ರಾಜ್ಯ

ರಾಜ್ಯದಲ್ಲಿ 10 ಸಾವಿರ ಗಡಿ ದಾಟಿದ ಕರೋನಾ ಸೋಂಕಿತರು : ಬುಧವಾರ 14 ಸಾವು, 397 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 14 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 397 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  10,118ಕ್ಕೆ ಏರಿಕೆಯಾಗಿದೆ.

397 ಸೋಂಕಿತರಲ್ಲಿ, 75 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ.  8  ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.



ಇಂದು ರಾಜ್ಯದಲ್ಲಿ149 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 6151 ಜನ ಗುಣಮುಖರಾಗಿದ್ದು,  3799 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  118 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಬುಧವಾರವೂ 14 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 164ಕ್ಕೆ ಏರಿಕೆಯಾದಂತಾಗಿದೆ.

ಬುಧವಾರ ಪತ್ತೆಯಾದ 397 ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ನಿನ್ನೇ   126 ಸೋಂಕಿತರನ್ನು ಕಂಡಿದ್ದ ಬೆಂಗಳೂರು ಇಂದು 173 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.



 ಇನ್ನೂಳಿದಂತೆ   ಬಳ್ಳಾರಿ 34, ಕಲಬುರಗಿ ಹಾಗೂ ರಾಮನಗರದಲ್ಲಿ ತಲಾ 22, ಉಡುಪಿ 14, ಯಾದಗಿರಿ 13, ದಕ್ಷಿಣ ಕನ್ನಡ ಹಾಗೂ ಧಾರವಾಡದಲ್ಲಿ ತಲಾ 12, ಕೊಪ್ಪಳ 11, ರಾಯಚೂರು, ಉತ್ತರಕನ್ನಡದಲ್ಲಿ ತಲಾ 9, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದಲ್ಲಿತಲಾ 8, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 7, ಗದಗ ಹಾಗೂ ಕೋಲಾರದಲ್ಲಿ ತಲಾ6, ಬೀದರ 5, ವಿಜಯಪುರ 4, ಶಿವಮೊಗ್ಗ 3, ಮಂಡ್ಯ, ಚಿತ್ರದುರ್ಗ, ಚಾಮರಾಜನಗರ, ಕೊಡಗು ತಲಾ 2, ಬೆಳಗಾವಿ, ಹಾಸನ, ತುಮಕೂರು, ಚಿಕ್ಕಮಗಳೂರು ತಲಾ ಒಂದು ಹೀಗೆ ಒಟ್ಟು 28 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 ಸಾವಿನ ರಣಕೇಕೆ ರಾಜ್ಯದಲ್ಲಿ ಬುಧವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 5 ಜನ ಸಾವನ್ನಪ್ಪಿದ್ದರೆ,  ಬಳ್ಳಾರಿ ಜಿಲ್ಲೆಯಲ್ಲಿ 4, ಕಲಬರುಗಿ ಹಾಗೂ ರಾಮನಗರದಲ್ಲಿ ತಲಾ ಇಬ್ಬರು, ತುಮಕೂರುದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.  

ಬೆಂಗಳೂರಿನ ಪಿ-7606ನೇ ಸೋಂಕಿತ 59 ವರ್ಷದ ಮಹಿಳೆ, ಪಿ- 7816 ಸೊಂಕಿತ  54 ವರ್ಷದ ಮಹಿಳೆ, ಪಿ-  9961 ಸೋಂಕಿತ 70 ವರ್ಷದ ವೃದ್ದೆ, ಪಿ- 9962 ಸೊಂಕಿತ  50 ವರ್ಷದ ಮಹಿಳೆ, ಪಿ- 9966 ಸೊಂಕಿತ  68 ವರ್ಷದ ವೃದ್ದ, ಬಳ್ಳಾರಿ ಜಿಲ್ಲೆಯ ಪಿ-9071ನ ಸೋಂಕಿತ 59 ವರ್ಷದ ವ್ಯಕ್ತಿ, ಪಿ-9665ನ ಸೋಂಕಿತ 73 ವರ್ಷದ ವೃದ್ದ, ಪಿ-9860ನ ಸೋಂಕಿತ 43 ವರ್ಷದ ಪುರುಷ, ಪಿ-9878 ನ ಸೋಂಕಿತ 28 ವರ್ಷದ ಯುವಕ, ರಾಮನಗರದ ಪಿ-9925 ನ ಸೋಂಕಿತ 53 ವರ್ಷದ ವ್ಯಕ್ತಿ, ಪಿ-9926 ನ ಸೋಂಕಿತ 60 ವರ್ಷದ ವೃದ್ದ, ಕಲಬರುಗಿಯ ಪಿ-9844 ನ ಸೋಂಕಿತ 78 ವರ್ಷದ ವೃದ್ದ, ಪಿ-9845 ನ ಸೋಂಕಿತ 55 ವರ್ಷದ ಪುರುಷ, ತುಮಕೂರಿನ ಪಿ-9900 ನ ಸೋಂಕಿತ 56 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *