ರಾಜ್ಯ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಬೀದಿ ಬದಿ ಬಡ ವ್ಯಾಪಾರಸ್ಥರ ಮೇಲೆ ದೌಜನ್ಯ

*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ ಒಂದರಿಂದ ಬೀದಿ ಬದಿ ಬಡ ವ್ಯಾಪಾರಸ್ಥರ ಮೇಲೆ ದೌಜನ್ಯ*

*ದುಡಿದು ತಿನ್ನುವವರ ಹೊಟ್ಟೆ ಮೇಲೆ ಹೊಡೆದರೆ ಹೇಗೆ ಸ್ವಾಮಿ*

*ಬಡವರ ಪರ ವಕಾಲತ್ತು ವಹಿಸಿದರೆ ಕತ್ಯವ್ಯಕ್ಕೆ ಅಡ್ಡಿ ಕೇಸ್ ಹಾಕುವುದಾಗಿ ವಲಯ ಆಯುಕ್ತರ ಬೆದರಿಕೆ*

*ಜಾಣಕುರುಡು ವಹಿಸಿದ ಜನಪ್ರತಿನಿಧಿಗಳಿಗೆ ಬಡವರ ಹಿಡಿಶಾಪ*

ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ ಒಂದರಿಂದ ಗುರುವಾರ ಸಂಜೆ ವಲಯ ಆಯಕ್ತರ ನೇತೃತ್ವದಲ್ಲಿ ದಿಢೀರ್ ಆಗಿ ಮಿಂಚಿನ ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಬಡ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಮನಬಂದಂತೆ ದೌರ್ಬನ್ಯ ಎಸಗಲಾಯಿತು.

ಅವರ ಜೀವನ ನಡೆಯುವುದೇ ಇದರ ಮೇಲೆ. ಅಂತಹದರಲ್ಲಿ ಅವರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರೆ, ನೀವ್ಯಾರು, ನಿಮಗೇಕೆ ಇದು.

ಒಂದು ವೇಳೆ ಅಡ್ಡಬಂದರೆ ಕತ್ಯವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಿಸುವುದಾಗಿ ವಲಯ ಆಯುಕ್ತರು ಬೆದರಿಕೆ ಬೇರೆ ಹಾಕುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಬಡ ವ್ಯಾಪಾರಸ್ಥರ ಪ್ರಶ್ನೆಯಾಗಿದೆ.

ಅಲ್ಲದೆ, ಈ ಬಗ್ಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಹಿರೇಮಠ ಅವರ ಗಮನಕ್ಕೆ ತಂದರೆ ಅವರು ಸ್ಥಳೀಯ ಜನರು ದೂರು ನೀಡಿದ್ದಾರೆ.

ಹೀಗಾಗಿ ನಾವು ಇದಕ್ಕೆ ಸಹಕರಿಸಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಹಾಗಾದರೆ ಬಡವರ ಗೋಳು ಕೇಳುವವರು ಎಂಬ ಯಕ್ಷ ಪ್ರಶ್ನೆ ಎದ್ದಿದೆ.

ಈ ಬಗ್ಗೆ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರ ಗಮನಕ್ಕೆ ತರಲು ಯತ್ನಿಸಲಾಯಿತು. ಅವರು ವಲಯ ಆಯುಕ್ತರು ಜೊತೆಗೆ ಮಾತನಾಡುವುದಾಗಿ ಹೇಳಿದರು.

ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಚಿವರು ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲೆಯ ಸಂಸದರು ಆಗಿರುವ ಪ್ರಹ್ಲಾದ ಜೋಶಿ ಅವರು ಈ ಬಗ್ಗೆ ಗಮನ ಹರಿಸಿ ಬಡವರ ಕಣ್ಣೀರು ಒರೆಸಬೇಕಾಗಿದೆ.

ಬೀದಿ ಬದಿ ವ್ಯಾಪಾರಸ್ಥರ ಜೀವನ ಬೀದಿಗೆ ಬೀಳಬಾರದು ಎಂಬುದಷ್ಟೆ ಪ್ರಜಾಕಿರಣ.ಕಾಮ್ ಆಶಯ.

ಬೀದಿ ಬದಿ ವ್ಯಾಪಾರಸ್ಥರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಈ‌ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸಕರಾತ್ಮಕವಾಗಿ ಸ್ಪಂದಿಸುವುದೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *