ರಾಜ್ಯ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮರುಪರಿಶೀಲನೆ ಮಾಡಿ ಎಂದ ಸಾರಿಗೆ ನೌಕರರ ಕೂಟ

ಧಾರವಾಡ prajakiran.com : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವಿಷಯದಲ್ಲಿ ನ್ಯಾಯಾಲಯವು ವಾಸ್ತವ ಸ್ಥಿತಿಯನ್ನು ಅರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮರುಪರಿಶೀಲನೆ ಮಾಡಬೇಕು ಎಂದು ನೌಕರರ ಕೂಟದಿಂದ ಅರ್ಜಿ ಸಲ್ಲಿಸಲಾಗುವುದು ಎಂದು ವಾಕರಾರ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ
ಪಿ.ಎಚ್. ನೀರಲಕೇರಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಐಎಲ್ ಸಂಬಂಧಿಸಿದ ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ. ನ್ಯಾಯಾಂಗ ನಮ್ಮ ನೌಕರರ ಬೇಡಿಕೆಯನ್ನು ನ್ಯಾಯಾಲಯ ಪರಿಗಣಿಸಿಲ್ಲ.

ಆದರೆ ಕೋವಿಡ್ ಸಂದರ್ಭದಲ್ಲಿ ಹೋರಾಟ ಸರಿಯಲ್ಲ ಎಂದು ಹೇಳಿದೆ.
ಹೀಗಾಗಿ ನ್ಯಾಯಾಲಯಕ್ಕೆ ಸರಕಾರ ಸರಿಯಾಗಿ ಮಾಹಿತಿಯನ್ನು ನೀಡಿಲ್ಲ.

ನೌಕರರ ಹಿತಾಸಕ್ತಿಗಳನ್ನು ಕಡೆಗಣಿಸಿ ದಬ್ಬಾಳಿಕೆ, ಕಿರುಕುಳವನ್ಬು ಹಿಂಸೆ ಪರಿಗಣಿಸಬೇಕಾಗಿತ್ತು. ಸಂಸ್ಥೆಯು ನಾಲ್ಕು ಸಾವಿರ ನೌಕರರ ಅಮಾನತು ಮಾಡಿದೆ.

8000 ನೌಕರರ ವರ್ಗಾವಣೆ ಮಾಡುವ ಮೂಲಕ ಸೇಡಿನ‌ರಾಜಕಾರಣ ಮಾಡಿದೆ. ಕೆಲವರು 964 ನೌಕರರು ತರಬೇತಿ ಅವಧಿಯಲ್ಲಿ ಅಮಾನತು ಸರಿಯಲ್ಲ.

ಅನೇಕ‌ ಮಹಿಳಾ ನೌಕರರು ಬಾಣಂತಿಯರು, ಗರ್ಭಾವ್ಯಸ್ಥೆಯಲ್ಲಿದ್ದಾರೆ. ನ್ಯಾಯಾಲಯ ಆದೇಶವನ್ನು ಪರಿಶೀಲನೆ ನಡೆಸಬೇಕು ಎಂದು ಅರ್ಜಿ ಸಲ್ಲಿಸುತ್ತೇವೆ

ಶಾಸಕರು, ಸಂಸದರು ಎಏನು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಭಾವನೆ, ಹೃದಯದಿಂದ ಸ್ಪಂದಿಸಬೇಕು. ಇಲ್ಲದಿದ್ದರೆ ಸತ್ತಂತೆ ಆಗುತ್ತದೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಮೌನವಹಿಸಿದ್ದಾರೆ. ಇತ್ತ ಸರಕಾರ ದಾರಿ ತಪ್ಪಿದೆ. ಇವರು ಜಾಣ ಕುರುಡುತನ ತೋರಿಸುವುದು ಸರಿಯಲ್ಲ.

ಕೋವಿಡ್ ನಿಯಮಾವಳಿ ಪಾಲಿಸುತ್ತ ಹೋರಾಟ ನಡೆಸಲಾಗುವುದು.
ಆದ್ದರಿಂದ ಸಕಾರಾತ್ಮಕವಾಗಿ ಸ್ಪಂದಿಸಿ ಹೈಕೋರ್ಟ್ ಆದೇಶದ ಪ್ರತಿ ಸಿಗುವರೆಗೆ ಮುಷ್ಕರ ಮುಂದುವರೆಯಲಿದೆ ಎಂದು ನೀರಲಕೇರಿ ತಿಳಿಸಿದರು.

ನ್ಯಾಯಾಂಗ ಮಾಹಿತಿ ಕೊರತೆಯಿಂದ ತಪ್ಪು ಆದೇಶ ಹೊರಡಿಸಬಾರದು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು.

ನೌಕರರ ಮೇಲೆ ಕೈಗೊಂಡ ಕ್ರಮ ಕುರಿತು ಸರಕಾರದ ಪರ ವಕೀಲರು ಸರಿಯಾದ ವರದಿ ನೀಡಿಲ್ಲ. ಕಾರ್ಮಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಮನವಿ ಮಾಡಿದರು.

ಹೋರಾಟಗಾರರಾದ ಶ್ರೀಶೈಲಗೌಡ ಕಮತರ, ಸಿದ್ದಣ್ಣ ಕಂಬಾರ, ಲಕ್ಷ್ಮಣ ಬಕ್ಕಾಯಿ, ಪುಂಡಲೀಕ ಕೋಲಕರ ಸುದ್ದಿಗೋಷ್ಠಿಯಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *