ರಾಜ್ಯ

ಧಾರವಾಡದ ಜನತಾ ಶಿಕ್ಷಣ ಸಮಿತಿಯಲ್ಲಿ ಫೆ‌. 22ರಿಂದ 28ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ

ಧಾರವಾಡ ಪ್ರಜಾಕಿರಣ. ಕಾಮ್ : ಮಹಾರಾಷ್ಟ್ರ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯದ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ಒಟ್ಟು 150 ವಿದ್ಯಾರ್ಥಿಗಳು ಧಾರವಾಡದ ಜನತಾ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಫೆ. 22ರಿಂದ 28ರವರೆಗೆ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಎಸ್ ಎಸ್ ಕಾರ್ಯದರ್ಶಿ ಅಜಿತ್ ಪ್ರಸಾದ ತಿಳಿಸಿದರು.

ಅವರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ವಿವರ ನೀಡಿದರು.

ದೇಶದ 100 ವರ್ಷಗಳ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಈಗಿನಿಂದಲೇ ಕೇಂದ್ರ ಸರ್ಕಾರ ವಿವಿಧ ಕಾರ್ಯಕ್ರಮ ಸಂಘಟಿಸುತ್ತಿದೆ ಎಂದರು.

2047ರ ಹೊತ್ತಿಗೆ ದೇಶ ಬಲಿಷ್ಠ ಮಾಡಬೇಕು ಎಂಬ ಸದುದ್ದೇಶದಿಂದ ಇಂತಹ ಶಿಬಿರ ಮಾಡಲಾಗುತ್ತಿದೆ.

7 ದಿನಗಳ ಕಾಲ ಜನತಾ ಶಿಕ್ಷಣ ಸಮಿತಿಯ ಉತ್ಸವ ಸಭಾ ಭವನದಲ್ಲಿ ಈ ಶಿಬಿರ ನಡೆಯಲಿದೆ ಎಂದರು.

ಇದನ್ನು ರೈತ ಮಹಿಳೆ ಡಾ. ದ್ರಾಕ್ಷಾಯಣಿ ರಾಮನಗೌಡರ
ಹಾಗೂ ನಿವೃತ್ತ ಯೋಧ ಕರ್ನಲ್ ವಿವೇಕಾನಂದ ಅಳಗವಾಡಿ ಫೆ. 22ರಂದು ಉದ್ಘಾಟನೆ ಮಾಡಲಿದ್ದು, ಈ ಶಿಬಿದರಲ್ಲಿ
ಕಾರ್ಗೀಲ್ ಯೋಧರ ಸ್ಮರಣೆ, ಸ್ವಚ್ಚತಾ ಕಾರ್ಯಕ್ರಮ, ಸಾಮರಸ್ಯ ನಡಿಗೆ ಸಾಂಸ್ಕೃತಿಕ ವಿನಿಮಯ ನಡೆಯಲಿದೆ‌ ಎಂದರು.

ಫೆ. 28ರಂದು ಯಶಸ್ವಿ ರೈತ ಮಹಿಳೆ ಕವಿತಾ ಮಿಶ್ರಾ ಉಪನ್ಯಾಸ, ಸಿರಿಧಾನ್ಯ, ಯೋಗ, ಧಾನ್ಯ, ಕ್ರೀಡೆ,
ಆಹಾರ ಸಂಸ್ಕೃತಿ ಬಗ್ಗೆ ಚರ್ಚಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾವೀರ ಉಪಾಧ್ಯಾಯ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *