ರಾಜ್ಯ

ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಪ್ರಶ್ನೇಯೇ ಇಲ್ಲ ಎಂದ ಕಂದಾಯ ಸಚಿವ

ಬೆಂಗಳೂರು prajakiran.com : ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಮಾಡುವ ಪ್ರಶ್ನೇಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಸ್ಪಷ್ಟಪಡಿಸಿದ್ದಾರೆ.

ಅವರು ಶುಕ್ರವಾರ ಬೆಂಗಳೂರು ನಗರ ಸರ್ವ ಪಕ್ಷ ಶಾಸಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ವಿವರ ನೀಡಿದರು.  

ರಾಜ್ಯ ಸರಕಾರ ಸದ್ಯಕ್ಕೆ ಆ ಮೂಡ್ ನಲ್ಲಿ ಇಲ್ಲ. ಕೋವಿಡ್ ಜೊತೆಗೆ ಬದುಕಬೇಕು. ಇದು ಅನಿವಾರ್ಯ ಎಂದರು.

ಇಡೀ ವಿಶ್ವವೇ ಹಾಗೂ ದೇಶದ ಜನತೆ ಕರೋನಾದೊಂದಿಗೆ ಬದುಕುತ್ತಿದೆ. ಹೀಗಾಗಿ ಇದು ಅನಿವಾರ್ಯ ಮತ್ತು ಅಗತ್ಯ ಎಂದು ಸಮರ್ಥಿಸಿಕೊಂಡರು.



ಕರೋನಾ ಎಲ್ಲೆಲ್ಲಿ ಕೇಸ್ ಜಾಸ್ತಿ ಆಗುತ್ತದೆ ಅದನ್ನು ನೋಡಿಕೊಂಡು ಸೋಂಕಿತರು ವಾಸವಿರುವ ರಸ್ತೆ ಹಾಗೂ  ಪಕ್ಕದ ರೋಡ್ ಸೀಲ್ ಡೌನ್ ಮಾಡಲು ಶಾಸಕರು ಮನವಿ ಮಾಡಿದ್ದಾರೆ. ಹೀಗಾಗಿ ಸೀಲ್ ಡೌನ್ ಮಾತ್ರ ಮಾಡಲಾಗುವುದು ಎಂದರು.

ಕೋವಿಡ್ ನಿಯಂತ್ರಣಕ್ಕೆ ವಾರ್ಡ್ ಮಟ್ಟದಲ್ಲಿಯೇ 25 ಲಕ್ಷ ಮೀಸಲು ಇಟ್ಟಿದ್ದು, ಫೂಡ್, ಮೆಡಿಕಲ್ ಫೆಸಿಲಿಟಿ ಮಾಡಲು ಅನುದಾನ ಬಳಸಲು ಹಾಗೂ ಅವರ ದೈನಂದಿನ ಜೀವನ ನಡೆಸಲು ಅಗತ್ಯ ಪೂರೈಕೆಗೆ ಶಾಸಕರು, ಸಂಸದರು, ಕಾರ್ಪೋರೇಟರ್ ಒಟ್ಟಿಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಜೀವ, ಜೀವನ ಎರಡು ಬಹಳ ಮುಖ್ಯ, ಜೀವ ಉಳಿಬೇಕು. ಜೀವನ ನಡೆಯಬೇಕು  ಎಂದ ಸಚಿವ ಅಶೋಕ್ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಿದೆ.



ಈವರೆಗೆ ಒಟ್ಟು 5.53, 325 ಟೆಸ್ಟ್ ಕೋವಿಡ್ ಮಾಡಲಾಗಿದೆ. ಬೆಂಗಳೂರುನಗರದಲ್ಲಿ ಪ್ರತಿನಿತ್ಯ 4 ಸಾವಿರ ಇದ್ದದ್ದನ್ನು 7500 ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಇನ್ನೂ ಮುಂದೆ ಬೆಡ್ ಅಲಾಟ್ ಮೆಂಟ್ ಗಾಗಿಯೇ ಹಿರಿಯ ಐಎ ಎಸ್ ಅಧಿಕಾರಿ ತುಷಾರ್ ಗಿರಿನಾಥ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅವರು ಅದನ್ನು ನಿರ್ವಹಿಸಲಿದ್ದಾರೆ.

ಪೇಸೆಂಟ್  24 ಗಂಟೆಗಳಲ್ಲಿ 48 ಗಂಟೆಗಳಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ. ಅದನ್ನು ಆದಷ್ಟು ಬೇಗ ಪಾಸಿಟಿವ್ ಬಂದ 8 ಗಂಟೆಗಳಲ್ಲಿ ಹೋಟೆಲ್ ಅಥವಾ ಆಸ್ಪತ್ರೆಗೆ ಶೀಫ್ಟ್ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಅಲ್ಲದೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೂಡ ಸೋಂಕಿತರ ಹಾಗೂ ರೋಗ ಲಕ್ಷಣವಿರುವರ ಸಂಖ್ಯೆ ಡಿವೈಡ್ ಮಾಡಿ ಆಸ್ಪತ್ರೆಯಲ್ಲಿ 150 ಖಾಲಿ ಮಾಡಲಾಗಿದೆ.



ರೋಗ ಲಕ್ಷಣ ಇರುವವರು ಹಾಗೂ ಇಲ್ಲದವರನ್ನು ಪ್ರತ್ಯೇಕಿಸಲಾಗಿದೆ. ಒಂದು ತಿಂಗಳ ಅಂದಾಜು ಸಂಖ್ಯೆ ಮೇಲೆ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಗಳ ಪೂರ್ಣ ಚಿತ್ರಣ ದೊರೆಯಲಿದೆ. ವಾರದೊಳಗೆ 7300 ಬೆಡ್ ಲಭ್ಯವಾಗಲಿದೆ. ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು. ಶೇ 15ರಿಂದ 20 ಪ್ರತಿಷತ ಹೆಚ್ಚುವರಿ ಇಟ್ಟುಕೊಳ್ಳಲಾಗಿದೆ ಎಂದರು.

ಸರಕಾರಿ ಆಸ್ಪತ್ರೆಯಲ್ಲಿ ಈ ಸಮಸ್ಯೆಯಿಲ್ಲ. ಕೇವಲ ಖಾಸಗಿ ಆಸ್ಪತ್ರೆಗೆ ಮಾತ್ರ ಸಮಸ್ಯೆಗಳಿವೆ. ರೋಗಿಗೆ ಪಾಸಿಟಿವ್ ಬಗ್ಗೆ ತಿಳಿಸಿ ನಾವು ಕರೆದುಕೊಂಡು ಹೋಗುತ್ತೇವೆ. ಬೀದಿಗೆ ಬಂದು ನಿಲ್ಲಬಾರದು ಎಂದು ಮನವರಿಕೆ ಮಾಡಲಾಗಿದೆ ಎಂದರು.




ಬೆಂಗಳೂರು ಜನತೆ ಹಾಗೂ ರಾಜ್ಯದ ಜನತೆ ವೈರಸ್ ಬಗ್ಗೆ ಪ್ಯಾನಿಕ್ ಆಗುವುದು ಬೇಡ. ಕೋವಿಡ್ ಪಾಸಿಟಿವ್ ಅಂದ ತಕ್ಷಣ ಅವರನ್ನು ವಿಲನ್ ಮಾಡಬೇಡಿ.

ಪಕ್ಕದ ಮನೆಯವರು, ಎದುರು ಮನೆಯವರು ಅವರೊಂದಿಗೆ ಅಮಾನವೀಯವಾಗಿ ವರ್ತಿಸಬಾರದು. ಅವರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ ಆದರೆ ಟಾರ್ಚರ್ ಮಾಡಬೇಡಿ ಎಂದು ಮನವಿ ಮಾಡಿದರು.

 




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *