ರಾಜ್ಯ

ಕೋವಿಡ್ ಸೊಂಕು ನಿಯಂತ್ರಣ : ರಾಜ್ಯ ಸರ್ಕಾರ ಹೊರಡಿಸಿರುವ ಮುಂಜಾಗೃತ ಕ್ರಮ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ

ಧಾರವಾಡ prajakiran. com ಜ.06: ರಾಜ್ಯ ಕಾರ್ಯಕಾರಿ ಸಮಿತಿಯು ವಿವಿಧ ದಿನಾಂಕಗಳಂದು ಹೊರಡಿಸಿದ್ದ ಆದೇಶಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಮುಂದುವರೆಸಿ, ಜನೆವರಿ 5, 2022ರವರೆಗೆ ವಿಸ್ತರಿಸಿತ್ತು.

ದೇಶಾದ್ಯಂತ ಮತ್ತು ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ‘‘ಓಮಿಕ್ರೋನ್’’ ವೈರಾಣು ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಡಿಸೆಂಬರ್ 03, 2021 ಮತ್ತು ಡಿಸೆಂಬರ್ 26, 2021ರ ಆದೇಶದಲ್ಲಿ ಪೂರ್ವಭಾವಿಯಾಗಿ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ್ದು, ಇವು ಜನೆವರಿ 07, 2022ರ ವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರದ ಆದೇಶದೊಂದಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿ, ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿನ ಕೋವಿಡ್-19 ಪರಿಸ್ಥತಿಯನ್ನು ದಿನಾಂಕ 04.01.2022 ರಂದು ಮತ್ತೊಮ್ಮೆ ಪರಿಶೀಲಿಸಲಾಗಿದ್ದು.

“ಓಮಿಕ್ರೋನ್” ರೂಪಾಂತರಿಯ ಕಾರಣದಿಂದಾಗಿ ಕರ್ನಾಟಕ ರಾಜ್ಯವು ರೋಗಿಗಳ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿರುವುದು ಕಂಡುಬಂದಿರುತ್ತದೆ.

ಕೇವಲ 3 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆಯು ದ್ವಿಗುಣಗೊಂಡಿದ್ದು ಇರುತ್ತದೆ.

ಪ್ರಸ್ತುತ, ರಾಜ್ಯದಲ್ಲಿ ಕೋವಿಡ್-19 ವೈರಾಣು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತು ಕೋವಿಡ್-19 ಸಮುಚ್ಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ಕಾರ್ಯತಂತ್ರಗಳ ಅನುμÁ್ಠನದೊಂದಿಗೆ ಇನ್ನು ಹೆಚ್ಚಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಂತೆ ತಾಂತ್ರಿಕ ಸಲಹಾ ಸಮಿತಿಯು ಸೂಚಿಸಿರುತ್ತದೆ.

ಆದ್ದರಿಂದ, ವಿಪತ್ತು ನಿರ್ವಹಣಾ ಅಧಿನಿಮಯ, 2005ರ ಕಲಂ 26 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಧಾರವಾಡ ಜಿಲ್ಲೆ ವಿಪತ್ತು ನಿರ್ವಹಣೆ ಸಮಿತಿಯ ಅಧ್ಯಕ್ಷನಾದ ಈ ಕೆಳಗೆ ಸಹಿ ಮಾಡಿರುವ ನಾನು, ಇದೇ ಸಮ ಸಂಖ್ಯೆಯ ಆದೇಶ ದಿನಾಂಕ 03.07.2021ರಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ಆದೇಶಗಳಲ್ಲಿ ಹಾಗೂ ಇದೇ ಸಮ ಸಂಖ್ಯೆಯ ಆದೇಶ ದಿನಾಂಕ 03.12.2021 ಮತ್ತು 26.12.2021ರ ಆದೇಶಗಳಲ್ಲಿ ಹೊರಡಿಸಲಾದ ಮಾರ್ಗಸೂಚಿಗಳೊಂದಿಗೆ ಈ ಕೆಳಕಂಡ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ದಿನಾಂಕ 05.01.2022ರ ರಾತ್ರಿ 10.00 ಗಂಟೆಯಿಂದ ಜಾರಿಗೆ ಬರುವಂತೆ ಹಾಗೂ ದಿನಾಂಕ 19.01.2022ರ ಬೆಳಿಗ್ಗೆ 05.00 ಗಂಟೆಯವರೆಗೆ ಅಸ್ತಿತ್ವದಲ್ಲಿರುವಂತೆ ಜಾರಿಗೊಳಿಸಿ ಆದೇಶಿಸಿರುತ್ತೇನೆ.

ಈ ಮಾರ್ಗಸೂಚಿಗಳನ್ನು ಪೆÇಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ, ಹುಬ್ಬಳ್ಳಿ, ಜಿಲ್ಲಾ ಪೊಲೀಸ್ , ಧಾರವಾಡ ಜಿಲ್ಲೆ, ಧಾರವಾಡ, ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಇತರೆ ಇಲಾಖಾ ಮುಖ್ಯಸ್ಥರು, ಪ್ರಾಧಿಕಾರಗಳು ಅನುಷ್ಠಾನ ಗೊಳಿಸಬೇಕು.

ಮಾರ್ಗಸೂಚಿಗಳು:
1. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಸಾರ ರಾಜ್ಯಾದ್ಯಂತ ರಾತ್ರಿ 10.00 ಗಂಟೆಯಿಂದ ಮರುದಿನ ಬೆಳಿಗ್ಗೆ 05.00 ಗಂಟೆಯವರೆಗೆ ‘ರಾತ್ರಿ ಕಫ್ರ್ಯೂ’ ವನ್ನು ಮುಂದುವರೆಸಲಾಗಿದೆ.

2. ಈ ಅವಧಿಯಲ್ಲಿ ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸುವುದು.

3. ಇದರೊಂದಿಗೆ ಲಗತ್ತಿಸಿರುವ ಮಾರ್ಗಸೂಚಿಗಳ ಅನುಸಾರ ರಾಜ್ಯಾದ್ಯಂತ ಶುಕ್ರವಾರ ರಾತ್ರಿ 10.00 ಗಂಟೆಯಿಂದ ಸೋಮವಾರ ಬೆಳಿಗ್ಗೆ 05.00 ಗಂಟೆಯವರೆಗೆ ‘ವಾರಾಂತ್ಯದ ಕಫ್ರ್ಯೂ’ವನ್ನು ಜಾರಿಗೊಳಿಸಲಾಗಿದೆ.

4. ವಾರಾಂತ್ಯದ ಕಫ್ರ್ಯೂ ಅವಧಿಯಲ್ಲಿ ತುರ್ತು ಕಾರ್ಯಗಳಿಗೆ ಜನರ ಅಗತ್ಯತೆಗಳನ್ನು ಪೂರೈಸಲು ಬಿ.ಆರ್.ಟಿ.ಎಸ್. ಒಳಗೊಂಡಂತೆ ಸಾರ್ವಜನಿಕ ಸಾರಿಗೆಗಳು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರ, ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನಗಳನುಸಾರ ಕಾರ್ಯಾಚರಿಸುವುದು.

5.ಪಬ್‍ಗಳು, ಕ್ಲಬಗಳು, ರೆಸ್ಟೋರೆಂಟ್ಸಗಳು, ಬಾರಗಳು, ಹೋಟೆಲಗಳು, ಹೋಟೆಲುಗಳ ಊಟದ ಸ್ಥಳಗಳು ಇತ್ಯಾದಿಗಳು ಕೋವಿಡ್ ಸಮುಚ್ಚಿತ ವರ್ತನೆಗಳನ್ನು (CAB) ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಆಸನ ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು ಮತ್ತು ಇಂತಹ ಸ್ಥಳಗಳಲ್ಲಿ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವುದು.

6.ಸಿನಿಮಾ ಹಾಲಗಳು, ಮಲ್ಟಿಪ್ಲೇಕ್ಸ್, ಸಿನಿಮಾ ಮಂದಿರಗಳು, ರಂಗ ಮಂದಿರಗಳು, ಸಭಾ ಭವನಗಳು ಕೋವಿಡ್ ಸಮುಚ್ಚಿತ ವರ್ತನೆಗಳನ್ನು (CAB) ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಆಸನ ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು ಮತ್ತು ಇಂತಹ ಸ್ಥಳಗಳಲ್ಲಿ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವುದು.

7.ಕೋವಿಡ್-19 ಸಮುಚ್ಚಿತ ವರ್ತನೆಗಳನ್ನು (CAB) ಹಾಗೂ ಅಸ್ತಿತ್ವದಲ್ಲಿರುವ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಹೊರಾಂಗಣಗಳಲ್ಲಿ 200 ಜನರು ಮೀರದಂತೆ ಹಾಗೂ ಒಳಾಂಗಣಗಳಲ್ಲಿ 100 ಜನರು ಮೀರದಂತೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಮತಿಸಿದೆ.

8.ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಸಮಯದಲ್ಲಿ ಪೂರ್ಣಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವ 50 ಜನರ ಪ್ರವೇಶಕ್ಕೆ ಮಾತ್ರ ಅನುಮತಿ ಇರುತ್ತದೆ.

9.ಮಾಲಗಳು, ವಾಣಿಜ್ಯ ಸಂರ್ಕೀಣಗಳು, ಎಲ್ಲಾ ಏಕ ಕಟ್ಟಡದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸ್ಥಳಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸತಕ್ಕದ್ದು.

10.ಈಜು ಕೊಳಗಳು ಮತ್ತು ಜಿಮ್‍ಗಳು ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸತಕ್ಕದ್ದು. ಆದರೆ, ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವುದು.

11.ಕ್ರೀಡಾ ಸಂರ್ಕೀಣಗಳು ಮತ್ತು ಆಟದ ಮೈದಾನಗಳು ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು.

12.ಎಲ್ಲಾ ರೀತಿಯ ರ್ಯಾಲಿ (Rally) ಗಳನ್ನು ಧರಣಿಗಳನ್ನು ಮತ್ತು ಮುಷ್ಕರಗಳನ್ನು ನಿಬರ್ಂಧಿಸಿದೆ.

ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಭಾರತ ದಂಡ ಸಂಹಿತೆ 188ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ, 2005ರ ಸೆಕ್ಷನ್ 51 ರಿಂದ 60ರನ್ವಯ ಕಾನೂನು ಕ್ರಮಕ್ಕೆ ಒಳಪಡುತ್ತಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *