ರಾಜ್ಯ

ಸಣ್ಣ ನೀರಾವರಿ ಇಲಾಖೆಯ ದೊಡ್ಡ ಯಡವಟ್ಟು ಬಯಲು…..!

ಧಾರವಾಡ prajakiran.com ; ಸಣ್ಣ ನೀರಾವರಿ ಇಲಾಖೆಯ ಕೆರೆ ಹಾಗೂ ವಡ್ಡು ನಿರ್ಮಾಣ ಕಾಮಗಾರಿಯಲ್ಲಿ ತನ್ನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಉಳಿಸಿಕೊಳ್ಳುವುದಕ್ಕಾಗಿ ಗದಗ ಮೂಲದ ರೈತನೋರ್ವ ಧಾರವಾಡದ ಸಣ್ಣ ನೀರಾವರಿ ಕಚೇರಿ ಎದುರು ಏಕಾಂಗಿಯಾಗಿ ಧರಣಿ ಕುಳಿತು ಗಮನ ಸೆಳೆದರು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಾಮ್ರಗುಂಡಿ ಗ್ರಾಮದ ಯಲ್ಲಪ್ಪ ಯಮನಪ್ಪ ಉಪ್ಪಾರ ಎಂಬಾತನೇ ಹೀಗೆ ಏಕಾಂಗಿಯಾಗಿ ಧರಣಿ ಕುಳಿತುಕೊಂಡಿರೋ ರೈತ.

ತಾಮಗ್ರಗುಂಡಿ ಗ್ರಾಮದಲ್ಲಿರೋ ಈತನ ಜಮೀನಿನ ಪೈಕಿ ಈಗಾಗಲೇ ಒಂದಷ್ಟು ಜಮೀನು ಸ್ವಾಧೀನಪಡಿಸಿಕೊಂಡಿರೋ ಸಣ್ಣ ನೀರಾವರಿ ಇಲಾಖೆ ಅಲ್ಲಿ ಕೆಲವೊಂದು ಯೋಜನೆಗಳ ಕಾಮಗಾರಿಯನ್ನೂ ಮಾಡಿದೆ.

ಆದ್ರೆ ಇಲ್ಲಿ ಕೆರೆಯ ವಡ್ಡು ನಿರ್ಮಿಸುವ ವೇಳೆ ವಡ್ಡಿನ ಮಣ್ಣೆಲ್ಲವನ್ನೂ ಈತನ ಉಳಿದ 3 ಎಕರೆ 30 ಗುಂಟೆ ಜಾಗದಲ್ಲಿಯೇ ತಂದು ಹಾಕಿದ್ದು, ಕೃಷಿಯನ್ನೂ ಮಾಡಲಾಗದಂತೆ ಕಂಗಲಾಗಿದ್ದಾನೆ.

ಹೀಗಾಗಿ ಇಲಾಖೆಯಿಂದಲೇ ಅಕ್ರಮವಾಗಿ ಒತ್ತುವರಿ ಆಗಿರೋ ನನ್ನ ಜಮೀನನನ್ನು ನನಗೆ ಬಿಟ್ಟುಕೊಡಬೇಕು.

ಇಲ್ಲವೇ ಜಮೀನು ಅಧೀಕೃತವಾಗಿ ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಣ್ಣ ನೀರಾವರಿ ಇಲಾಖೆಯ ಎದುರು ಎಕಾಂಗಿ ಧರಣಿ ಕುಳಿತು ಬಿಸಿ ತಾಕಿಸಿದ ರೈತ.

ಈಗಾಗಲೇ ಈ ಹಿಂದೆಯೂ ಸಹ ಇದೇ ರೀತಿ ರೈತ ಯಲ್ಲಪ್ಪ ಹೀಗಿಯೇ ಏಕಾಂಗಿಯಾಗಿ ಧರಣಿ ಕುಳಿತುಕೊಂಡಾಗ ಸ್ಥಳಕ್ಕೆ ಬಂದು ಸರ್ವೆ ಮಾಡೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.

ಆದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಬರದಿರುವ ಕಾರಣ, ಪುನಃ ಏಕಾಂಗಿ ಧರಣಿ ಆರಂಭಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ದೊಡ್ಡ ಯಡವಟ್ಟು ಬಯಲಾಗಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಅನ್ನದಾತನಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾರೆಯೇ ಇಲ್ಲವೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *