಿಸುತ್ತಿದೆ. #TruthwithRahulGandhi ಎಂದು ವಾಗ್ದಾಳಿ ನಡೆಸಿದ್ದಾರೆ.

ಅದರಲ್ಲೂ ಆರ್ಥಿಕತೆ ನಮ್ಮ ದೇಶದ ಹೆಮ್ಮೆಯಾಗಿತ್ತು. ಇಡೀ ಪ್ರಪಂಚಕ್ಕೆ ನಮ್ಮ ಆರ್ಥಿಕತೆ ಮಾದರಿಯಾಗಿತ್ತು. ಈಗ ಅದು ಪಾತಾಳಕ್ಕೆ ಕುಸಿದಿದ್ದು, 50 ವರ್ಷಗಳಲ್ಲೇ ಅತಿ ಕೆಟ್ಟ ಸ್ಥಿತಿ ತಲುಪಿದೆ ಎಂದು ರಾಹುಲ್ ಗಾಂಧಿ ಕುಟುಕಿದ್ದಾರೆ.

40-50 ವರ್ಷಗಳಲ್ಲಿ ಗರಿಷ್ಠ ನಿರುದ್ಯೋಗ ಅನುಭವಿಸುತ್ತಿದ್ದೇವೆ. ನಮಗೆ ಶಕ್ತಿಯಾಗಿದ್ದ ವಿಚಾರಗಳೇ ಇಂದು ನಮ್ಮ ದೌರ್ಬಲ್ಯಗಳಾಗಿವೆ ಎಂದು ವಿವರಿಸಿದ್ದಾರೆ. @RahulGandhi  

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *