ಮೈಸೂರು prajakiran.com : ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಏಪ್ರಿಲ್ 25 ರಂದು ನಿಗದಿಯಾಗಿದ್ದ, ಕೆ-ಸೆಟ್ ಪರೀಕ್ಷೆಯನ್ನ ಮೈಸೂರು ವಿಶ್ವ ವಿದ್ಯಾಲಯ ಮತ್ತೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.
ಕೊರೋನಾ ಪ್ರಕರಣ ಹೆಚ್ಚಳವಾಗುವುದನ್ನು ತಡೆಗಟ್ಟಲು ನೈಟ್ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಕರ್ಫ್ಯೂವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಹೀಗಾಗಿ ಏಪ್ರಿಲ್ 25 ಭಾನುವಾರ ನಿಗದಿಯಾಗಿದ್ದ ಕೆ-ಸೆಟ್ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿದೆ ಎಂದು ಮೈಸೂರು ವಿವಿ ಸಂಯೋಜನಾಧಿಕಾರಿ ಪ್ರೊ. ಹೆಚ್. ರಾಜಶೇಖರ್ ನೋಟೀಸ್ ಜಾರಿ ಮಾಡಿದ್ದಾರೆ.