ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರ ಮಧ್ಯೆಯೂ ಎರಡು ದಿನಗಳಲ್ಲಿ ಕೋವಿಡ್ ನಿಂದ ಗುಣಮುಖರಾಗಿರುವ 9 ಜನರನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-6256 (63 ವರ್ಷದ ವೃದ್ದ), ಪಿ-7382 ( 57 ವರ್ಷದ ಪುರುಷ), ಪಿ-6537 (19 ವರ್ಷ, ಯುವಕ ), ಪಿ-6538 ( 44 ವರ್ಷದ ಮಹಿಳೆ ), ಪಿ.6539 ( 46 ವರ್ಷದ ಪುರುಷ ), ಪಿ-7541 ( 30 ವರ್ಷ, ಮಹಿಳೆ), ಪಿ-6523 ( 27 ವರ್ಷದ ಯುವಕ) ಈ ಏಳು ಜನರು ಜೂನ್ 23 ರಂದು ರಾತ್ರಿ ಬಿಡುಗಡೆಯಾಗಿದ್ದಾರೆ.
ಪಿ-7540 ( 5 ವರ್ಷದ ಬಾಲಕಿ), ಪಿ.7543 ( 4 ವರ್ಷದ ಬಾಲಕ) ಇವರಿಬ್ಬರು ಬುಧವಾಡ ಜೂನ್ 24 ರಂದು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 99 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.